ಪುಟ:ಅರಮನೆ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮತ್ತೊಂದು ಬಾರಿ “ಹೋಯ್ ಸೂರಾ.. ಯಲ್ಲದೀ ಮಗ್ನೆ?” ಯಂದು ಕೂಗಿದಳು. ಆಕೆಯ ಆ ಕೂಗು ಯೇಟೊಂದು ಸಕ್ತಿವುತವಾಗಿ ಯಿತ್ತೆಂದರೆ ಸೂರಪರಮಾತುಮನು ವಂಚಣ ಮಂಕಾದನು. ಯೇಕೆ ಹಿಂಗಾ ಕೂಗಿದರೆಲ್ಲಿ ಯವ್ವನ ಯಂಬ ಪದ ಮೂನವಾಗ್ತದೋ ಯಂದು ಸಬುಧ ಭಾವಿಸಿತದು. ಗಾಳಿಯ ತುಂಡೊಂದು ಆಕೆಯ ಕೂಗನ್ನು ಮುದ್ರೆಯುಂಗು ರೋಪಾದಿಯಲ್ಲಿ ತನ್ನಂಗಯ್ಯೋಳಗಿಟು ಕೊಂಡು ಸುಯ್ಯಂತ ಹೋಗಿ ಅನತಿ ದೂರದಲ್ಲಿ ಗೋಪಿಕಾ ಸ್ತ್ರೀಯಂಥ ಮಣಕವೊಂದನ್ನು ತನ್ನ ಮುಂದ ತರುಬಿಟ್ಟುಕೊಂಡು ಸಿರಿಕುಷ್ಣ ಪರಮಾತಮನಂತೆ ರಾಸಲೀಲಾಯಿನೋದದಲ್ಲಿ ನಿರತನಾಗಿದ್ದ ಸೂರ ಮಾಶಯನ ಕದ್ದ ಕುಂಡಲದೊಳಗುದುರಿಸಿತು. ಅದು ಮಸ್ತಕಕ್ಕೇರಿದೊಡನೆ ಜಂಘಾಬಲ ವುಡುಗಿದಂಗಾಗಿ ಆತಂಕಕ್ಕೀಡಾದ ಪ್ರಿಯತಮೆಗೆ ಮಾತುಕರೆಯನ್ನು ಅಲಕ್ಷಿಸುವಂತಿಲ್ಲ.. ಪ್ರಿಯೆ.. ಹೋಗಿ ಯೇನೆಂದು ಕೇಳಿ ಅನುಮತಿ ಪಡೆದು ಬರುವೆನು.. ಅಲ್ಪಕಾಲದ ಯಿರಹವನ್ನು ಸಹಿಸಿಕೋ” ಯಂದು ಹೇಳಿ ಸಮಾಧಾನಪಡಿಸಿ ಶರವೇಗದಲ್ಲಿ ಕ್ರಮಿಸಿ ತನ್ನ ತೀರರೂಪಳನ್ನು ಸೇರಿತು. ಅದನ್ನು ನೋಡಿದೊಡನೆ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ. ಅದರ ಮೂತಿಗೆ ಹುಸಿಪಟ್ಟನ್ನು ಹಾಕುತ್ತ “ನನ್ ಬಿಟ್ಟು ಯಲ್ಲೋಗಿದ್ಯೋ ನೀನು. ಯೇಟು ಬಾರಿ ಕೂಗಬೇಕೆಲೋ ನಿನ್ನ.. ಯೇಟೊತ್ ಯಾವಾಕೀನ ಅಡ್ಡಾಕೊಂಡಿದ್ದೆಲೋ... ನಿಂಗೇನು ಹೇಳೋರು ಕೇಳೋರು ಯಾರೂ ಯಿಲ್ಲಂದ್ಯಂಡೀಯಾ ಹೆಂಗೆ?” ಯಂದು ವಂದೇ ವುಸುರಿಗೆ ತರಾಟೆ ತೆಗೆದುಕೊಂಡಳು. ಆವಾಗಿದ್ದು ಅದು ಆಕೆಯ ಮುಖಮೂತಿ ಮುಂಗಯ್ಯ ನೆಕ್ಕಾಡುತ ತನ್ನ ವಯ್ಯ ಮನೆ ಭಾಷೆಯಲ್ಲಿ ಯೆನೇನೋ ಸಬೂಬು ಹೇಳಿತು. ಅದು ಆಕೆಗೆ ಅರವಾಗದೆಯಿರಲಿಲ್ಲ. ಸಿಕಣಪ್ಪಾ.. ನಾನಿನ್ನು ಕೂಳು ಕುಚ್ಚಿಡೋದಂತ್ತಪ್ಪಾ.. ಮಸ್ತು ವದಕನ ಬದುಕನ ಅದಾವ ಮನ್ಯಾಗ.. ನಾನೋಯ್ತಿನಿ.. ನೀನ್ಯಾವಾಗಾರ ಬಂದುಕಾ' ಯಂದು ಹೇಳಲು ಅದು ವಯ್ಯ ವಯ್ಯನೆ ಹಾಡುತ ಠಣ ಠಣ್ಣ ಜಿಕ್ಕೋತ ಜಿಕ್ಕೋತ ಸಂತೋಷದಿಂದ ಮೋಡಿ ಹೋಯಿತು. ಮಿನ್ನೇನದು ಮರೆಯಾಗಲಿದೆ ಅಂಬುವಾಗ “ವುಮಾರಿ ಕಣ ಮಗಾ.. ಕಾಲ ಸುಮಾರಾಗಯ್ತಿ' ಯಂದು ಮರೆತಿದ್ದ ಮಾತನ್ನು ಕೂಗಿ ಹೇಳದೆಯಿರಲಿಲ್ಲ ಜಗಲೂರೆವ್ವ.... ಸಮಾಧಾನದ ವುಸುರು ಬಿಟ್ಟು ಸುತ್ತನ್ನಾಕಡೆ ಕಣ್ಣಾಡಿಸಿ ಸುತ್ತಮುತ್ತ ನೋಟ ಮಾತ್ರದಿಂದ ಅಗೋಚರ ಬೇಲಿ ರಚನೆ ಮಾಡಿದಳು. ಮುದ್ಯೋನು ಮನೀಗೆ ಬಂದಾನೋ, ಯಿಲ್ಲಾ ಅರಮನ್ಯಾಗಯಿದಾನೋ? ವುಂಡೋ, ಯಲ್ಲಾ