ಪುಟ:ಅರಮನೆ.pdf/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕಿವಿಗಳು ಸಾಕಾದಾವಾ........ ಅತ್ತ ಮಾಯಾಚಾರಿ ಮಂಟಪದೊಳಗ ತಾಯಿ ಯಷ್ಟು ಹೊತ್ತೂಂತ ಯಿದ್ದಾಳು.. ನೋಡೋದು ನೋಡಿದಳು ಕೇಳೋದು ಕೇಳಿದಳು, ಕೊಡೋದನ್ನು ಕೊಟ್ಟಳು.. ಆಕೆಗೂ ದಣುವು ಅಂಬುವುದು ಯಿರುತತಲ್ಲಾ? ತಾನು ಸ್ರಾಂತಿ ತಗೊಳ್ಳೋದೆಲ್ಲಿ? ಖಾಯಮ್ಮಾಗಿ ನೆಲಗೊಳ್ಳೋದೆಲ್ಲಿ? ಯಂದು ಪ್ರಸ್ಮಾರವಾಗಿ ಕುಂತೇಸಿಂದಲೇ ಸುತ್ತನಾಕಡೇಕ ದ್ರುಸ್ಟಿ ಬೀರಿದಳು.. ಸಾಲುಸಾಲಾಗಿ ಮಾಳಿಗೆ ಮನೆಗಳು, ವುಪುEರಿಗೆ ಮನೆಗಳು, ತರಾವರಿ ಗುಡಿಸಿಲುಗಳು ಗೋಚರವಾಗಲಕ ಹತ್ತಿದವು.. ತಾನೀಗಾಗಲೇ ತನ್ನ ಪಯ್ಲೆ ಪಾವಲಿ ಭಾಗವನ್ನು ಭಕುತಾದಿ ಮಂದಿಯೊಳಗ ಮೊಕ್ಕಾಂ ಹೂಡಿಯಾಗಿರುವುದು, ಆಶ್ರಯ ಬೇಕಿರುವುದು ಮೂರು ಪಾವಲಿ ಭಾಗಕ್ಕೆ ಮಾತ್ರ.. ಮಂಟಪದೊಳಗ ಮೆಲುಮೆಲ್ಲಗ ಯದ್ದ ಅರಮಲ್ಲಿ ಲಟಲಟ ಅಂತ ಮಯ್ಯ ಮುರುಗಳು. ದಣುವರಿಯದ ಸಿಸುಮಗ ಹಂಪಜ್ಜನ ಕಡೇಕ ನೋಡುತ ವಂದೆಸಳು ಮಲ್ಲಿಗೆ ಗಾತುರದ ಮುಗುಳು ನಗೆ ಚೆಲ್ಲಿದಳು. ನೀನು ವುಳುಕೊಳ್ಳಲಕ ಬಿಡದಿ ಯಲ್ಲಿ ಮಾಡಬೇಕು ತಾಯಿ ಯಂದವಜ್ಜ ಕೇಳಿದ್ದಕ್ಕೆ ಆಕೆ ಜವಾಬು ನೀಡಲಿಲ್ಲ. ಅರರೆ! ತಾಯಿ ವಂದು ಮೆಟ್ಟಿಲು ಯಿಳಿದೇಬಿಟ್ಟಳು, ಜಯನಾಮ ಪಾರೊತೀ ಪತಿ ಹರಹರ ಮಾದೇವsss.. ವಂದೊಂದು ಮೆಟ್ಟಲಿಳಿಯೂತ, ದಿಕ್ಷಾಲಕರೊಬ್ಬೊಬ್ಬರ ಕ್ಷೇಮ ಸಮಾಚಾರ ಯಿಚಾರಸೂತ.. ಬಯಲ ಅಣು ಅಣುವನ್ನು ಪುಳಕಗೊಳಿಸೂತ ಯಿಳಿದ ಮಾಮಾಯಿ ಮತ್ತೆ ಸಿಮಾಸನಾ ರೂಢಿಯಾದೊಡನೆ ಮಂಗಳವಾದ್ಯಗಳು ಮೊಳಗಿದವು, ದೀವಟಿಗೆಗಳು ವುರಿದವು, ಮಡಿವಾಳರು ನೆಲದ ಮ್ಯಾಲ ಹಾಸುತಲಿದ್ದ ಜರತಾರಿ ಪೀತಾಂಬರಿ ಸೀರೆಗಳ ಮಾಲ ವಾತಾಯಿ ತನ್ನ ಬಿಡದಿ ಮನೆ ಹುಡುಕಿಕೊಂಡು ದಿಬ್ಬಣ ಹೊಂಟಳು ಸಿವನೇ.. ಬೀರೇಳು ಲೋಕಗಳನ್ನು ತನ್ನ ವಡಲೊಳಗಿಟ್ಟುಕೊಂಡು ದೊರೆಯುತ್ತಿರುವ ಲೋಕಮಾತೆ ತಾನು ನಿರಂತರ ವಾಸ ಮಾಡಲಕೆಂದು ಮನೆ ಹುಡುಕುತವಳೆಯಂಬ ವರಮಾನವು ಬಿರುಬಿರನೆ ಪಟ್ಟಣದ ತುಂಬೆಲ್ಲ ಹಬ್ಬಿತು. ಅಂಥ ಪರಿಶ ಸಡಗರವನ್ನು ಬದಿಗೊತ್ತಿ ವಂದೊಂದು ಮನೆಯವರು ನಮ್ಮ ಮನೆಯೊಳಗ ತಾಯಿ ನೆಲಸಿದರ ಯಷ್ಟು ಚನ್ನ? ತಮ್ಮ ಮನೆಯೊಳಗ ನೆಲಸಿದರ ಯಷ್ಟು ಚನ್ನ ಯಂದು ವುದ್ದರಿಸಿದರು. ಆಕೆ ಯಿಲ್ಲಿಗೆ ಬರುವ