ಪುಟ:ಅರಮನೆ.pdf/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೩೭ ಪರ್ವ : ಮೂರು ತಾಯಿ ಸಾಂಬವಿಯ ಹೆಸರನ ಹೇಳಿಕೊಂಡು ಗುಡಿಹಿ೦ದಲ ಮೂಳೆ ಮೋಬಯ್ಯನು ಸ್ತ್ರೀಲಿಂಗ ವಾಚಕಕ್ಕೆ ಸೋಪ್ತಿಯಾಗಿ, ಮುಪ್ಪಾನು ಮುದುಕರ ದಂಡು ದವಲತ್ತು ಸಮೇತ ನಿವಸಿಸುತ್ತಿರುವಾಗ್ಗೆ... ಅರಮನೆಯೊಳಗೆ ದೇವಳಮೋ, ದೇವಳದೊಳಗ ಅರಮನೆಯೋss.. ಜನ ಆ ನಸುಗುನ್ನಿ ಕಾಯಿಯಂಥ ಗುಡಿ ಹಿ೦ದಲ ಮೂಳೆಮೋಬಯ್ಯನನ್ನೇ ಮಾಮಾಯಿ ಯಂದು ತಿಳಕೊಂಡು ದರುಸನ ಪಡಕೊಳ್ಳುತ್ತಾ ಹೋಗುವ ಸಲುವಾಗಿ ಯಿರುವೆಯೋಪಾದಿಯಲ್ಲಿ ಕುದುರೆಡವು ಪಟ್ಟಣಕ ಬರತೊಡಗಿದರು. ಯಲ್ಲಿ ಬೇಕೆಂದರಲ್ಲಿ ಹಾದಿಗಳು ನಾನಾ ಯಿದದಲ್ಲಿ ಮೂಡಲಾರಂಭಿಸಿದವು. ಅವ್ವನ ದೆಸೆಯಿಂದಾಗಿ ಕುದುರೆಡವು ಪಟ್ಟಣವು ಪ್ರತಿಯೊಬರ ನಾಲಗೆ ಮಾಲ ತಾನೇ ತಾನಾಗಿ ಯಿಜುಂಭಿಸತೊಡಗಿತು. ಭಕುತಾದಿ ಮಂದಿಯ ಯೋಗ ಛೇಮಗಳನ್ನು ಪರಾಂಬರಿಕೆ ಮಾಡುವ ಸಲುವಾಗಿ ಅಲ್ಲಿ ಏರುಪಟ್ಟಂಥ ಸೊಯಂ ಸೇವೆಗಳು ನಾನಾ ಯಿಧವಾಗಿದ್ದವು. ವುಂಬಲಕಾಗಲೀ, ಕುಡಿಯಲಕಾಗಲೀ, ಆಯಾಸ ಪರಿಹಾರಾರವಾಗಿ ಕುಂತು ಮಲಗಲಕಾಗಲೀ ಯಾವುದೇ ಹರಕತ್ತು ಯಿರಲಿಲ್ಲ...... ಬಾಯೊಳಗೆ ಬೊಟ್ಟಿಟ್ಟರ ಕಡಿಯಲಕ ಬಾರದಾಂಗಿದ್ದ.. ದಯ್ದಿಕ ಅಯ್ದು ಬಡಕೊಂಡವನಂತೆ ವರನ ಮಾಡುತಲಿದ್ದ ಮೋಬಯ್ಯ ರೂಪೀ ಸಾಚಾತ್ ಸಾಂಬವಿಗೆ ವರಮಾನದ ನಯನಾಜೂಕಿನ ಮೋನಾಮ ಕಲಿಸೋ ಸಲುವಾಗಿ.. ಸಾಂಬವಿಯಂಬುವ ಮೂರಕ್ಕರ ಸಬುಧವನ್ನು ಯಲ್ಲಿ ಬೇಕೆಂದರಲ್ಲಿ ನಾಟಿ ಮಾಡುವ ಸಲುವಾಗಿ.. ಹಂಪಜ್ಜನು ಟೊಂಕ ಕಟ್ಟಿ ಬಿಟ್ಟಿದ್ದನು. ಆತ ಹೇಳಿದಕ್ಕೆಲ್ಲಾ ತಲೆ ಅಲ್ಲಾಡಿಸುತಲಿದ್ದ ಕವಲೆತ್ತುಗಳು ವಂದು ಯರಡಾss.. ಜಡೆಪ್ಪ ತಾತ, ಕಾಡುಗೊಲ್ಲ ರೀರಯ್ಯ, ಗೊಂಚಾಡಲರ ಅಡವೆಜ್ಜ.. ಹಿಂಗಳ ಪಟ್ಟಿ ಬೆಳಕೋತ ಹೋತಯ್ಕೆ.. ಆ ವಬ್ಬೊಬ್ಬರ ಹಿಂದಿದ್ದ ಮುದೇರನು ಲೆಕ್ಕ ಹಾಕುತ್ತ ಹೋದಲ್ಲಿ... ಸಿವ ಸಿವಾ.. ನೋಡಿದೋರು ಯಿದೇನು ಅರಮನೆಯೋ.. ಸಾಧು ಸಂತ