ಪುಟ:ಅರಮನೆ.pdf/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ဂ ಅವಯ್ಯ ಬಲಕ್ಕಿರುವಾತನೇ ತಂದೆ ನಿಜಗಲ್ಲಯ್ಯನು, ಅವಯ್ಯನ ಯಡಕ್ಕೆ ಯಿರುವಾಕೆಯೇ ಹೆಂಡತಿ ಮಾಸ್ತೆವ್ವ... ತಾನು ತುಂಬು ಬಸುರಿಯಾಗಿರದಿದ್ದಲ್ಲಿ... ಪಟ್ಟಣದ ಕಲ್ಯಾಣಾರವಾಗಿ ಸೋಯಿಚ್ಛೆಯಿಂದ ಬಲಿಗೊಳ್ಳುವಂಥ ಯೂರಾದಿಯಿರ ಮಗನನ್ನು ಕರುಣಿಸೆವ್ವಾ ಯಂದಾಕೆ ಬೇಡಿಕೊಂಡಿರದಿದ್ದಲ್ಲಿ ತಾನೂ ತನ್ನ ಗಂಡನ ಕೂಡೆ ಬಲಿಗೊಳ್ಳುತ್ತಿದ್ದಳೇನೋ?

  • ಪ್ಲಾ...ಹಾ, ಕರುಪ್ಪಳಿ ಬಂದೇಬಿಟ್ಟ ತನ್ನ ನೀರಿಕ್ಷೆಯಲ್ಲಿದ್ದ ತಾಯಿಯ ಸಮಕ್ಷಮಕ್ಕೆ, ಯೇವಯ್ಯನಿಗಿಂತ ಮಿಗಿಲಾದ ಮಾಬಲ ಯಾವುದುಂಟು ಯೀ ಫಾಸಲೆಯೊಳಗ.. ಯೀ ಲೋಕದೊಳಗ... ಹಾ... ಹಾ... ನಿಜಭಕುತನೇ, ಪ್ಲಾ... ಸತ್ಯುಳ್ಳ ಸರಣನೇ.. ಯಿನ್ನಾರುಗಳಿಗೆಯೊಳಗೆ ತಾಯಿಯ ರುದಯದ ತೊಟ್ಟಿಲೊಳಗೆ ಮಗುವಾಗಿ ಆಡಲಿರುವವನೇ, ಯಗೋ ನಿನಗ ನಮ್ಮ ಸರಣು ಸರಣಾರಿ.. ಯಂದನಕಂತ ಅವಯ್ಯನ ಕೊರಳೀಗೆ ಹುಬ್ಬಿನ ಹಾರಗಳನ್ನು ಹಾಕಲಾರಂಭಿಸಿದವರೆಷ್ಟೋ? ಮುಂದಿನ ಜಲುಮದಲ್ಲಿ ನೀನು ನಮ್ಮ ಹೊಟ್ಟೆಯೊಳಗೆ ಮಗನಾಗಿ ಹುಟ್ಟಯಾ.. ಯಂದನಕಂತ ತಾಯಂದಿರು ಅವಂಯ್ಯನ ಮುಖಕ್ಕೆ ಮಂಗಳಾರತಿ ಬೆಳಗಿ ಹಣೆಗೆ ಅಂಗಾರ ಯಿಡಲಾರಭಿಸಿದರು. ಮುಂದಿನ ಒಲುಮದಲ್ಲಿ ನೀನೇ ನಮಗ ಗಂಡನಾಗಬೇಕು ಯಂದನಕಂತ ಹರೇದ ಹುಡುಗಿಯರು ಅವಯ್ಯನ ಬಾಯಿಗೆ ವಣಕೊಬ್ಬರಿ, ವುತ್ತುತ್ತಿ, ಖರಜೂರ, ಬೆಲ್ಲದ ಕಣ್ಣೆ ಯಿಡಲಾರಂಭಿಸಿದರು. ಅಯ್ಯೋ ನನ್ನ ಮೊಮ್ಮಗನೇ ಯಿಂದನಕಂತ ಮುದುಕಿಯರು ಅವಯ್ಯನ ಮುಖವನ್ನು ತಮ್ಮ ಬೊಗಸೆಯಲ್ಲಿ ಹಿಡಿದು ಲಟಲಟಾಂತ ಲಟ್ಟಿಗೆ ತೆಗೆಯಲಾರಂಭಿಸಿದರು.

ಸತ್ಯುಳ್ಳ ಸರಣss ಕರುಪ್ಪಳೀss ನಿಜಭಕುತss ಕರುಪ್ಪಳೀss ಜನ ವಕ್ಕೊರಲಿನಿಂದ ವುದ್ದರಿಸುತ್ತಿರುವಾಗ್ಗೆ ರಣವಾದ್ಯಂಗಳು ಮೊಳಮೊಳನೆ ಮೊಳಗುತ ಕಿವಿಗಡುಚಿಕ್ಕಿದವು.. ಸಿವನಾಮ ಪಾರೋತೀಪತಿ ಹರಹರ ಮಾದೇವಾss ರುಮ್..ರುಮ್.. ರುಮ್.. ಡೊಳ್.. ಡೊಳ್.ಡೊಳ್... ಣಕ್ಕೂ.. ಜಡ್ಡೆಣಕ್ಕೆ ಜಡಜಡ್ಡಿ ಣಕ್ಕೂsss... ಅಹಹಹಾ ಸಾಂಬವೀSSS.. ಅಹಹಹಾ ಜಗದಂಬೇsss... ನೀನು ಸತ್ಯ ಯುಗದಲ್ಲೇsss.. ಹುಬ್ಬಿನ ಮಳೆಯಲ್ಲಿ ನೆನೆಯೂತ. ಪರಾಕುಗಳ ಮಳೆಯಲ್ಲಿ ತಂಗಲಾತ... ಖಡುಗ ಮಯ್ಯಲ್ಲಿ ಕೋಲ್ಮೀಂಚುಗಳ ಸುಗ್ಗಿ ಆಡೂತ... ಮುಂದುಮುಂದಕ ಅವಯ್ಯ ಹೋಗುತ್ತಿರುವುದನ್ನು ಸಾಕ್ಷಾತ್ ಕಂಡ ಭಕುತಾದಿ