ಪುಟ:ಅರಮನೆ.pdf/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨೪ ಅರಮನೆ ಅದೇ ಹೊತ್ತಿಗೆ ಗಂಟಲಯ್ಯನು ಅಹಹಹಾ ತಾಯೇ SS.. ಆದಿ ಅನಾದಿ ಅನಂತ, ಅದ್ಭುಧ ತಮಂಧ, ತಂಡಜ, ವಾರಿಯುಕ್ತ ಆಯುಕ್ತ, ಮುನಿರಣ, ಮಾನ್ಯರss ಯಂಬಿವೇ ಮೊದಲಾದ ಖಡುಗಾಲಾಪನೆ ಆರಂಭಿಸಿದ ಹೊತ್ತಿನಲ್ಲಿ ತಮಗೆ ಕಣ್ಣು ಬಂದವೆಂದ ಕುರುಡರೆಷ್ಟೋ, ತಮಗೆ ಕಿವಿ ಬಂದವೆಂದ ಕಿವುಡ, ಕೆಪ್ಪರೆಷ್ಟೋ. ಅವ್ವನ ಪವಾಡವು ಅಂದಿಗುಂಟು ಯಿಂದಿಗಿಲ್ಲಯಂಬುವ ರಣಹೇಡಿಗಳಿಗೆ ಖಡೇ.. ಖಡೇ.. ತಾಯಿ ಸಾಂಬವಿಂದು ಪೂಜೆ ಪುನಸ್ಕಾರಗಳು ಸಾಂಗೋಪಾಂಗವಾಗಿ ನೆರವೇರಲು.. ವಸ್ತಿಯು ಜಲನಿಧಿಯೊಳಗೆ ಮಿಂದು ಹೊಸ ಅರುವೆ ಧರಿಸಿಕೊಳ್ಳಲು.. ಪಯಿತ್ರಕೇಲು ತನ್ನೊಳಗ ಹೊಸ ವುದುಕು ತುಂಬಿಕೊಳ್ಳಲು.. ಬಳ್ಳಾರಿ ಸೀಮೆಯೊಳಗ ತಲೆದೋರಿದ್ದ ಬೊಬ್ಬಿಲಿನಾಗಿರೆಡ್ಡಿಯನ್ನು ವುಪುಸಮ್ಮರಿಸಿದಷ್ಟು ಸುಲಭವಲ್ಲ ಕದಿರಿ ಸೀಮೆಯೊಳಗ ಹೊಸದಾಗಿ ತಲೆದೋರಿರುವ ಅಣಿಮಾಂಡವ್ಯ ಮಾಚಾರ್ರ ಸಾತ್ವಿಕ ವುಪಟಳವನ್ನು ಅಡಗಿಸುವುದು ಯಂದು ಯಸನ ಮಾಡುತಲಿದ್ದ ಥಾಮಸು ಮನೋ ಸಾಹೇಬನು ಅದೇ ತಾನೆ ಗೊನಗೊಂಡ್ಡ ಭೀಮರೆಡ್ಡಿಯ ಸುಪದ್ದಿಯಲ್ಲಿದ್ದ ಕರೂರರನ್ನು ವಶಪಡಿಸಿಕೊಂಡು ಅದಕ್ಕೆ ವಜ್ರಯಂಬ ಬಿರುದನ್ನು ದಯಪಾಲಿಸಿದನು. ಜನಸ್ತೋಮವು ಜಯಕಾರ ಮಾಡುತ ಬಿರುದನ್ನು ಸ್ವಾಗತಿಸಿತು. ಸರಕಾರಿ ದಪ್ತರುಕಡತಗಳಲ್ಲಿ ವಜ್ರದಕರೂರು ಯಂದು ನಮೂದಿಸಬೇಕೆಂದು ತನ್ನ ಕಕೆಳಗಿನ ಅಧಿಕಾರಿಗಳನ್ನು ಆದೇಶಿಸಿದನು. ವಜ್ರದ ಗಣಿಗಾರಿಕೆಯಲ್ಲಿ ಸ್ಥಳೀಯರಿಗೆ ರೋಜಗಾರಿ ನೀಡುವುದಾಗಿಯೂ, ಬರಲಿರುವ ಆದಾಯದ ವಂದು ಭಾಗವನ್ನು ಸದರಿ ಗ್ರಾಮದ ಶ್ರೇಯೋಭಿರುದ್ದಿ ಕೆಲಕಾರಗಳಿಗಾಗಿ ವುಪಯೋಗಿಸುವುದಾಗಿಯೂ ಘೋಷಿಸಿದನು. ಭಾರಿ ಕರತಾಡನ ಕೇಳಿಬಂತು. ತನಗೆ ಪವುರ ಗುರವ ನೀಡಲು ಬಯಸಿದ ಯುವಕರಿಗೆ ಯಾವ ತಂಟೆ ತಕರಾರು ಮಾಡದೆ ವಜ್ರದ ಗಣಿಗಳನ್ನು ಕುಂಪಣಿ ಸರಕಾರಕ್ಕೆ ದೊಡ್ಡ ಮನಸ್ಸಿನಿಂದ ವಪ್ಪಿಸಿದ ಭೀಮರೆಡ್ಡಿಗಾರರನ್ನು ತಮ್ಮ ಪರವಾಗಿ ಗವುರವಿಸಬೇಕೆಂದು ಕಳಕಳಿಯಿಂದ ಯಿನಂತಿ ಮಾಡಿಕೊಂಡು ತನ್ನ ಮುತ್ಸದ್ದಿತನವ ಮೆರೆದನು. ಆದರಾತನು ಯಿನ್ನೂ ಕೆಲದಿನಗಳ ಕಾಲ ತಾನೊಂದೇ