ಪುಟ:ಅರಮನೆ.pdf/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೩ರ ಅರಮನೆ ಮಾಬಲಿ ಅಂದರೆ ಸಾಮಾನ್ಯವಲ್ಲ. ಅದರ ತೊಟ್ಟು ಬೀಜಗಳನ್ನು ಯಾವಾತನು ಸದಾ ತನ್ನ ಕೊರಳಲ್ಲಿ ಕಟ್ಟಿ ಕೊಂಡಿರುವನೋ ಅಂಥಾತನು ಸ್ತ್ರೀಸೌಖ್ಯವನ್ನು ಜೀವನ ಪಲ್ಯಂತ ಅನುಭೋಸುವನು” ಯಂದು ಹೇಳಿದನು. ಅದರಿಂದ ಸಂತುಷ್ಟಗೊಂಡ ನಾಯಕನು “ಹಂಗಾದರೆ ಸಿಸಿ. ಅವನು ತಂದು ಯಿದ್ಯುಕ್ತವಾಗಿ ಸನ್ನಿಧಾನಕ್ಕೆ ತಪ್ಪಿಸಬೇಕು. ಮಾತಿಗೆ ತಪ್ಪಿದಲ್ಲಿ ಯಿದ್ದೇಯಿದೆ” ಯಂದು ಹೇಳಿ ದಾರಿ ಖರಿಗೆ ಕೊಟ್ಟು ಕಳುವಿದನು. ಕಾಲುಮುಟ್ಟಲಕ ಹೋದರ ಕಾಲು ಕೊಸರಲಿಲ್ಲ, ಕೊಂಬು ಮುಟ್ಟಲಕ ಹೋದರ ಹಿರಿಹಿರಿ ಹಿರಿಯಲಕ ಬರಲಿಲ್ಲ. ಯಾವ ಪುಣ್ಯಾತುಮ ಅದೆಂಗ ಬೆಳೆಸಿರುವನೋ ಯಿದನು.. ಸಾದು ಸಂತರ ಪಯ್ಕೆ ಯಿರುವಂಗಯ್ತಲ್ಲಾ, ಯಿದರ ಹಿಂಗಾಲುಗಳ ನಡುವೆ ಸೋಭಾಯಮಾನವಾಗಿ ಜೋಡು ಯಿಷ್ಟಲಿಂಗಗಳೋಪಾದಿಯಲ್ಲಿ ತೊಟ್ಟು ಬೀಜಗಳು ಜೋತಾಡುತ್ತಿರುವವಲ್ಲ. ಪ್ಲಾ.. ಹ್ವಾ.. ನಾಂಯುಕಾss.. ಯಿವುಗಳನ್ನಲಂಕರಿಸಿಕೊಳ್ಳೋ ನಿನ್ನನ್ನು ನೋಡಲಕೊಂದು ಚಂದ.. ನಿನ್ನೊಡನೆ ಮಾತನಾಡಲಕೊಂದು ಚಂದ.. ಯಿನ್ನೊಂದೆರಡು ಮೂರು ದಿವಸಗಳಲ್ಲಿ ತಾನಿವನ್ನು ನೀಡುವ ದೂರುವದಲ್ಲಿ ಹೇರಳ ಪೊಗದಿ ವಸೂಲು ಮಾಡಬೇಕಯ್ಕೆ, ವಕ್ಕಲು ಮಂದಿಯು ತನಗ ಬಲಗಾಲು ಬೇಕು, ತನಗ ಡುಬ್ಬ ಬೇಕು, ತನಗ ಹಿಂಗಾಲು ಬೇಕು, ತನಗೆ ಬಾಲ ಬೇಕು ಯಂದು ವಾದಾಡಿದರು. ಪುಣ್ಯಕ್ಕೆ ಮಾಬಲಿಯ ತೋಲ್ಲು ಬೀಜಗಳನ್ನು ಯಾರೂ ಬರಸುತ್ತಿಲ್ಲ. ರಾಜರ ಮಳಿಗದಲ್ಲಿರುವಾತ ಯಂಬ ಕಾರಣಕ್ಕೆ ಹಂಚುವ ಘನಕಾರವನ್ನು ತನಗೆ ವಹಿಸಿದ್ದೂ ಸಾಂಬವಿಯ ಕರುಣೆಯೇ ಸರಿ. ಸಿವನಾಮ ಪಾರೊತೀ ಪತಿ ಹರಹರ ಮಾದೇವss.. ಹತ್ತಾರು ಮರುಗಳಿಂದ ತಾಯಿಯ ಸೇವಕ್ಕೆಂದೇ ಆಗಮಿಸಿದ್ದ ನೂರಾರು ಮಂದಿ ಪೋತರಾಜರುಗಳು ತಮ್ಮ ತಮ್ಮ ಬಾಯಿಗಳಿಂದ ವಂದರಮ್ಯಾಲೊಂದಂತೆ ಆಡು, ಮೇಕೆಗಳನ್ನು ಜಿಗಿಜಿಗಿದು ರಾಸಿರಾಸಿ ಹಾಕುತಲಿದ್ದರು ಎಂದುಕಡೇಕ.. ಸದರಿ ಬಯಲ ಹತ್ತಾರು ಕಡಲಕಿದ್ದ ಸೂಲಗಂಭಗಳನ್ನೇರುತಲಿದ್ದೋರು ಯಷ್ಟೋ ಮಂದಿ? ಸಿಡಿ ಆಡುತಲಿದ್ದೋರು ಯಷ್ಟೋ ಮಂದಿ? ಬಲಿಗೊಂಡು ಹೆಣವಾಗುತಲಿದ್ದೋರು ಯಷ್ಟೋ ಮಂದಿ? ಆ ಹೆಣಗಳ ವಾರಸುದಾರರು ಯಷ್ಟೋ ಮಂದಿ..