ಪುಟ:ಅರಮನೆ.pdf/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೨೫ ಜಾಗದಲ್ಲಿ ನಿಲ್ಲುವಂತಿರಲಿಲ್ಲ. ಬಿಡುವಿಲ್ಲದ ಕಾಠ್ಯಕ್ರಮಗಳ ನಡುವೆ ಕದಿರಿ ಪ್ರಾಂತ್ಯದಲ್ಲಿರುವ ಮಣಿಕಲ್ಲಿಕಾ ಅಗ್ರಹಾರಕ್ಕೆ ಹೋಗಿ ಅಣಿಮಾಂಡವ್ಯ ಮಾಚಾರರೊಂದಿಗೆ ಚರ್ಚಿಸಬೇಕಿರುವುದಂತೆ ಛೇ! ಛೇ, ಯೇ ವಿಪ್ರಮಹಾಶಯರು ತನಗೆ ದೊಡ್ಡ ತಲೆನೋವಾಗಿ ಬಿಟ್ಟಿರುವರಲ್ಲಾ, ಶಸ್ತ್ರನಿಪುಣರನ್ನು ಯದುರಿಸುವಷ್ಟು ಸುಲಭವಲ್ಲ ಯೀ ಶಾಸ್ತ್ರಕೋವಿದರನ್ನು ಯದುರಿಸುವುದು? ಶಾಸ್ತ್ರವನ್ನು ಶಾಸ್ತ್ರದಿಂದಲೇ ಯದುರಿಸಬೇಕೆಂದು ನಿರರಿಸಿದ ಅಪರ ಚಾಣಕ್ಯನೆನಿಸಿದ ಮ ನು ವಂದು ದಿನದಮಟ್ಟಿಗೆ ಅನಂತಪುರಕ್ಕೆ ಹೋಗಿ ಹಯಗ್ರೀವಾಚಾರ್, ತ್ರಯಂಭಕಾಚಾರ್, ಶತಾವಧಾನಿ ಪರಮೇಶ್ವರ ಪಂತುಲು ಯಿವರೇ ಮೊದಲಾದ ದ್ವಿದಶ ಪಂಡಿತರ ಸಭೆ ಕರೆದು ಭೂತಕಾಲದ ಅಗ್ರಹಾರಗಳನ್ನು ವರಮಾನಕ್ಕೆ ಯತ್ತಬೇಕೆಂದೂ, ಯಿಂಗ್ಲೀಷು ಮಾಧ್ಯಮದ ಪಠ್ಯಕ್ರಮವನ್ನು ವಟುಪ್ರಿಯಗೊಳಿಸಬೇಕೆಂದೂ ಕಳಕಳಿಯಿಂದ ವಿನಂತಿ ಮಾಡಿಕೊಂಡನು. ಯಿದರಲ್ಲಿ ಯಶಸ್ಸು ಸಾಧಿಸಿದಲ್ಲಿ ಗವರರು ಜನರಲ್ಲನಿಗೆ ಸಿಫಾರಸ್ಸು ಮಾಡಿ 'ಸರ್' ಯಂಬ ಅತ್ಯುನ್ನತ ಬಿರುದನ್ನು ಕೊಡಿಸುವುದಾಗಿ ತಾನು ಹೇಳದೆ ಯಿರಲಿಲ್ಲ. 'ಸರ್' ಯಂಬ ಬಿರುದು ಜಹಗೀರಾರು ಪದವಿಗೆ. ಸರಿಸಮಾನವು... ಅದೂ ಗವರರು ಜನರಲ್ಲನ ಅಂಬ್ರುತಹಸ್ತದಿಂದ. ಅವರೆಲ್ಲರ ರುದಯಗಳು ಕಡಲುಕ್ಕಿದಂತೆ ವುಕ್ಕಿದವು. ಆಯ್ತು ಮಹಾಸ್ವಾಮಿ. ತಮ್ಮ ಚಿತ್ತ ಯಂದು ಅಲ್ಲಿಂದ ನಿರಮಿಸಿ.... ತುಸು ಹೊತ್ತಿನ ತನಕ ಆಲಿಸೀ ಆಲಿಸೀ ಅಣಿಮಾಂಡವ್ಯಮಾಚಾರರು ಛೀ ಛೀ ಯಂದುಬಿಟ್ಟರು. ನಿಮ್ಮ ಬ್ರಾಹ್ಮಣ್ಯವನ್ನು ಅಗ್ನಿಗಾಹುತಿ ಕೊಡಬೇಕು, ನಿಮನಿಮ್ಮ ಕೊರಳಲ್ಲಿ ಪವಿತ್ರಯಗೋಪವೀತ ಯಾಕರಯ್ಯ, ನಿಮ್ಮ ನಿಮ್ಮ ಯದರೊಳಗ ನಮಕ ಚಮಕಗಳು ಯಾಕರಯ್ಯಾ.. ಅಂದುಬಿಟ್ಟರು. ಕದಿರಿ ಸೀಮೆಂರು ಅಗ್ರಹಾರಗಳಲ್ಲಿ ಹಯಗ್ರೀವಾಚಾರರ, ತ್ರಯಂಭಕಾಚಾರ್ ಶತಾವಧಾನಿ ಪರಮೇಶ್ವರ ಮತುಲರವರ ಬ್ರಾಹ್ಮಣ ವಿರೋಧಿ ನಿಲುವನ್ನು ವುಗ್ರವಾಗಿ ಖಂಡಿಸಲಾಯಿತು. ಅವರನ್ನು ಬ್ರಾಹ್ಮಣಿಕೆಯಿಂದ ಬಹಿಷ್ಕರಿಸಲಾಯಿತು. ಅವರ ಪ್ರತಿಕ್ರುತಿಗಳನ್ನು ಸುಡಲಾಯಿತು. ಯಷ್ಟೆಲ್ಲಾ ಆದ ಮಾಲೂ ಅವರು ಸಿಪಾಯಿಗಳ ರಕ್ಷಣೆಯಲ್ಲಿ ಅಗ್ರಹಾರದಿಂದ ಅಗ್ರಹಾರಕ್ಕೆ ಸುತ್ತಾಡುತ್ತಾ ಅಂಗ್ರೇಜಿಯೊಳಗೆ ಸಂಸ್ಕೃತಮೋSS... ಸಂಸ್ಕೃತದೊಳಗ ಅಂಗ್ರೇಜಿಯೋ.. ಯಂದು ಪ್ರಚಾರ ಮಾಡಲಾರಂಭಿಸಿದರು. ಥಾಮಸು ಮನೋ