ಪುಟ:ಅರಮನೆ.pdf/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧೪ ಅರಮನೆ ಪ್ರತಿಯೊಂದು ಮನೆಯೊಳಗ, ಮನದೊಳಗ ಅಂಗ್ರೇಜಿಯ ವಾಸನೆ ಆಡಲಾರಂಭಿಸಿತ್ತು. ಮೊದಮೊದಲು ತಮ್ಮ ತಮ್ಮ ಮನಸಿನೊಳಗ 'ಯೇ' ಅನ್ನತೊಡಗಿದರು. 'ಬೀ' ಅನ್ನತೊಡಗಿದರು “ರೇಬೀಸೀಡೀ'.. ಯತೊಡಗಿದರು. ಅವರ ಮನದೊಳಗ ಯದೇ, ಯವರ ಮನದೊಳಗ ಅದೇ, ಅಂದಮ್ಯಾಲ ಯಿವರ ಕಿವಿಯೊಳಗ ಅವರು, ಅವರ ಕಿವಿಯೊಳಗ... ಕ್ರಮ ಕ್ರಮೇಣ ಆ ಮೋಣಿ ಯೀ ಮೋಣಿಯ ಕಿವಿಯೊಳಗ, ತರುವಾಯ ಅಗ್ರಹಾರ, ಅಗ್ರಹಾರದ ನಡುವೆ ಸೂಯಂ ಸೇವಕರು ನಿಗಾಯಿಟ್ಟಿದ್ದರಲ್ಲ.. ಅಂಗ್ರೇಜಿ ಭಾಷೆಯ ಹುನ್ನಾರನ್ನು ಪತ್ತೆ ಹಚ್ಚದೆ ಯಿರಲಿಲ್ಲ, ಕೂಡಲೆ ಕಾಠ್ಯಪ್ರವ್ರುತ್ತರಾಗದೆ ಯಿರಲಿಲ್ಲ. ಅವರು ಪ್ರತಿಯೊಂದು ಮನೆಗೆ ಹೋಗಿ ಅಂಗ್ರೇಜಿಯ ಪ್ರಣವಾಕ್ಷರ ಗಳು ಅಲ್ಲುಂಟಾ? ಯಿಲ್ಲುಂಟಾ? ಯಂದು ತಪಾಸಣೆ ಆರಂಭಿಸಿದರು. ಅವುಗಳನು ಮವುನವಾಗಿ ಅಂದುಕೊಂಡರೂ ಮನಸು ಮಲಿನವಾಗುವುದೆಂದೂ, ನರಕ ಪ್ರಾಪ್ತವಾಗುವುದೆಂದೂ, ಬಹಿರಂಗವಾಗಿ ನುಡಿದವರನ್ನು, ಅಮೇದ್ಯಭಾಷೆಯನ್ನು ಕಲಿಯಲಕೆಂದು ಹೋಗುವವರನ್ನು, ಕಲಿಕೆಯನ್ನು ಪ್ರೋತ್ಸಾಹಿಸುವವರನ್ನು ಅಗ್ರಹಾರದಿಂದ ಬಹಿಷ್ಕರಿಸಲಾಗುವುದೆಂದೂ, ಬ್ರಾಹ್ಮಣ ರೂಪೀ ಉಪಾಧ್ಯಾಯರೊಳಗ ಕೇವಲ ಅಂಗ್ರೇಜಿತನ ತುಂಬಿ ತುಳುಕಾಡುತ್ತಿರುವುದೆಂದೂ, ಆದ್ದರಿಂದ ಕಲಿಯುವವರನ್ನೂ ಕಲಿಸುವವರನ್ನೂ, ಪ್ರೋತ್ಸಾಹಿಸುತ್ತಿರುವವರನ್ನೂ ಅಗ್ರಹಾರದಿಂದ ಬಹಿಷ್ಕರಿಸಲಾಗುವುದೆಂದೂ ಯಚ್ಚರಿಕೆಯ ಗಂಟೆ ಭಾರಿಸತೊಡಗಿದರು. ಅಲ್ಲಿಗೆ ಬಿಡದೆ ಸೊಯಂ ಸೇವಕರು ಮಾರು ವೇಷದಲ್ಲಿ ತಿರುಗಾಡುತ್ತ ಕೆಲವು ಅಂಗ್ರೇಜಿ ಕಲಿಕಾ ಪ್ರಿಯರನ್ನು ಪತ್ತೆ ಹಚ್ಚಿ ಥಳಿಸತೊಡಗಿದರು.. ವಟುಗಳ ಪೋಷಕರಿಗೂ, ಸೊಯಂ ಸೇವಕರಿಗೂ ನಡುವೆ ದ್ರುಸ್ಟಿಯುದ್ದ, ತರುವಾಯ ಜಗಳಗಳೂ, ತದನಂತರ ಹೊಡದಾಟಗಳೂ ನಡೆಯಲಾರಂಭಿಸಿದವು. ಕೆಲವು ಅಗ್ರಹಾರಗಳಲ್ಲಂತೂ ಸೂಯಂ ಸೇವಕರೇ ಬಹಿಷ್ಕಾರ ಶಿಕ್ಷಗೆ ತುತ್ತಾದ ಘಟನೆಗಳೂ ನಡೆದವು.. ಅಂಥ ಸೋಂನಂಸೇವಕರು ಪಂಗುಣಿ ಸಿ ಅಣಿಮಾಂಡವ್ಯಮಾಚಾರರನ್ನು ಖುದ್ದ ಕಂಡು ತಮ್ಮ ತಮ್ಮ ಅಗ್ರಹಾರಗಳ ಅಳಲನ್ನು ತೋಡಿಕೊಂಡರು. ಆ ಆಚಾರರು ತಮ್ಮ ನೇತ್ರಗಳು ಮಲಿನಗೊಂಡರೂ ಚಿಂತೆಯಿಲ್ಲ, ತಮ್ಮ ನಾಲಗೆ ಅಪವಿತ್ರಗೊಂಡರೂ ಚಿಂತೆಯಿಲ್ಲ, ಯೀ ಕೂಡಲೆ ಜಿಲ್ಲಾ ಕೇಂದ್ರಸ್ಥಾನಗಳಿಗೆ ಹೋಗಿ ಸರಕಾರದ