ಪುಟ:ಅರಮನೆ.pdf/೪೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೩೬ ಅರಮನೆ ಗಳಿಗೆಯೂ ಆತೂss ತಾಯಿ ಯಿದ್ದಕ್ಕಿದ್ದಂತೆ ನೋಡು ನೋಡುತ್ತಿದ್ದಂತೆ ಬಿರುಗಾಳಿಯೋಪಾದಿಯಲ್ಲಿ ಅರಮನೆಯನ್ನು ಪ್ರವೇಸ ಮಾಡಿಬಿಟ್ಟಳು ಸಿವನೇ.. ಯಿದಾದ ಮರುಗಳಿಗೀಲೆ ರಾಜಮಾತೆ ಭಮ್ರಮಾಂಬೆ ಸೇರಿದಂತೆ ರಾಜಪರಿವಾರದ ಸರುವನ್ನೊಂದು ಮಂದಿ ಗಂಟುಮೂಟೆ ಕಟ್ಟಿಕೊಂಡು ಅರಮನೆಯಿಂದ ಮುಂದಿದ್ದ ಅಂಗಳಕ ಫುತುಪುತನೆ ವುದುರಿ ಯಿದು ಅನ್ಯಾಯ ಅಕ್ರಮ ಯಂದು ತಮ್ಮ ತಮ್ಮ ಬಾಯಿಗಳನು ಬಡಕೊಳ್ಳತೊಡಗಿದರು ಸಿವನೇ... ತಾಯಿಯ ಯೀ ಪವಾಡ ಕುತ್ಯ ಕಿವಿಗೆ ಬಿದ್ದೊಡನೆ ಪರಿಶೆಗೆ ಪರಿಶೆಯೇ ಕಡ ಬಡ ಮೋಡೋಡಿ ಅರಮನೆ ಸುತ್ತಮುತ್ತ ನೆರೆದು ಕುದುರೆಡವ ದೊರೆಸಾನಿ.. ನಿನಗಾರು ಸರಿ ಕಾಣಿ ಸರಿಯಂದವರ ಹಲ್ಲು ಮುರಿ ಭೋ ಪರಾಕ್ ಯಂದು ನಿನಾದ ಮಾಡಲಾರಂಭಿಸಿದರು ಸಿವನss ತಾಯಿ ಸಾಂಬವಿ ಸಿಮಾಸನಾರೂಢಿಯಾದದ್ದು ಫಲಾನ ಮೂರವಾದರ ತಾಯಿ ಪುವಲ ಅರಸುಮನತನದ ಮಂದಿ ವಡನಾಡಿದ್ದ ಯಿಷ್ಟಗಲ ಅಷ್ಟುದ್ದದ ಗಾರೆಗಚ್ಚು ಭವಂತಿ, ವುಪ್ಪರಿಗೆಗಳಿದ್ದ ಅರಮನೆಯನ್ನು ಕಬಜಾ ಮಾಡಿಕೊಡಿದ್ದು ಫಲಾನ ಸಂವತ್ಸರ, ಫಲಾನ ಮಾಸ, ಫಲಾನ ನಕ್ಷತ್ರದಲ್ಲಂದು ಯಂಬಲ್ಲಿಗೆ ಸಿವಸಂಕರ ಮಾದೇವಾss.. ಜಯಮಂಗಳಂ ಸಿವಸಂಕರ ಮಾದೇವಾss.. ನಿತ್ಯಸುಭಮಂಗಳಂ ಸಿವಸಂಕರ ಮಾದೇವಾss.