ಪುಟ:ಅರಮನೆ.pdf/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪೦ ಅರಮನೆ “ಯಾಕರಂಯಾ ನಗಾಡಿದಿರಿ.. ಯೂ ಪಿಕದಾನಿ ಹಿಡಿಯೋನ ಸರೀರದೊಳಗ ಸಾಂಬವಿ ವಸ್ತಿ ಮಾಡಿರೋದನು ನಂಬುವ ನೀವು ಅರಮನೆ ನನ್ನಂಥ ಮುದುಕಿ ರೂಪಧಾರಣ ಮಾಡಿದರೆ ಯಾಕ ನಂಬುವಲ್ಲಿರಿ..? ತಿಬ್ಬಳಿಸಿ ನನ್ನss ನೋಡಿದರೆಂದರೆ ನಿಮ್ಮೆದೆಯೊಳಗೆ ಅರಮನೆ ಮೂಡೀತು.. ಅದು ನನ್ನನ್ನss ಹೋಲೀತು.” ಯಂದುದು ಅಂದದ್ದಕ್ಕೆ ಅವರೆಲ್ಲ ಬಾಯಿ ಮ್ಯಾಲ ಬೊಟ್ಟಿಟ್ಟು ಕೊಂಡರು. ಸಾಂಬವಿಯ ಸಿಸುಮಗ ಮೋಬಯ್ಯನ ಕಡೀಕೊಮ್ಮೆ ಅದರ ಕಡೀಕೊಮ್ಮೆ ನೋಡುತ ನಂಬದಂಗಾದರು.. ನಂಬದಂಗೆ ಯಿರದಾದರು..... ಸದರಿ ಅರಮನೆಯನ್ನು ಯಿದರ ಭವುತಿಕ ಸರೀರ ಹೋಲುವುದಾ, ಯಿಲ್ಲವಾ ಯಂಬಂತೆ ಅವರು ನೋಡುತ್ತಿರಲು.... - “ಯಾಕರಯ್ಯಾ.. ನಾನು ಅರಮನೇನ ಹೋಲುತ್ತಿಲ್ಲವಾ? ನನ್ನ ಸರೀರದ ಯಡ ಭಾಗಕ್ಕೆ ಹವಾಮಹಲಂಬುತಾರ.. ಬಲ ಭಾಗಕ್ಕೆ ರಾಜಮಹಲಂಬುತ್ತಾರೆ, ಸಿರೋಭಾಗಕ್ಕೆ ವುಪ್ಪರಿಗೆ.. ಮುಂಡ ಭಾಗಕ್ಕೆ ದರಬಾರು ಅಂಬುತಾರೆ..” ಯಂದದು ಹೇಳಲು ಯಲ್ಲಾರು ಅಡಲ್ಲಾದರು. ನಾಲಕಯ್ದು ಯಕರೆ ಯಿಸ್ತೀದ್ದದ ಪುರಾತನ ಅರಮನೆಯೇ ತಮ್ಮೆದುರು ಜಗ್ಗಿಸಿ ನುಡಿಯುತ್ತಿರುವಂತೆ ಭಾಸವಾಯಿತೆಲ್ಲರಿಗೆ.... ಅರಮನೆಯವ್ವಾ. ಅಂಬದ ಯಿರಲಾಗಲಿಲ್ಲ.. ಯಾಕ ಕಣ್ಣಿನ ತೇವ ಮಾಡಿಕೊಂಡಿ ಪೂರುವಿಕಳೇ ಯಂದು ಕೇಳದೆ ಯಿರಲಾಗಲಿಲ್ಲ. ಮುದೇದು ತನ್ನ ಕಣ್ಣೂಳಗ ಝಳ ತಂದಕಂಡು.. ಯಿವೀಸು ಮಂದಿಯೊಳಗ ಯಾರು ಅಸಲಿಯೋ, ಯಾರು ನಕಲಿಯೋ ನನಗರಿವಿಗ ಬರುತಾಯಿಲ್ಲ.. ಸಾಂಬವಿ ಅದಾಳಂಬುತಾರಿಲ್ಲಿ.. ಅಕೀಗ ನಾನು ಹೇಳುವಾಕೇ ಸಯ್ಯ.. ಆಕಿ ಕೇಳಿಸಿಕೊಂಡರೂ ಸಯ್ಯ... ಕೇಳದಿದ್ದರೂ ಸಯ್ಯ.. ಅವ್ವಾ ಸಾಂಬವೀ.. ಯಾವ ಅಡ್ಡಾಯಕಂಡು ಅರಮನೇನ ಕಬ್ಬಾ ಮಾಡಿಕೊಂಡಿರುವಿ?.. ಬಂದು ವಂದುತ್ತುಂಡೋಗಿದ್ದರ ನಂದೇನು ತಕರಾರಿರಲಿಲ್ಲ.. ಆದರ ನೀವು ಪುಲ ರಾಜ ವಮುಸದ ಸಮಸ್ತರನ ಹೊರಗ ಹಾಕಿದ್ದು ನ್ಯಾಯವಾ? ನನ್ ಪುವ್ವಲ ರಾಜರು ಮಾಡಿರೋ ವುಪಕಾರ ಸ್ಮರಣೆ ನಿನಗುಂಟಾ? ಗುಡೇಕಾಟೇಲಿ ಪಾರೊತಿದೇವಳ ಕಟ್ಟಿಸಿದಾತ ನಮ ಪದಬೊಮನಾಯಕ, ಮಡರಳ್ಳಿಲಿ ಮಡ್ಲಿಸವುಡವ್ವನ ಗುಡಿಕಟ್ಟಿಸಿದಾತ ನಮ ಚಿನ ಬೊಮ್ಮಯ