ಪುಟ:ಅರಮನೆ.pdf/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕೆರೆಕಟ್ಟಿಸಿದ್ದುಂಟೇನು? ನೀರು ತರುಬಿರೋದುಂಟೇನು? ನಿನ ಮಕ್ಕಳಾದ ಪೇದೋಬನಾಂಕ, ಬೊಮ್ಮನಾಯಕ, ಮದಕೆರೆಪ್ಪನಾಯಕ, ಭರಮಪ್ಪ ನಾಯಕರೇನು ಮಾಡಿರುವರೆಂಬ ಸಂಗತಿ ನಿನಗೂ ಗೊತ್ತು.. ಪ್ರಜೆಗಳಿಗೂ ಗೊತ್ತು.. ನೀನು ಹೋಗಲೇ ಹೋಗಿ ಅವರ ಆತುಮಗಳನ್ನು ಜಾಲಾಡಿಸಿ ಕೇಳು.. ಆ ರಾಜಮಾತೇನ ಕೇಳು.. ಸುಮ್ ಸುಮಕ ಸಾಂಬವೀನ ಅಂದಾಡ ಬ್ಯಾಡ... ಸಾಂಬವಿ ಯೇನು ಸುಮ ಸುಮಕ ಸಿಮ್ಯಾಸನನ ಬಗಸಲಿಲ್ಲ.. ಅರಮನೇನ ಬಗಸಲಿಲ್ಲ... ಪ್ರಜೆಗಳೇ ರೋಸಿ ಕೊಟ್ಟಿರೋದಯ್ಕೆ.. ತಿಳಕಾ.. ಪ್ರಜೆಗಳು ಬ್ಯಾಡನ್ನಲಿ.. ನಾವ್ಯಾರೂ ಅರೆಗಳಿಗೆ ಯಲ್ಲಿರುವವರಲ್ಲ.” ಕೇಳಿಸಿಕೊಂಡ ಹಿರೀಕರೊಂದೇ ಅಲ್ಲದ ಸುತ್ತ ಮುತ್ತ ನೆರೆದಿದ್ದಂಥ ಭಕುತಾದಿ ಮಂದಿಯೂ ಸಯ್ಯ ಸಯ್ಯ ಅಂದು ಹಂಪಜ್ಜನ ಮಾತಿಗೆ ಪುಟಿಗೆ ನೀಡಿದರು. ತಮ್ಮ ತಮ್ಮ ದೂರುಗಳ ರಾಜಸತ್ತೆಗಳದೂ ಯದೇ ಕಥೆಯಾ ಅಂದರು. ಮುದಕಿ ಅರಮನೆಯ ವಂಚಣ ಮಾರೀನ ಸಪ್ಪಗೆ ಮಾಡಿಕೊಂಡು ಹಂಪಜ್ಜನಾಡಿದ ಮಾತುಗಳ ಸತ್ಯಾಸತ್ಯತೆ ಕುರಿತು ಯೋಚನೆ ಮಾಡಿದಳು. ಹೊಗೆ ಆಡೋ ಕಡೇಕ ಬೆಂಕಿ ಯಾವ ರೀತಿ ಇರುವುದೋ ಹಂಗ ಪಾಪ ತುಂಬಿದ ಕಡೆ ಅದನ್ನು ಯಿಲೇವಾರಿ ಮಾಡುವುದಕೆಂದು ತಾಯಿ ಯಿರುತಾಳ ಯಂಬುದು ಯುಗ ಯುಗಗಳು ಕಂಡುಂಡಿರುವ ಸತ್ಯವು.. ತಾನು ಯೇ ಕಾಲದಾಕಿಯಲ್ಲ. ಲೀಗ್ಗೆ ನಾನ್ನೂರು ವರುಷಗಳ ಹಿಂದೆ ಗುಡೇಕೋಟೆ ದುರುಗವನ್ನು ವಳಿತು ಮಾಡಿಕೊಂಡು ಆಳಿದಂಥಾ ರಣಕದಿರೇನಾಯಕನ ಯೇಕ ಮಾತ್ರಪುತ್ರರಣಕಲಿ ಭದ್ರವನಾಯಕ ಕಟ್ಟೆಯಿಸಿದ್ದೆಂದು ಹೇಳಲಾಗುವ ಸಿಲಾ ಸಾಸನ ವಂದು ಸದರಿ ಪಟ್ಟಣದ ವುತ್ತರ ದಿಕ್ಕಿನಲ್ಲಿ ಯಿರುವುದು. ಅದಕ್ಕೂ ದೂತ್ವದಲ್ಲಿ ಕೊಡ್ಲೆ ಸಣಮುಂಡಯ್ಯನೆಂಬಾತನು ತನಗೆ ತೋಚಿದಂಗ ರಾಜ್ಯಭಾರ ಮಾಡುತಲಿದ್ದ ಮೂರು ಅಂಗಯಿಯಗಲ ಯಿತ್ತು. ಆ ಕಾಲಕ್ಕೇನೆ ತಾನು ನೆಲದಡೀಕೆ ಯಿದ್ದಳು. ಭದ್ರವನಾಯಕ ತನ್ನ ಕುದುರೆ ಜಟಾಯು ಯಡವಿ ಬಿದ್ದ ಜಾಗದಲ್ಲಿ ಎಂದು ರಾಜ್ಯವ ಕಟ್ಟಬೇಕು.. ವಂದು ಅರಮನೇನ ಯಬ್ಬಿಸಬೇಕು ಯಂದು ನಿಲ್ದಾರ ಮಾಡಿ ವಸ್ತಿ ಹಾಕಿಯೇ ಬಿಟ್ಟನು. ವಂದಿನ ಆತ ಮಕ್ಕೊಂಡಿರುವಾಗ “ಹೊರಗ ಬರುತೀನಿ.. ನನ್ನಲ್ಲಿಂದ ಬಿಡುಗಡೆ ಮಾಡಿ ಪುಣ್ಯಕಟ್ಟುಕೋ' ಯಂದು ತಾನು ಪರಿಪರಿಯಿಂದ ಅಂಗಲಾಚಿದ್ದುಂಟು...