ಪುಟ:ಅರಮನೆ.pdf/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧೨ ಅರಮನೆ ಹುಳೇಬೀಡಿನ ರಾಜ ಕೆಂಚಪ್ಪನಾಯಕ, ಡಾಣಾಪ್ರದ ರಾಜ ಚಿನ್ನು ಬೊಮ್ಮಯ್ಯನಾಯಕ, ಯಿವರೇ ಮೊದಲಾದ ಕುಂತಳ ಪ್ರಾಂತದ ಗಡಿ ಅಂಚಿನಲ್ಲಿರುವ ಅರಕೆರೆ ಸೀಮೇಯ ನಾಯಕರು ಕಾಲಾನುಕಾಲಕ್ಕೆ ಕುಂಪಣಿ ಸರಕಾರದಿಂದ ಸ್ಥಾನಭ್ರಷ್ಟರಾಗಿದ್ದಂಥವರು, ನಿನ್ನೆಮೊನ್ನೆವರೆಗೆ ತಮ್ಮ ತಮ್ಮ ಪಾಳೆಪಟ್ಟುಗಳನ್ನು ಪರಿಪಾಲಿಕೆಮಾಡುತಲಿದ್ದಂಥವರು, ದತ್ತು ಯಂಬ ಗುನೇವಿಗೆ ವಳಗಾಗಿದ್ದಂಥವರು, ಸರಕಾರದಿಂದ ಆರೈಕ ಸಾಯ, ಸಯ್ತಿಕ ಸಾಯ ಪಡೆದಿದ್ದಂಥವರು, ಮತ್ತಿನ್ಯಾವುದೋ ಕಾರಣಗಳಿಗಾಗಿ ತಮ್ಮ ತಮ್ಮ ಅರಸೊತ್ತಿಗೆಗಳನ್ನು ಕಳಕೊಂಡು ಅಡವಿ ಪಾಲಾಗಿದ್ದಂಥವರು, ಕುಂಪಣಿ ಸರಕಾರದ ಬಲೆಗೆ ಬೀಳಬ್ಯಾಡಿರೆಂದು ಪ್ರಚಾರ ಮಾಡುತ ಮೂರಿಂದ ಮೂರಿಗೆ ತಿರುಗುತ್ತಿದ್ದಂಥವರು, ಸದರಿ ಪಟ್ಟಣಕ್ಕೆ ಬಂದು ಪುವ್ವಲ ರಾಜಪರಿವಾರದವರ ದುಸ್ಥಿತಿ ಕಂಡು ಮಮ್ಮಲನ ಮರುಗಿದಂಥವರು. ಸಾಂಬವಿಯು ತಮಗ ಅಭಯ ಹಸ್ತ ಚಾಚಿಯಾಳೆಂದು ಅಲ್ಲೊಬ್ಬರು ಯಿಲ್ಲೊಬ್ಬರಂತೆ ನಿಂತಿದ್ದಂಥವರು, ಅಂಜಿಕೆಯಿಂದ ನೋಡುತ್ತಾ ಅವರ ತಾಯಿಯತ್ತ..... ತರುವಾಂರೂ ತಾಯಿ ಅಲ್ಲಿಂದ ಕದಲಲಕ ಹಿಂದುಮುಂದು ನೋಡುತ್ತಾಳೆ. ಅತ್ತ ಕದಿರಿ ಸೀಮೆಯೊಳಗಿದ್ದ ಅಗ್ರಹಾರಗಳ ಕರಕತೆಯನ್ನು ಸಯ್ತು ಮಾಡಲಕೆಂದು ಮನೋನು ಬ್ರಹ್ಮಹತ್ಯೆ ಮತ್ತು ಸಂಭವಾಮಿ ಯುಗೇ ಯುಗೇ ಮುಂತಾದ ಯಿಷಯಗಳ ಬಗ್ಗೆ ಚಚ್ಚಿಸಲು ನವುಕರಿ ಶಾಹಿಯ ಧರಪಂಡಿತರ ಸಭೆ ಕರೆದಿದ್ದನಷ್ಟೆ, ಅವರ ಪಯ್ಕೆ ಮನುಸ್ಮ ತಿ, ಯಡ್ರಾವಲ್ಕ ಸ್ಮತಿ ಭಗವದ್ಗೀತೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ನೃಸಿಂಹಭಟ್ಟರು ಅದರಿಂದ ಬರುವ ಪಾಪಗಳನ್ನು ನಿರೀತಿಯಿಂದ ಕೂಲಂಕಷವಾಗಿ ಯಿವರಿಸಿದರು. ಆಹೋಬಲಭಟ್ಟರು ಹಿಂದೂ ಸಮಾಜವು ಯೀ ದೇಶದ ಬ್ರಾಹ್ಮಣರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವುದೆ೦ದ, ರಾಜಾದಿ ರಾಜಾರಾದಿಯಾಗಿಯಲ್ಲರೂ ಬ್ರಾಹ್ಮಣರನ್ನು ನಡೆದಾಡುವ ದೇವತೆಗಳೆಂದು ತಿಳಿದುಕೊಂಡಿರುವರೆಂದೂ, ಬ್ರಾಹ್ಮಣರ ಸರೀರದಿಂದ ವಂಥೆಟ್ಟು ರಕ್ತ ಭೂಮಿಗೆ ಬೀಳದಂತೆ ಯಚ್ಚರ ವಹಿಸಬೇಕೆಂದೂ, ತಿಳುವಳಿಕೆ ನೀಡಿದರು. ಯಿದು ಸರಿಯನಿಸಿತು. ಆ ಕೂಡಲಾತನು ಅಂಗ್ರೇಜಿ ಶಿಕ್ಷಣ ಯಿಲಾಖೆಯ ಮುಖ್ಯಸ್ತರನ್ನು