ಪುಟ:ಅರಮನೆ.pdf/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧೬ ಅರಮನೆ ನಿಜಭಕುತನು. ವಂದು ಕಾಲದಲ್ಲಿ ವಂದು ಮಾತಿಗೆ ಹರಕೆ ಹೊತ್ತಿದ್ದ ನಿಜಸರಣನು. ಬಲಗಯ್ಲಿ ಖಡುಗ, ಯಡಗಯ್ಲಿ ನಿಂಬೆಹಣ್ಣು, ಕೊರಳೊಳಗೆ ದಾಸವಾಳ, ಕಣಗಿಲ ಹುಬ್ಬಿನ ಹಾರ, ಹಣೇಲಿ ವಂದು ಗೆರೆ ಅರುಷಣ, ವಂದು ಗೆರೆ ಕುಂಕುಮ, ಬಾಯೊಳಗ ಮುಡಕೊಂಡವನೆ ತಾಯೇ ಯಂಬೆರಡಕ್ಕರದ ಆಭರಣವನ್ನು, ಯವೇ ಮೊದಲಾದವುಗಳಿಂದ ಅಲಂಕೃತಗೊಂಡಿರುವ ಅವಯ್ಯನು ಸಾಮಾನ್ಯ ಕುಟುಂಬದಿಂದ ಬಂದವನಲ್ಲ, ಸದರಿ ಪಟ್ಟಣದೊಳು ಬಲಿದಾನಕ್ಕೆ ಹೆಸರಾದ ಮೂಕಪ್ಪನವರ ನಿಜಗಲ್ಲಯ್ಯನ ಪುತ್ರರಲ್ಲೋರನು. ಅವರ ವಮುಸದ ಪ್ರತಿಯೊಂದು ತಲೆಮಾರಿನಲ್ಲೂ ಮಚ್ಚುಲು ಸ್ಥಾನದಲ್ಲಿ ಹುಟ್ಟಿದವರು ವಂದಲ್ಲಾ ಎಂದು ಕಾರಣಕ್ಕೆ ಬಲಿಯಾದವರೇ ಯಿರುವರು ಸಿವನೇ, ಸಿಂಹಾಯದರಮನೆಯ ಹೆಬ್ಬಾಗಿಲಿಗೆ ರವುಷ ಪವುರುಷ ತುಂಬುವ ಕಾರಣಕ್ಕೆ ಬಲಿಯಾದ ಜಲ್ಲಿಂ ಯೇವಂಗೆ ಗಿರಿಮುತ್ತಾತನಾಗಬೇಕು. ಸುಭದ್ರವೂ, ಸುಭಿಕ್ಷುಮೊಆಗಿರಲೆಂಬುವ ಕಾರಣಕ್ಕೆ ಕೆರೆ ಯೇರಿಯೊಳಗ ಜೀವಸಮಾಧಿಯಾದಂಥಾ ದೊಡ್ಡಯ್ಯನು ಯಿವಯ್ಯಗೆ ಮುತ್ತಾತನಾಗಬೇಕು. ಸದರಿ ಪಟ್ಟಣದ ಕಲ್ಯಾಣಾರವಾಗಿ ಸತ್ತುಗಳೊಂದಿಗೆ ನೆತ್ತರುಡುಗೆ ವುಟ್ಟು ಹೋರಾಡಿ ಮೀರಮರಣವನ್ನಪ್ಪಿದ ಬೊಮ್ಮಲಿಂಗಯ್ಯ ರಾಸುಗಳಿಗೆ ಬಲು ಕಾಟ ಕೊಡುತಲಿದ್ದ ಯೇಳುಪಟ್ಟೆ ಹುಲಿಯೊಂದಿಗೆ ಹೋರಾಡಿ ಮಡಿದ ಗೊಡ್ಡಯ್ಯ ನುಂಕೇಮಲೇಲಿ ಶೂಲ ಯೇರಿ ಬಲಿಗೊಂಡು ಅರಾಧ್ಯ ದಟ್ಟ ಭಯೂಯೇಶ್ವರ ಸ್ವಾಮಿಯನ್ನು ಪ್ರಸನ್ನಗೊಳಿಸಿದ ಹೂಲಯ್ಯ, ಯಿಂಥ ಮೀರಾಧಿ ಮೀರರು ಯೇವಯ್ಯನ ವಮುಸದೊಳಗ ನೂರಾರು ಮಂದಿ ಯಿರಬೌದು. ಸದರಿಪಟ್ಟಣ ಅಸಲು ಫಾಸಲಲ್ಲೊಂದೇ ಅಲ್ಲದೆ ಕುಂತಲ ಪ್ರಾಂತದ ನೂರಾರು ಕಡೇಕ ಯಿಂಧೂರ ಹೆಸರಲ್ಲಿ ಯೀರಗಲ್ಲುಗಳುಂಟು, ಅಂಥ ವಮುಶೋದ್ಭವನಾಗಿರುವ ಕರುಪ್ಪಳಿ, ದೊನಿ ವಡದು ದೀಡು ವರುಷವಾಗಿರೋ, ಮೂಗು ಬಲಿತು ಮೂರು ವರುಷವಾಗಿರೋ, ಮೀಸೆ ಮೂಡಿ ಮೂರು ವರುಷವಾಗಿರೋ ಕರುಪಳ್ಳಿ ಹೆಂಗ ಕುಣಿಯುತ್ತಿರುವನಲ್ಲಾss ಹೆಂಗ ಕುಪ್ಪಳಿಸುತ್ತಿರುವನಲ್ಲಾ.. ಹೆಂಗ ಹೆಜ್ಜೆ ಹೆಜ್ಜೆಗೆ ರವುಷ ತುಂಬಿಕೊಳ್ಳತ್ತಿರುವನಲ್ಲಾ, ಹೆಂಗ ಷವುರಷವನ್ನು ಶ್ರೀದೇವಿಗೆ ನಲ್ವೇಧ್ಯ ಮಾಡುತ್ತಿರುವನಲ್ಲಾ, ಹೆಂಗ ಖಡುಗವನ್ನು ಲಯಬದ್ಧವಾಗಿ ತಿರುವ್ಯಾಡತಲಿರುವನಲ್ಲಾ..