ಪುಟ:ಅರಮನೆ.pdf/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕಾರಣಿಕವನ್ನು ತಮಗೆ ತಾವ ಚರಿಸಿ ನಿಗದಿ ಮಾಡಿಕೊಂಡರು. ಅದರ ವಕ್ಕಣಿಕೆಯುಳ್ಳ ಜಾಬುಗಳನ್ನು ತಮ್ಮ ತಮ್ಮ ಕಾಲುಗಳಿಗೆ ಕಟ್ಟಿಸಿಕೊಂಡಂಥ ಸಾವುರಾರು ಅಂಚೆಗಾರ ಪಾರಿವಾಳಗಳು ಮುಗಿಲ ತುಂಬೆಲ್ಲ ಗಗನಚುಕ್ಕಿ ಭರಚುಕ್ಕಿಗಳಂತೆ ಹರಡಿದವು.. ಚಿತ್‌ಜ್ಯೋತಿಯ ಬೆಳಕಿನ ಪರಸಾದವನ್ನು ತಮ್ಮ ತಮ್ಮ ಹಣತೆಗಳಿಗೆ ಹಚ್ಚಿಕೊಂಡೊಯ್ಯಲಾರಂಭಿಸಿದರು ದೂರದೂರ ದೂರುಗಳಿಂದ ಬಂದಿದ್ದ ಭಕುತಾದಿಮಂದಿ.. ರಗುತಮಿಶ್ರಣದ ಮುತ್ತಿಕೆ, ಪತ್ರಪುಷ್ಟದ ಚೂರಗಳಂತೂ ಸಿಕ್ಕವರಿಗೆ ಸಿವಲಿಂಗಗಳಾದವು, ತಮ್ಮ ತಮ್ಮ ಹೆಣುದೇವತೆಗಳನ್ನು ತಮ್ಮ ತಮ್ಮ ಸೊಗ್ರಾಮಗಳಿಗೆ ಕರೆದೊಯ್ಯ ಲಾರಂಭಿಸಿದರು, ಆಯಾ ಮೂರು ಗ್ರಾಮಗಳ ಪಟ್ಟನೋ ಮಿಗಳು.. ಕೆಲವರುಗಳ ದೇವತೆಗಳನ್ನಂತೂ ಬಲು ಜುಲುಮಿಯಿಂದಲ್ಲಿಂದ ಸಾಗಿಸುತಲಿದ್ದುದಂತೂ ನೋಡುಗರ ಕರುಳಿಗೆ ಚುರುಕು ಮುಟ್ಟಿಸುವ ದ್ರುಸ್ಯವಾಗಿತ್ತು ಸಿವನೇ ........ ಅಯ್ತಿಹಾಸಿಕ ಪರಿಶೆಗೆ ನಾಂದಿ ಹಾಡಲಕಾಗಿ ಸಾವುರು ಗುಡಾರಗಳು ಅಲ್ಲಲ್ಲಿ ಚಿಗಿಂತಲಕತೊಡಗಿದ್ದವು ಸಿವನೇss.. ಅಂತೂ ತಾಯಿ ಹೊಳೆಗೆ ಹೊಂಟದ್ದಾಯಿತಲ್ಲಾ.. ಅನುವಾದ ಬಲಿಕೊಟ್ಟದ್ದಾಯಿತಲ್ಲಾ.. ಚಂಡನ ನೆತ್ತಿ ಮ್ಯಾಲ ವುರಿತಿರೋ ಚಿತ್‌ಜ್ಯೋತಿ ಆಕಾಸಮಾಗ್ಧದಗುಂಟ ಪಯಣ ಹೊಂದುವ ಮೊದಲೆ ನಯವೇದ್ಯ ಮಾಡಲಕಂಠ ಸುತ್ತನ್ನಾಕಡೇಕ ತಮ ತಮ್ಮ ಸವಾರಿ ಬಂಡಿಗಳೊಡನೆ ಹರಿದು ಹಂಚಿಹೋಗಿದ್ದ ಭಕುತಾದಿ ಮಂದಿ ತಾವೆಲ್ಲೆಲ್ಲಿ ಯಿಳಕೊಂಡಿದ್ದರೋ ಅಲ್ಲಲ್ಲಿ ವಲೆ ಹೂಡಲಾರಂಭಿಸಿದರು. ತಾಯಿ ಅನಕಂತ ಬೆಂಕಿ ಮುಡಿಸುವುದು, ಮೇಕೆ, ಟಗರು, ಕುರಿಗಳನ್ನು ಬಗೆದು ಕಣ್ಣೆ ಕಣ್ಣೆ ಮಾಮಸ ತೆಗೆಯುವುದು, ಸನ್ನಾಯ ರುಬ್ಬುವುದು ಮಾಡಲಾರಂಭಿಸಿದರು. ಅಲ್ಲಲ್ಲಿ ಭಜನೆಗಳನ್ನೇನು ಕೇಳುತ್ತೀ? ಲಾವಣಿ ಗೀಗೀ ಪದಗಳನ್ನೇನು ಕೇಳುತ್ತೀ? ಡೊಂಬರರಾಟಗಳನ್ನೇನು ಕೇಳುತ್ತೀ? ಹಗಲು ಯಾಸಗಾರರ ಆಟಗಳನ್ನೇನು ಕೇಳುತ್ತೀ ? ಸುರುಸುರುಬತ್ತಿಗಳನ್ನು ಹಚ್ಚುವುದನ್ನೇನು ಕೇಳುತ್ತೀ? ಕೋಲಾಟಗಳನ್ನೇನು ಕೇಳುತ್ತೀ? ಡಪ್ಪಿನಾಟಗಳನ್ನೇನು ಕೇಳುತ್ತೀ? ಪರಸಾದ ಸೇವಿಸಲಕ ಯಾರು ಕರೀತಾರ? ಸೇದಲಕ ತಂಬಾಕು ಯಾರು ಕೊಡುತಾರ? ಕುಡಿಯಲಕ ಮಗಿ ಮಗಿ ಹೆಂಡವನ್ಯಾರು ಕೊಡುತಾರ ಅಂತ ಸಾದು ಸಂತ ಮಂದಿ ಅರಂಬರ ನಶೇಲಿ ಅಡ್ಡಾಡಲಕ ಹತ್ತಿದ್ದೇನು ಕೇಳುತ್ತೀ? ನೋಡಲಕ ಸಿವಾ ಕೊಟ್ಟ ಯರಡೇ ಯರಡು ಕಣ್ಣುಗಳು ಸಾಕಾದಾವ? ಕೇಳಲಕ ಸಿವಾ ಕೊಟ್ಟ ಯರಡೇ ಯರಡು