ಪುಟ:ಅರಮನೆ.pdf/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೨೧ ಜವುಗಿನವಳಗೆ ಸೇರಿ ತೊಡೆಗಾತುರದವಳಾಗುತ್ತಾಳೆ ಗಂಗಮ್ಮ ತಾಯಿ.. ತನಗೆ ಹರೆಯ ಬಂದಿರುವುದೆಂದು ಅಪಾರ ಮಾಡಿಕೊಂಡು ನೆಲದಡಿ ಅಂತದ್ದಾನಳಾಗುತ್ತಾಳೆ ಗಂಗಮ್ಮ ತಾಯಿ.. ನೆಲದಡಿ ಹರಕೋತಃ ಹರಕೋತ ಕಡಲೇರ ತೋಪಿನ ಮಗ್ಗುಲಿರೋ ಕಲ್ಲುಕೊರಕಲ ಸಂಧೀಲಿ ಲಜ್ಜೆಯಿಂದ ತೇಲಿ ಹೊರ ಕಾಣಿಸಿಕೊಳ್ಳುತ್ತಾಳೆ ಗಂಗಮ್ಮ ತಾಯಿ.. ಆಕೆಗಾಗ ಹೊನ್ನವ್ವ ಯಂಬ ನಾಮಾಂಕಿತ ಹೆಂಗ ಪ್ರಾಪ್ತವಾಯಿತೋ ಸಿವನಿಗೇ ಗೊತ್ತು? ತನ್ನ ನಸೀಬವನ್ನು ತಾನಳಿದುಕೊಳ್ಳುತ್ತ ತಾನು ಹುಟ್ಟಿ ಯೇಸು ಕಾಲವಾಯಿತೋ ಯೇನು ಕಥಿಯೋ, ತನಗ ನದೀ ಪಟ್ಟ ಲಭ್ಯವಾಗಲಿಲ್ಲವಲ್ಲಾ.. ಯಂದು ತನಗ ತಾನ ನಸೀಬವನ್ನು ಹಳಿದುಕೊಳ್ಳುತ್ತಾಳೆ.. ಗಂಗಮ್ಮ ತಾಯಿ.. ಯಿರಲಿ ನದೀ ಮೂಲ ಹುಡುಕ ಬಾರದೂ.. ಋಷಿ ಮೂಲ ಹುಡುಕ ಬಾರದು.. ಸಾಕ್ಷಾತ್ ಸಾಂಬವಿಯೇ ಮೀಯಲಕೆಂದು, ಜಳಕಮಾಡಲಕೆಂದು ತನ್ನಲ್ಲಿಗೆ ದಯಮಾಡಲಿರುವಳೆಂಬ ಗಾಳಿ ವರಮಾನ ತಿಳಿದೋ ತಿಳಿದು ಹಿರಿ ಹಿರಿ ಹಿಗ್ಗಿದಳು ಹೊನ್ನವ್ವ ಬೀರೇಳು ಲೋಕಗಳನ್ನು ತನ್ನ ಅಗಾಧ ವುದುರದೊಳಗೆ ಯಿರಿಸಿಕೊಂಡಿರುವ೦ಥಾ ಲೋಕಮಾತೆಂತ ಸರೀರನ ತಂಪು ಮಾಡಬೇಕಿರುವುದಲ್ಲಾ.. ಯಿದು ತನ್ನ ಮೂರುವಜಲುಮದ ಸುಕ್ರುತವೇ ಸರಿ. ಯಾವ ನದಿಗೂ ಲಭ್ಯವಾಗದ ಯೀ ಸವುಭಾಗ್ಯದವಕಾಶವು ತನಗೇ ಲಭಿಸಲಿರುವುದಲ್ಲಾ.. ಗಳಿಗ್ಗಳಿಗೆ ರೋಮಾಂಚನ ಗೊಳ್ಳುತ್ತಾಳೆ ಗಂಗಮ್ಮ ತಾಯಿ.. ಜಾವಜಾವಕ್ಕೆ ಬೆಮರುತ್ತಾಳೆ ಗಂಗಮ್ಮ ತಾಯಿ.. ತನ್ನ ಮಯ್ಯನ್ನು ತಾನು ನೋಡಿಕೊಳ್ಳುತ್ತಾಳೆ ಗಂಗಮ್ಮ ತಾಯಿ... ಅರೆ, ಅವುದಲ್ಲಾ ಕಾಲಾಯ ತಸುಮಯ್ ನಮಹ.. ತಾನು ಯಷ್ಟೊಂದು ಸೊರಗಿ ಹೋಗಿರುವೆನಲ್ಲಾ.. ತಾಯಿಯ ಮಜ್ಜಣಕ್ಕೆ ತಾನು ಸಾಕಾಗುವೆನೋ ಯಿಲ್ಲವೋ? ಸಾಲದಿದ್ದರೇನು ಮಾಡುವುದು? ಅಪರೂಪಕ್ಕೆ ಮಜ್ಜಣ ಮಾಡಲಿರುವ ತಾಯಿಯು ಯಥೆ ಪಟ್ಟರೇನು ಮಾಡುವುದು? ಆಕೆ ಮುನುದು ಸಾಪ ಕೊಟ್ಟರೇನು ಗತಿ? ಆಕೆಯ ನಿಟ್ಟುಸುರು ತನಗ ತಗುಲಿದರೇನು ಗತಿ? ಯಂದು ಮುಂತಾಗಿ ಯಸನ ಮಾಡುತ್ತಾಳೆ ಹೊನ್ನವ್ವ. ಮಮ್ಮಲನ ಮರುಗುತ್ತಾಳೆ ಹೊನ್ನವ್ವ.. ಸದರಿಪಟ್ಟಣದ ಭಕುತಾದಿ ಮಂದಿ ಮುಂಗಡವಾಗಿ ಬಂದು ತನಗೆ ವಂದು ಮಾತನ್ನು ಸೂಚನಪ್ರಾಯವಾಗಿ ಹೇಳಿದ್ದಲ್ಲಿ ತನ್ನನ್ನು ತಾನು ತಡೆಯದೆ ಯಿರುತ್ತಿರಲಿಲ್ಲ...