ಪುಟ:ಅರಮನೆ.pdf/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಯೀ ಪ್ರಕಾರವಾಗಿ ಸದರಿ ಪಟ್ಟಣದೊಳಗ, ಸದರಿ ಪ್ರಾಂತದೊಳಗ, ಫಲಾನ ದೇಶವಿದೇಶಗಳೊಳಗ ಸಂಭವಿಸಿದ ಅಸಂಖ್ಯಾತ ಘಟನಾವಳಿಗಳನ ಪಟ್ಟಿಮಾಡುತ್ತ ಹೋದಲ್ಲಿ. ಸಿವ ಸಿವಾಳ... ಸಿವ ಸಿವಾ...... ವಂದು ಗಳಿಗೆ ಆತು, ಯರಡು ಗಳಿಗೆ ಆತು, ಮೂರನೆ ಗಳಿಗೆ ಮೂಡುತ್ತಲೆ ಗುರಪ್ಪ, ಮತ್ತವನ ಸಂಗಡಿಗರು ಚಂಡನ ಮುಂಡದಿಂದ ರುಂಡವನ್ನು ಬೇರುಪಡಿಸಿದೊಡನೆ ಚಿಲ್ಲೆಂದು ಚಿಮ್ಮಿದ ರಗುತವು ಹರಿತಾ ಹರಿತಾ ಸದರಿ ಕುದುರೆ ಪಟ್ಟಣದ ತುಂಬೆಲ್ಲ ತುಳುಕಾಡಿ ಮುಂದಕ ಪಾದಯಾತ್ರೆಕಮ್ಮಿಕೊಂಡು ಸಮುದ್ರಯಾನ ವಾಯುಯಾನ ಮಾಡುತ ಕುಂಪಣಿ ಸರಕಾರದ ಕಾರಸ್ಥಾನವಾದ ಬ್ರಿಟನ್ನನ್ನು ಪ್ರವೇಶ ಮಾಡಿತಂತೆ. ಬಂಕಿಂಗ್ಯಾಂ ಅರಮನೆಯ ಗೋಡೆಗಳಿಗೆ ಅಪ್ಪಳಿಸಿ ವಳನುಗ್ಗಿ ರಾಜರಾಣಿಯರ ಪಲ್ಲಂಗ ಗಳನ್ನಲ್ಲಾಡಿಸಿತಂತೆ. ಅಷ್ಟಕ್ಕೂ ತಮಣಿಯಾಗದೆ ಮತ್ತ ಸಮುದ್ರಯಾನ ಕಮ್ಮಿಕೊಂಡು ಖಂಡಾಂತರಗಳನ್ನು ದಾಟಿತಂತೆ. ಯಿರಲಿ ಅದೆಲ್ಲ ಯಿತ್ತ... ಆ ಕೂಡಲೆ ಯಚ್ಚತ್ತ ವಕ್ಕಲು ಮಂದಿ ಚಂಡನ ರುಂಡವನ್ನು ಮಂಟಪದ ಯದುರಲ್ಲಿ ಪ್ರತಿಷ«ಪಿಸದಿದ್ದಲ್ಲಿ, ನೆಣ ಸುರಿದು ಹಣತೆ ಮಾಡದಿದ್ದಲ್ಲಿ, ಕರುಳು ಹೊಸೆದು ಬತ್ತಿ ಮಾಡದಿದ್ದಲ್ಲಿ, ತಮ್ಮ ಯಿಚ್ಚಾಸಗುತಿಯ ಮಂಥನದಿಂದ ಬೆಂಕಿಮಾಡಿ ಮುಡಿಸದಿದ್ದಲ್ಲಿ.. ಮುಡಿಸಿ ಬೆಳಕು ಮಾಡದಿದ್ದಲ್ಲಿ.. ಆದಿಸಗುತಿಯ ರಣಧ್ರುಸ್ಟಿಯು ಭೂಮಂಡಲವನ್ನು ಸುಟ್ಟು ಭಸುಮ ಮಾಡದೆ ಯಿರುತ್ತಿರಲಿಲ್ಲವಂತೆ. ತಾಯಿಯ ಹಲವು ಯೋಜನದುದ್ದದ ನಾಲಗೆ ಸಚರಾಚರಗಳನ್ನು ನಾಕದೆ ಯಿರುತ್ತಿರಲಿಲ್ಲವಂತೆ. ಹಂಗss ತಮಣಿಗೊಂಡು ಚಿತ್‌ಜ್ಯೋತಿಯು ಬೆಳಕಿನ ಅಕ್ಷಯ ಪಾತ್ರೆಯಾಯಿತು ಯಂಬಲ್ಲಿಗೆ ಸಿವಸಂಕರ ಮಾದೇವಾss.. ಆಗ್ಗೆ ಲಕ್ಷಾಲಕ್ಷಾದಿ ಮಂದಿ ಬಾಯೊಳಗ ಜಗದಂಬೆಯಂಬ ಚತುಗ್ಲಾಕ್ಕರ ವ್ಯಾಪ್ತಿಯ ಮಂತ್ರಬಿಟ್ಟರೆ ಯಿನ್ನೊಂದು ಸಬುಧವಿರಲಿಲ್ಲ. ವರಣನಕ ನಿಲುಕದಿದ್ದ ಆ ದ್ರುಸ್ಯಾವಳಿಯನ್ನು ಗಬಗಬಾಂತ ತಮ್ಮ ತಮ್ಮ ಕಣ್ಣುಗಳಿಂದ ತಿಂಬಲಾರಂಭಿಸಿದರು. ನಿಂತು ನಿಂತ ಜೆಗೇವುಗಳ ಮ್ಯಾಲ ಕಡಕೊಂಡು ಬೀಳತೊಡಗಿದರು. ಮಂಟಪದ ತುಟ್ಟ ತುದಿಯಿಂದ.. ಭೋ ಪರಾಕ್ ಯಂಬುದಷ್ಟೇ ಕೇಳಿಬಂತೇ ಹೊರತು ಅದರ ಹಿಂದಲ ವಾಕ್ಯಗಳು ಕೇಳಿಬರಲಿಲ್ಲ. ಕೊಡಲಿಗಳು ನಕ್ಕಾವು. ಸುಡುಗಾಡುಗಳು ಅತ್ತಾವು ಯಂಬ