ಪುಟ:ಅರಮನೆ.pdf/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೨೭ ದಂಡಿಸಿಕೊಳ್ಳುತಲಿದ್ದುದೇನು ಕೇಳುತ್ತೀ ಸಿವನೇ.. ಅಲ್ಲೆಲ್ಲ ಸೊರ ಮುರುಕೊಂಡು ಬಿದ್ದಿತ್ತು ಸಿವನೇ, ಸಾವುರ ಸಾವುರ ದೀವಟಿಗೆಗಳಿಂದಾಗಿ ನೂರೊಂದು ಹಗಲುಗಳು ಅಲ್ಲೆಲ್ಲ ತಳುಕು ಹಾಕಿಕೊಂಡಿದ್ದವು ಸಿವನೇ, ಸಾವುರ ಸಾವುರ ರಣವಾದ್ಯಗಳು ವಂದೇ ಸಮಕ ಮೊರೆಯಲಕ ಹತ್ತಿದ್ದ ಪರಿಣಾಮವಾಗಿ ಬೀರೇಳು ಲೋಕಗಳ ವೈಯದ್ಯನಾದ ರವುಸವೆಲ್ಲ ಅಲ್ಲೆಲ್ಲ ನೆಲಮುಗಿಲನ್ನು ಯಾಪನ ಮಾಡಿಬಿಟ್ಟಿತ್ತು ಸಿವನೇ. ಕಯ್ಯ, ಖಂಡೆಯ, ಸೊರಟೆಯಾ, ಬಾಳ, ಕರಾಚೂರಿ, ಸುರಗಿ, ಕಯ್ ಸುರುಗಿ, ಬಾಕು, ಕೊಂಬು ಗತ್ತಿ ಯಿವೇ ಮೊದಲಾದ ಕತ್ತಿಗಳನ್ನು ಧಾರಣ ಮಾಡಿದ್ದವರೂ, ಕವುಕ್ಷೇಯ, ಅಸಿ, ನಿಸ್ತಿಂಶ, ಕ್ರಪಾಣ, ಕಲವಾಲಕ, ತರವಾರಿ ಮಂಡಲಾಗ್ರವೇ ಮೊದಲಾದ ಬಾಕುಗಳನ್ನು ಧಾರಣ ಮಾಡಿದ್ದವರೂ, ಕಡಿತಲೆ ಚರದ ಗುರಾಣಿ ಧಾರಣ ಮಾಡಿದ್ದವರೂ ತಮ್ಮ ತಮ್ಮ ರಣಕವುಸಲ್ಯವನ್ನು ತಾಯಿಯಯ ಪ್ರೀತ್ಯಕ್ತವಾಗಿ ಪ್ರದರನ ಮಾಡುತ್ತಿದ್ದುದನು ವರಣನ ಮಾಡಲಕ ಸಬುಧಗಳು ಸಾಕಾಗವು ಸಿವನೇ. ಆ ಸಂಭ್ರಮವು ಬೆಳಕೋತ ಬೆಳಕೋತ ಸುತ್ತನ್ನಾಕಡೆ ಹಲವು ಹರದಾರಿ ದೂರಕ ಪಸರವಾಗಿತ್ತೆಂದರೆ ನೀನೇ ಲೆಕ್ಕಹಾಕು ಸಿವನೇ.. ಯೇಳಾಳೆತ್ತರ ನಿಲುವಿನ ಹುನ್ನಿನ ಮಂಟಪದ ನಟ್ಟನಡುವೆ ಯಿರಾಜಮಾನಳಾಗಿದ್ದ ಸಾಂಬವಿ ತನ್ನ ಕಣ್ಣುಗುಡ್ಡೆಗಳನ್ನು ಸುತ್ತನ್ನಾಕಡೇಕ ಗರಗರನಂತ ತಿರುಮೂತಃ ಗಮನಿಸುತ್ತಾ ಅಯ್ತಾಳೆ.. ಅಗೋ! ಅಲ್ಲಿ ತನ್ನಲ್ಲಿ ಅಯ್ಯವಾಗಲಿರುವ ಮಾಬಲಿ ಭಾಪ್ಪರೇ, ಸಾಸ್ತರಕ್ಕಾರ ವಂದೇ ವಂದು ಕಾಲನ ಮುರಿಸಿಕೊಂಡಿದ್ದುಂಟಾ...? ಸುಣ್ಣದ ನೀರನ ಕುಡಿದದ್ದುಂಟಾ? ಕಾಡಿಸಿದ್ದುಂಟಾ? ಪೀಡಿಸಿದ್ದುಂಟಾ? ತನಗ ತಾನೆ ಹೆಂಗ ಕೊರಳೊಡ್ಡಿರುವುದು ಕವೆಕಟ್ಟಿಗೆಯೊಳಗೆ.. ಭಪ್ಪರೇ! ಚಂಡ.. ಸದರೀ ಸದ್ಭಕುತ ಚಂಡನರುಂಡ ಚೆಂಡಾಲಕ ಬಂದಿರುವಂಥವನಾದ ಪುರಗುಂಡೀ ಗುರಪ್ಪನ ಸ್ವಾಸ್ಥಿ ಕುರಿತು ಹೇಳುವುದಾದರss.. ಅದೇ ವಂದು ರಾಮ್ಯಾಣವಾಗದ.......... ಗುರಪ್ಪನ ಸ್ವಾಸ್ಥಿ ಸದರೀ ಪಟ್ಟಣ ಯಂದು ಮಂದಿ ಅಂಬೋಣವು ಯಿದು ಖರೇ, ಯೀಗ ಸದ್ಯಕ ಅವಯ್ಯ ಸೊಕ್ಕೆಯ ರಾಜ ಮಾರನಾಯಕನ ಅರಮನೆಯ ಪಾಕಶಾಲೆಯ ವುಸ್ತುವಾರಿಯ ವುಜ್ಜುಗದಲ್ಲವನೆ. ಗುರಪ್ಪ ಕುದುರೆಡವಿನಿಂದ ಅಲ್ಲಿಗೆ ಯಾವಾಗ? ಯದಕ?