ಪುಟ:ಅರಮನೆ.pdf/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧೮ ಅರಮನೆ ಮಂದಿ ಹಿಂದಕಿದೋರು ಹಿ೦ದಲಕಾದರು. ಮುಂದಕಿದ್ಯೋರು ಮುಂದಲಕಾದರು. ಯಡಕಿದ್ದೋರು ಯಡಲಕಾದರು. ಬಲಕಿದ್ದೋರು ಬಲಗಡಲೆಕಾದರು.. ತನ್ನೊಳಗ ಐಕ್ಯಗೊಳ್ಳಲು ಹಾತೊರೆಯುತ್ತಿರುವೆಯಲ್ಲಾ ಭಲಾ ಭಲಾ.. ತನ್ನ ಪಾದಗಳಿಗೆ ನಿನ್ನ ತನುವಿಂದ ನೆತ್ತರು ಸುರಿದು ಅಭಿಷೇಕ ಮಾಡಲು ಹಾತೊರೆಯುತ್ತಿರುವೆಯಲ್ಲಾ, ಭಲಾS... ಭಲಾ......... ಯಂದು ವುದ್ದರಿಸುತಲಿದ್ದಾಳೆ ಚಮಾಲದೊಳಗ ಯಿರಾಜಮಾನಗೊಂಡಿದ್ದ ತಾಯಿ.. ಮೋಡಿ ತಬ್ಬಿಕೊಳ್ಳಲಿರು ವವಳಂತೆ ತನ್ನೆರಡು ಕಯ್ಯಗಳನ್ನು ಮತ್ತೆ mಳುವುತ್ತಿದ್ದಾಳೆ ದೀಪದ ಮಲ್ಲಿಂರಾಗಿ ವುರಿಂಯು ತ್ತಿರುವಂಥಾss.. ಆದಿಸುತಿಯು.. ಸದರಿ ಬಲಿಗೊಳ್ಳುವ ದುಸ್ಯವ ನೋಡಲಕಂತ, ತೋರಿಸಲಕಂತ, ಪರಾಂಬರಿಸಲಕಂತ ಚಂದ್ರಾಮ ಸೂಯ್ಯಾಮನನ್ನು ತಬ್ಬಿಸುತವನೆ, ಸೂಯ್ಯಾಮನನ್ನು ಚಂದ್ರಾಮ ಯಬ್ಬಿಸುತವನೆ, ನಕ್ಷತ್ರನಕ್ಷತ್ರವನ್ನು ಯಬ್ಬಿಸುತಯ್ಕೆ. ಸಕಲೊಂದು ಗೋಚರ ಅಗೋಚರ ಚರಾಚರವು ಯದ್ದು ಕುಂತಯ್ತಿ ಸಿವನೇ........ ಆ ರುದಯ ಯಿದ್ರಾವಕ ದ್ರುಸ್ಯವನ್ನು ನೋಡಲಕ, ಬಾಯಿತುಂಬ ಹೊಗಳಲಕss... ಪಟ್ಟಣದ ದಯವಸ್ತರು ಯಂಥ ಯಿರಗಲ್ಲನ್ನು ನೆಡಿಸಬೇಕು? ಅದಕ್ಕೆ ತಕ್ಕ ಶಿಲ್ಪಿ ಗುಡಿಗಾರರನ್ನು ಯಾವ ಮೂರಿಂದ ಕರೆಯಿಸಬೇಕೆಂದು ಯೋಚನೆ ಮಾಡುತಲಿದ್ದ ಹೊತ್ತಿನಲ್ಲಿ ಸಿವನ್ನಾಮ ಪಾರೊತೀಪತೀss ಯಂಬ ಸಭುದವು ಜ್ವಾಲಾಮುಖಿಯಂತೆ ಆವರಿಸಿದ ಹೊತ್ತಿನಲ್ಲಿ.. ತಾರೆ, ನಿಹಾರಿಕೆಗಳ ಪಯ್ಕೆ ಹತ್ತು ಹಲವು ಆಯ ತಪ್ಪಿ ಕುದುರೆಡವು ಕಡೇಕ ವುದುರಲಾಂಭಿಸಿದ ಹೊತ್ತಿನಲ್ಲಿ, ಅಂತರಾತುಮವು ನೆಲಮುಗುಲಿಗೇಕಾಗಿ ನಿಂತ ಹೊತ್ತಿನಲ್ಲಿ, ಕರುಪ್ಪಳಿಯು “ತಾಯೇ.. ಜಗದಂಬಾss ಜಯಮೋ.... ಜಗಾನುಮಾತೇ, ಭವಾನೀss...” ಯಂದು ನುಡಿಯುತ್ತೋಡೋಡಿ ಹುಬ್ಬಿನ ಮಂಟಪದ ಸನೀಕ ಬಂದನು. ಲೋಕಾನುಮಾತೆಯನ್ನು ಕಣ್ಣೂಳಗೆ ತುಂಬಿಕೊಂಡನು.. ಪರದಕ್ಷಿಣೆ ಮಾಲ ಪರದಕ್ಷಿಣೆ ಹಾಕಿದನು.. “ತಾಯೇ.. ತಗಳ್ಳವ್ವಾ ತಗಾss” ಯಂದನಕಂತಲೇ ಬಲಗಯ್ಲಿದ್ದ ಖಡುಗವನ್ನು ಕುತ್ತಿಗೆಗೆ ಕಚಕ್ಕಂತ ಬೀಸಿದೊಡನೆ... ಹಾರಿದ ರುಂಡವು ಅಗಾಧಪುಷ್ಪದಂತೆ ಆದಿಸಗುತಿಯ ಪಾದದ ಬುಡಕ್ಕೆ ಬಿದ್ದೊಡನೆ, 'ತಾಯೇ' ಯಂಬ ಸಬುಧವನ್ನು ಕೊನೇ ಸಲಕ್ಕ ನುಡಿದು ಹಂಗss