ಪುಟ:ಅರಮನೆ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ಅರಮನೆ ಸರಿಯಾದೀತು. ಬಿದಿಗೆ ಚಂದ್ರಾಮನಂತೆ ದಿನಕ್ಕೊಂದೊಂದು ಚಂದಲ್ಲಿ ಬೆಳೆದೂ ಬೆಳೆದೂ ಅದು ಪ್ರವುಢಾವಸ್ತೆಗೆ ಬಂತು. ಆಕೆಗೊಂದೇ ಅಲ್ಲದ ಯಿಡೀ ಕೇರಿಗೆ.. ಯಿಡೀ ಪಟ್ಟಣಕ್ಕೇನೆ ಕಣಣಿ ಆತು. ಹರೇವಿಗೆ ಬಂದ ನಂತರ ಅದಕ್ಕೆ ಪುರುಸೊತ್ತು ಯಿಲ್ಲದಂಗಾತು. ಹಾಳೂರಿಗೆ ಹಣುಮಪ್ಪ ಚಂದ ಅನ್ನಂಗೆ ಯಿಡೀ ಪಟ್ಟಣಕ್ಕೇನೆ ಅದೊಂದೆ ಯಿತ್ತು. ಅಂದರೆ ಸದರಿ ಪಟ್ಟಣದೊಳಗ ಊಾಣದ ಸಂತತಿಯೇ ಯಿರಲಿಲ್ಲ ಯಂದು ಅರವಲ್ಲ.. ಯಿದ್ದವು. ಆದರೆ ತಗೊಂಡು ಯೇನು ಮಾಡೋದು? ವಂದೆಲ್ಲು ಬಾರಿ ಹಾರಿ ಸುಸ್ತಾಗಿ ಕೆಳಗಿಳಿದು ದುಸು ದುಸನೆದೇಕಿ ಆಯಾಸ ಅನುಭೋಸುತ್ತಿದ್ದವು. ಅವುಗಳಿಂದ ಹಾರಿಸಿಕೊಂಡ ಮಣಕ ಯೆಮ್ಮೆಗಳಿಗೆ ಗರ ಕಟ್ಟುತ್ತಿರಲಿಲ್ಲ.. ಕಟ್ಟಿದರೂ ನಿಲ್ಲುತ್ತಿರಲಿಲ್ಲ.. ನಿಂತರೂ ಭಾಳ ದಿನ ಉಳಿಯುತ್ತಿರಲಿಲ್ಲ.. ಅದಕ್ಕೆಂದೇ ಪಟ್ಟಣದ ಸಮಸ್ತ ಯೆಮ್ಮೆಗಳು ಸೂರನ ಮ್ಯಾಲ ಬಿದ್ದು ಸಾಯುತ್ತಿದ್ದವು. ಅವುಗಳ ಮಾಲಿಕರಾದರೂ ಆಟೆಯಾ.. ತಮ್ಮ ತಮ್ಮ ಬೆದೆಗೆ ಬಂದ ಮಣಕ ಯಮ್ಮೆಗಳನ್ನು ಹೊಡಕೊಂಡು ಬಂದು ಸೂರನ ಹಿಂದ ಮುಂದ ಬಿಟ್ಟು ರುಸುಮು ರೂಪದಲ್ಲಿ ವಂದು ಹೊರೆ ಮೇವನ್ನೋ, ಕಲಗಚ್ಚನ್ನೋ, ಹುಣ್ಣೀ ನುಚ್ಚನ್ನೋ ತಂದು ಅದರ ಮುಂದ ಮೇಯಲಕ ಬಿಡುತ್ತಿದ್ದರು. ಅದೊಂದೇ ಅಲ್ಲದೆ ತಮ್ಮ ಹೊಲಗದ್ದೆಗಳಲ್ಲಿ ಅದು ಮೇದರೆ ಹುಲುಸು ಹೆಚ್ಚಾಗತಯ್ಕೆ ಯಂಬ ಕಾರಣಕ್ಕೆ ಅದನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಯೇಸು ಮೇದರೂ, ಯೇನು ಮಾಡಿದರೂ ಅದನ್ನು ಗದರಿಸಿ ಗದುಮುವ ಗೋಜಿಗೆ ಯಾರೊಬ್ಬರೂ ಹೋಗುತ್ತಿರಲಿಲ್ಲ.. ಹಿಂಗಾಗಿ ಅದಕ್ಕೆ ಹರೇವು ಬಂದದ್ದಾಗಲೀ, ತಾರುಣ್ಯ ನೂರುಮಡಿಗೊಂಡದ್ದಾಗಲೀ ತಡಾಗಲಿಲ್ಲ.. ಗೂಟ ದಂದಕ್ಕಿಂತ ನಿರುಬ೦ಧಗಳಿಲ್ಲದೆ ಅಂಕೆ ಅಟಾಟೋಪಗಳಿಲ್ಲದೆ, ಕಾಯಿದೆ ಕಾನೂನುಗಳಿಲ್ಲದೆ ಹಾರುತಯ್ದೆಯೇನೋ ಯಂಬಂತೆ ಮೋಡಾಡುತ ಸದರಿ ಪಟ್ಟಣದ ಸಕಲ ಶಾಮಲ ವದ್ದೆಯರಾದ ಮಹಿಷೆಯರೊಂದಿಗೆ ವಡನಾಡುತ, ಗರುಭ ತುಂಬುತ, ಕೆಚ್ಚಲು ಜೀಕುತ, ಹಾಲು ಹಯನಕ್ಕೆ ಬರ ಬಾರದಂಗ ನೋಡಿಕೊಳ್ಳುತ ಅದು ಅಷ್ಟ ದಿಗ್ಗಜಗಳ ಕಣ್ಣು ಕಸುರಾಗುವಂತೆ ಬೆಳೆದು ವಂದು ಹದಕ್ಕೆ ಬಂದಿತ್ತು. ಅಂದ ಮಾತ್ರಕ್ಕೆ ಅದು ಅಜಾತ ಸತ್ರುವಾಗಿತ್ತು ಯಂದು ಭಾವಿಸಬೇಕಾದುದಿಲ್ಲ... ತೂರಿದ್ದಲ್ಲಿ ಹೊಲಗೇರಿ ಹೆಂಗಿರದೋ ಹಂಗೇನೆ ಅದಕ್ಕೆ ಸತ್ರುಗಳಿದ್ದರು. ಅವನ್ಯಾರಪ್ಪಾ ಅಂದರ ಯಮ್ಮೆ ಮಣಕಗಳನ್ನೋಂದಾದರೂ ಕಟ್ಟಿರದೋರು. ಬೆದೆಗೆ ಬಂದಾಗಂತೂ ಅದು ನಮ್ಮ ನಮ್ಮ ಯಂದು ಸುತ್ತಿಪ್ಪತ್ತೂರುಗಳಿಗೆ ಕೇಳಿಸುವಂತೆ