ಪುಟ:ಅರಮನೆ.pdf/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೪೧ ನಾಯಕ.. ಸಿಡೇಗಲ್ಲಲಿ ಸಿಡ್ಡು ದುರುಗವ್ವನ ಗುಡಿ ಕಟ್ಟಿಸಿದಾತ ನಮ ಮದಕೇರೆಪ್ಪನಾಯಕ.. ಹಲಕುಂದೇಲಿ ರಣಮಾರೆವ್ವನ ಗುಡಿ ಕಟ್ಟಿಸಿದಾತ ನಮ ಹೊನ್ನಪ್ಪಯ ನಾಯಕ.. ಹಿಂಗು ವಂದೊಂದು ಮರೊಳಗ ವಂದೊಂದು ಗುಡಿಕಟ್ಟಿಸವರೇ.. ಆಸ್ತಿಕ ಭಾವನ ಮರೆದವರೇ... ಕೆರೆಕಟ್ಟಿಸವರೇ... ಬೇಯಿನ ಮರಗಳ ನೆಡುಸವರೇ.. ಮುತ್ತಯ್ದೆರ ವುಡಿ ತುಂಬಿ ಕಳಸವರೇ.. ಹಸಿದವರ ವಡಲಿಗೆ ಬಾನ ಹಾಕವರೇ.. ಹಬ್ಬಹರಿದಿನ ನಿಲ್ಲಿಸಿದೋರಲ್ಲ. ದೇಹಿ ಅಂತ ಬಂದವರನ ಬರಿಗಯ್ದ ಕಳಿಸಿಲ್ಲ ನಮ ಪುವ್ವಲ ರಾಜವಮುಸಸ್ಥ ಮಂದಿ ಮಾದೇವಿ.. ಯಿಂಥ ಆಸ್ತೀಕ ಭಾವದ ನನ ಮಕ್ಕಳ ಕುಂಡಿಮ್ಯಾಲ ಬರೆಯಳೆಯೋ ದುರುದ್ದಿ ನಿನಗ್ಯಾಕ ಬಂತೂಂತ.. ನನ ಪುವ್ವಲ ವಮುಗ್ಧ ಮಂದೀಯ ಸಿಮ್ಮಾಸನ ಕಸಗೊಂಡೀ.. ಅರಮನೇನ ಕಸಗೊಂಡೀ.. ಅವರು.. ಆ ಧರಿಷ«ರು ಪದ ಭ್ರಷಗೊಂಡು ಕೂಲಿ ನಾಲಿ ಮಾಡಿ ಬದುಕೋದು ನಿನ್ನ ಮನಸ್ಸಿಗೆ ವಷ್ಟುವಂಥ ಮಾತೇನವ್ವಾ? ಹಿಂಗss ಮುಂತಾಗಿ ಆ ಮುದೇದರ ಮಾತೊಳಗ ರವುಸ ಆಕ್ರೋಸಗಳು ಸಂಗಮಿಸಿದ್ದವು ಸಿವನೇ..... ಕೇಳುತಾ... ಕೇಳುತಾ ಮೋಬಯ್ಯನು ತನ್ನ ಕಾಳರಾತ್ರಿಯಂಥಾ ತುಟಿಗಳ ನಡುವೆ ಬೆಳದಿಂಗಳೆಸಳಿನಂಥಾ ಮುಗುಳುನಗೆಯ ರೇಖೆಯನ್ನು ತಂದುಕೊಂಡನು. ಅದಕ್ಕೆ ಭಾಷೆಯ ರೂಪ ಕೊಡುವ ಸಲುವಾಗಿ ಹಂಪಜ್ಜನು ಗಾಳಿಯೊಳಗೆ ಕಯಾಡಿಸುತಾ ಯಿ ಪ್ರಕಾರವಾಗಿ ಹೇಳಿದನು.... ಅರಮನೆಯವ್ವಾ.. ರಾಜರನ್ನಷ್ಟೇ ನನ ಮಕ್ಕೂ.. ನನ ಮಕ್ಕೂ ಅಂಬುತೀಂರುಲ್ಲಾ.. ಯಿದು ನ್ಯಾಂ ಅಂರಾ.. ಪ್ರಜೆಗಳೂ ನಿನ ಮಕ್ಕಳಲ್ಲವೇನವ್ವಾ?.. ಪ್ರಜೆಗಳಿಲ್ಲದಿದ್ದರೆ ನೀನೆಲ್ಲಿರುತೀ.. ರಾಜರಲ್ಲಿರುತಾರ.. ಸಾಂಬವಿಯಲ್ಲಿರುತಾಳ.. ರಮೈಟು ಯೋಚನೆ ಮಾಡಿದ್ದೇನು? ಹೀಗೀಗಂತೂ ಕುಂಪಣಿ ಸರಕಾರ ರಾಜಸತ್ತೆ ಕಿತ್ತಗಂಡಯ್ಕೆ. ಸಿ ಸರೇ... ಆದರೆ ಅವರು ತಮ್ಮ ಕಯ್ಯ ನಡೀತ್ತಿದ್ದ ಕಾಲದೊಳಗೆ ಪ್ರಜೆಗಳಿಗೆ ಯಾವ ವುಪಕಾರ ಮಾಡ್ಯಾರ ನೀನೇ ಹೇಳು.. ಬರ ಬಂದು ಪ್ರಜೆಗಳಿಲ್ಲಿ ವುವಾಸ ವನುವಾಸ ಅನುಭೋಸುತಲಿದ್ದ ಕಾಲದಲ್ಲಿ ಯೀ ಪುವ್ವಲ ರಾಜರು ಕೂಳು ನೀರು ನಿಡಿ ಜೋಡಿಸಿದ್ದುಂಟಾ.. ಪ್ರಜೆಗಳಿಂದ ಮಕ್ಕಳನ್ನು ಕಾಸಿಗೊಂದು ಕೊಸರಿಗೊಂದೊರಂತೆ ಕೊಂಡುಕೊಂಡು ಸದ್ಯಕ್ಕೆ ಸೇರಿಸಿಕೊಂಡರೇ ವಿನಾ ಕಣ್ಣೀರೊರೆಸಿದ್ದುಂಟೇನು? ಬರೀ ಗುಡಿಗಳನ ಕಟ್ಟಿಸಿದರಷ್ಟೇ ವಿನಾ