ಪುಟ:ಅರಮನೆ.pdf/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೩ ಜಯನಾಮ ಪಾರೊತೀ ಪತಿ ಹರಹರ ಮಾದೇವಾ...... ಅಷ್ಟದಿಕ್ಷಾಲಕರ ಹೆಸರುಳ್ಳ ಮೆಟ್ಟಿಲುಗಳನ್ನೇರಿ ರಾಯಾಪುರದ ವಾಸ್ತುಶಿಲ್ಪಿ ಮಾಂಯಾಚಾರಿಯಿಂದ ನಿರಿತ ದ್ರುಶ್ಯಾವಳಿಗಳಿಂದಲಂಕೃತಗೊಂಡಿರುವ ಹುಬ್ಬಿನ ಮಂಟಪದಲ್ಲಿ ಯಿರಾಜ ಮಾನಳಾಗಿರುವ ಸಾಂಬವಿ ಸಮಕ್ಷಮದಲ್ಲಿ ಚಂಡನ ಸರೀರದಿಂದ ರುಂಡವನ್ನು ಬೇಡ್ವಡಿಸಲಕೆಂದು ದಪದಪ ಹೆಜ್ಜೆಯನಿಡುತ ಗುರಪ್ಪ ಸಂಗಡಿಗರೊಂದಿಗೆ ಬಂದು ಸಿರಸಾಷ್ಟಾಂಗ ಪ್ರಣಾಮ ಸಲ್ಲಿಸಿ ಯದ್ದಂಥಾದ್ದು ರುಧಿರೋದ್ದಾರಿ ಸಂವತ್ಸರದ ಆಶೀಜ ಬಹುಳ ಹನ್ನೆರಡನೇ ಮಂಗಳಾರ ದನಿಷ್ಟಾ ನಕ್ಷತ್ರಮೂರುಗಳಿಗೆ ಸಂದರದಲ್ಲಿ.. ಆ ಕೂಡಲೆ ಶತಭೀಷಾ ನಕ್ಷತ್ರಫಳಫಳನೆ ಮಿರುಗಿ ಮೆರೆಯಾಯಿತು. ಆಕಾಶದ ರಣಬಯಲಲ್ಲಿ ಭಯಂಕರ ಕಾಡುತೂಸಿನ ಕಾಳಗ ಸಂಭವಿಸುತ್ತಿರುವುದೋ ಯಂಬಂತೆ ಸಾವುರಾರು ವುಲ್ಕಾಪಾತಗಳಾದವು. ಬಲಿಕಾರಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೋಯಿಂದಗಿರಿಯ ರಾಜಾ ಲಚುಮಣ್ಣನಾಯಕ ಮತ್ತಾತನ ಆಮಾತ್ಯರಾದ ಕಲಕುಂದ ರಾಘಾಪ್ಪಾಚಾರ್, ಆನೆಗೊಂದಿ ವಲ್ಲಭಾಚಾರರು ತಮ್ಮ ತಮ್ಮ ಆಸನಗಳಿಂದೆದ್ದು ನಿಂತುಕೊಂಡರು. ಸಮಸ್ತ ಕುಂತಳ ಪ್ರಾಂತದೊಳಗಿನ ಮಜ್ಜಿಗೆ ಗುಡಾಣಗಳಲ್ಲಿ ಆ ಚಣದವರೆಗೆ ತೇಲಾಡುತಲಿದ್ದ ಬೆಣ್ಣೆವುಂಡೆಗಳು ದುಡುಂ ಅಂತ ಮುಳುಗಿದವು, ಸಿಂಧವಾಡಿ ಪ್ರಾಂತದ ಕೆರೆ ಗಿರ ಸರೋವರಗಳೆಲ್ಲ ಹೊಯ್ದಾಡಿದವು. ಯಿಸಿಲ ಪ್ರಾಂತದ ಗರುಭವತಿಂಯರ ಬಸಿರೊಳಗಿದ್ದ ಭೂಣಗಳು ಹಲ್ಲುಕಡಿದು ಕಟಕಟ ಕರಷ ಸಬುಧ ಮಾಡಿದವು, ಅಷ್ಟೇ ಅಲ್ಲದೆ ಸಮಸ್ತ ತೆಂಕಣ ಪ್ರಾಂತದಲ್ಲಿದ್ದ ಗುಡಿ, ಗುಂಡಾರ, ದೇವುಳ ದೇವಾಲಯಗಳಲ್ಲಿನ ಗಂಟೆಜಾಗಟೆಗಳು ತಮಗೆ ತಾವ ಅಲುಗಾಡಿ ಗಣಗಣ ಸಬುಧಮಾಡಿದವು, ಅಡಕಲ ಗಡುಗೆಗಳು ಅದುರಿದವು, ಗಿಡಮರಗಳಿಂದ ಯಲೆ, ಹುಟ್ಟು ಕಾಯಿ, ಬೀಚುಗಾಯಿಗಳು ತಮ್ಮ ತಮ್ಮ ಶಕ್ತಾನುಸಾರ ವುದುರಿದವು, ಯೇ ಪ್ರಕಾರವಾಗಿ ವಡಮೂಡಿದ ಸಗುನಗಳು, ಪವಾಡಗಳು ವಂದೇ ಯರಡೇ ಸಿವ ಸಿವಾss.. ದೆವ್ವ ಪೀಡೆ, ಪಿಚಾಚಿಗಳು ತಾವು ಅವುಚಿಟ್ಟುಕೊಂಡಿದ್ದ ಸರೀರಗಳನ್ನು ರೋಮಾಂಚನ, ಬೆಮರಿನ ಸ್ವಾಧೀನಕ್ಕೊಪ್ಪಿಸಿ ಪ್ರಾಂತ ಬಿಟ್ಟು ಪಲಾಯನ ಮಾಡಿದವು ಸಿವನೇ... ಸಾತ್ವಿಕ ಶಕ್ತಿಗಳು ತಮ್ಮ ತಮ್ಮ ಅಡಗುದಾಣಗಳಿಂದೀಚೆ ಬಂದವು ಸಿವನೇ..