ಪುಟ:ಅರಮನೆ.pdf/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೨೯ ಗಂಡನಿಲ್ಲದ ರಂಡೆಗೆ ಸಮಾನ ಮಾಸ್ವಾಮೀ. ನಿಮ ಕಾಯಿಲೆ ನಯವಾಗದ ಪಕ್ಷದಲ್ಲಿ ನನ್ನ ಜೀವ ತೆಗೆಯುವಿರಂತೆ” ಯಂದು ಅಂಗಲಾಚಿದನು. ಅದಕ ನಾಯಕ ಸಮ್ಮತಿಸಿದನು. ಗುರಪ್ಪ ಗವುರವಪೂರುವಕವಾಗಿ ಸಾನ್ನಿಧ್ಯದಿಂದ ನಿರಮಿಸಿ.. ಕುಸಲ ಕವಣಿಗಾರನಾದ ತಾನು ಯೀಶಾನ್ಯ ದಿಕ್ಕಿನಲ್ಲಿ ಹಾರುತಲಿದ್ದ ಸಾಂಬಾರು ಕಾಗೆಯನ್ನೂ, ಆಗ್ನೆಯ ದಿಕ್ಕಿನಲ್ಲಿದ್ದ ಗಂಡು ಕೋತಿಯನ್ನೂ ಹೊಡೆದುರುಳಿಸಿದನು. ಅದರ ರಾಮಾ ರಗುತದಲ್ಲಿ ಯಿದರ ತರಡು ಬೀಜಗಳನ್ನು ತೇದು ಮೀರವರ ಕಾ ಲೇಹ್ಯವನ್ನು ತಯಾರಿಸಿ ಕಂಚಿನ ಚರಕಲಿಯಲ್ಲಿ ತುಂಬಿಕೊಂಡು ರಾಜನಲ್ಲಿಗೆ ಹೊಯ್ದು ದಿನಂಪ್ರತಿ ಮೂರೊಪ್ಪತ್ತು ಸೇವನ ಮಾಡಬೇಕು ದೊರೆ” ಯಂದು ಹೇಳುತ ಅರುಪಣ ಮಾಡಿದನು. ರಾಜನು ಅದರಂತೆ ಮಾಡುತ ಮೂರನೆ ದಿವಸದಲ್ಲೇ ಲೈಂಗಿಕವಾಗಿ ಕ್ರಿಯಾಸೀಲನಾದನು. ಅದರಿಂದ ಸಂತುಷ್ಟಗೊಂಡು ಗುರಪ್ಪನನ್ನು ಆಸ್ಥಾನಕ್ಕೆ ಬರಮಾಡಿಕೊಂಡು “ಯೇನು ಬಗುಸುತಿಯೋ ಬಗುಸು” ಯಂದು ಕೇಳಿದನು. ಆಗಿದ್ದು ಯಿವಯ್ಯನು ತನ್ನ ಪರಿಸ್ಥಿತಿ ಯಿವರಿಸಿ ವುದ್ಯೋಗ ದಯಪಾಲಿಸಿ ಅರಮನೇಲಿ ಸೇವೆಗೆ ಯಿಟ್ಟುಕೊಳ್ಳಿರೆಂದು ಯಿನ್ನಪ್ಪ ಮಾಡಿಕೊಂಡನು. ಅದಕಿದ್ದು ನಾಯಕನು ಯೀ ಪವಾಡ ಸದ್ರುಸ ಲೇಹ್ಯವನ್ನು ತನ್ನೊಬ್ಬನಿಗಲ್ಲದೆ ಬ್ಯಾರೆ ಯಾವ ಪುರುಸನಿಗೆ ಮಾಡಿಕೊಡಬಾರದೆಂದೂ, ಹಾಗೆ ಮಾಡಿಕೊಟ್ಟಲ್ಲಿ ಮರಣದಂಡನೆಯನ್ನು ಯಿಧಿಸಲಾಗುವುದೆಂದೂ ಯಚ್ಚರಿಕೆ ನೀಡಿ ಅರಮನೆಯ ಪಾಕಶಾಲೆಯ ವುಸ್ತುವಾರಿಕೆ ವುದ್ಯೋಗ ನೀಡಿದನು. ಯಿದು ಅಸಲು ಸಂಗತಿಯು.. ಹೀಗಿರುತ್ತಿರಲಾಗಿ ಕುದುರೆಡವು ಪಟ್ಟಣದಿಂದ “ತಾಯಿ ಸಾಂಬವಿ ಹೊಳೆಗೊಂಡಲಿ ರುವಳೆಂದೂ, ವಕ್ಕಲು ನಿಯಮದ ಪ್ರಕಾರ ಮಾಬಲಿಯ ಕೊರಳರದು ನಿನ ಯಿನ ನೀನು ತಗೊಂಡೋಗ ತಕ್ಕದಂದೂ” ನಿರೂಪ ತನ್ನ ಮನಿ ಬಾಕಿಲಿಗೇ ಬಂತು. ಯಷ್ಟು ಲಕ್ಷ ಕೊಟ್ಟರೆ ಸಿಕ್ಕಿತು ಯೀ ಸವುಭಾಗೈವು.. ಆ ಯಿಸ್ಕೋದಿಂದ ತನ್ನ ಸಂತಾನ ಸಾವರವಾಗುವುದು ಕೂಡ. ಗುರಪ್ಪ ಸಾನ್ನಿಧ್ಯಕ್ಕೆ ಹೋಗಿ ದೊರೆ ಹಿಂಗಂಗಂತ ಹೇಳಿಕೊಂಡ. ಯಲ್ಲಿ ಗುರಪ್ಪನ ರೂಪದಿಂ ತನ್ನ ಪುರುಷತ್ವವು ಪಲಾಯನವಾಗುವುದೋ ಯಂದು ನಾಯಕ ಮೊದಮೊದಲು ವಪ್ಪಲಿಲ್ಲ. ಕೊನೀಕಿದ್ದು ಆ ಚಾಣಾಕ್ಷನು 'ದೊರೆ