ಪುಟ:ಅರಮನೆ.pdf/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ဂ ನಿಶ್ಚಲಗೊಂಡಿತು. ರುಂಡ ರಹಿತ ಮುಂಡವು ಹಂಗss ವಂದ್ಯಾಕು ಹೆಜ್ಜೆ ಮುಂದಕಿಡುತಾ ಯಿಡುತಾ ಹಂಗss ನಿಂತ ನಿಲುವೀಲೆ ನಿಶ್ಚಲಗೊಂಡಿತು ಸಿವನss.. ಅಬ್ಬಾ! ಆ ರಣಪ್ರಸಾದದ ದುಶ್ಯವೇ!. ಕಣ್ಣಾರೆ ನೋಡಿದ ಸವಾರೆವ್ವ ಸಂಗಡಗಿತ್ತಿಯರದೆಯೊಳಗ ಕುರಪ್ಪಳಿ ಬಲಿದಾನದ ಕುರುತಾದ ಲಾವಣಿ, ಗೀಗೀ, ಸೋಬಾನವೇ ಮೊದಲಾದ ನಾನಾ ಪ್ರಕಾರದ ಹಾಡುಗಳು ಜೇನ್ನೊಣಗಳೋಪಾದಿಯಲ್ಲಿ ಗೂಡ ಕಟ್ಟಲಾರಂಭಿಸಿದರೆ.. ಅಲ್ಲಿಗೆ.... ...ಯರಡು ಹರದಾರಿದಲ್ಲಿದ್ದ, ಶಿಲ್ಪ ಗುಡಿಗಾರರ ತವರೂರೆಂದೇ ಹೆಸರಾಗಿದ್ದ ಚಿಮುಟಾಲೂರಿನ ವಂದು ಮನೆಯೊಳಗ ಹೆಂಡತಿಯನ್ನು ತಬ್ಬಿಕೊಂಡು ಮಲಗಿದ್ದ ಶಿಲ್ಪಿ ಕಾಳಾಚಾರಿಯು ದಿಗ್ಗನೆ ಯಚ್ಚರಗೊಂಡನು.. ಬಂದೆ ತಾಯೀ ಬಂದೆ ಯಂದು ಮರು ಜವಾಬು ನೀಡುತ್ತಲೇ ಚಾಣ, ಸುತ್ತಿಗೆ, ವುಳಿಯೇ ಮೊದಲಾದ ಪರಿಕರಗಳನ್ನು ಸಂಚಿಯೊಳಗ ಯಿಟ್ಟುಕೊಂಡನು. ತಾಯಿ ಸಾಂಬವಿಯ ಆಗ್ನಿ ಆದಂಗಾತು.. ಕುದುರೆಡವಿಗೆ ಹೋಗಿ ಬರುವೆನೆಂದು ಹೆಂಡತಿಗೆ ಹೇಳಿ ಪ್ಲಾ.. ಹಾ ಅದೇ ದಿಕ್ಕಿನ ಕಡೇಕ ಹೆಜ್ಜೆ ಹಾಕಲಾರಂಭಿಸಿದನು ಸಿವನೇss. ಬಲಿಗೊಂಡ ಸರೀರದಿಂದ ವುಕ್ಕಿದ ನೆತ್ತರು ಮಾರುದ್ದಗಲಕ್ಕೆ ಹರಿದು ಹಂಗss ಹೆಪ್ಪುಗಟ್ಟಿತು. ತನ್ನ ಸರೀರದಾದ್ಯಂತ ಸಿಂಪರಣೆಗೊಂಡ ನೆತ್ತರಿಂದ ಪುಲಕಿತಳಾದ ತಾಯಿಯು ತನ್ನ ಕೊರಳೊಳಗಿಂದ ಎಂದು ಹುಬ್ಬಿನ ಹಾರವನ್ನು ತೆಗೆದು ರುಂಡದ ಮ್ಯಾಲ ನಗೆಯಲು ಕರುಪ್ಪಳಿಯ ಕಣ್ಣುಗಳು ವಂದರಗಳಿಗೆ ತೆರೆದು ಹಂಗss ಭಕುತಿದೂರುವಕವಾಗಿ ಮುಚ್ಚಿದವು.. ರುಂಡದ ತುಟಿಗಳ ನಡುವೆ ಮುಗುಳ್ಳಗೆ ಆಚಂದ್ರಾರವಾಗಿ ವುಳಿದು ನಳನಳಿಸಿತು. ಬಲಿದಾನದಿಂದ ಸಂತುಷ್ಟಳಾದ ತಾಯಿಯು, ಮಂದಸ್ಮಿತಳಾದ ತಾಯಿಯು ಸಿಮ್ಯಾಸನದೊಳಗ ಮಿಸುಕಾಡಲಾರಂಭಿಸಿದಳು. ದಿಬ್ಬಣವೋ.... ಪರಿಶಯೋ.. ಜಾತುರೆಯೋ... ವಂದರೊಳಗೊಂದು ಅಡರುಗಾಲು ಹಾಕಿದ್ದ ಜನಸಾಗರಮೋ.. ಯಲ್ಲಿ ನೋಡಿದರಲ್ಲಿ ಮೊಳಗುತ್ತಿರುವ ರಣವಾದ್ಯಗಳೇನು? ಹಾಡು ಕುಣುತದ ನರನಗಳೇನು? ಹರಕೆ ಮುಡುಪುಗಳ ಸಲ್ಲಿಕೆ ಮಾಡುತ್ತಿರುವವ ಸಡಗರಯೇನು? ಹೆಜ್ಜೆಗೊಂದೊಂದು ಪವಾಡ ಮೆರೆತೂತ ನುಘss ವುಘss ನಿನಾದದ ನಡುವೆ ಸಾಗಿದ ಮಾ ಮಾಯಿಯು ಜನಸಾಗರದ ಆವೇಸವನ್ನು ತಾನು