ಪುಟ:ಅರಮನೆ.pdf/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೪

ಅರಮನೆ


ಯಾಕವ್ವಾ.. ಮೂರುಬಿಟ್ಟು ಮಲ್ಲಿಗೋಗುತೀ ತಾಯಿ?” ರಂದು
ಯಿಚಾರಿಸುತ್ತಿದ್ದವು. ತನ್ನ ಪರಿಸ್ಥಿತಿಯು ಅಂಗಯ್ಯ ಹುಣ್ಣಿನಷ್ಟೆ ಸತ್ಯವು. ಯೇನಂತ
ಯಿವರಿಸಿಯಾಳು? ಯಾವುದಕ್ಕೂ ಮೋಬಯ್ಯ ಅರಮನೆಯನ್ನು ಕಬ್ಬಾ
ಮಾಡಿರುವುದರ ಬಗೆಗಾಗಲೀ, ರಾಜಪರಿವಾರದೋರು ಭ್ರಷ್ಟಿದ್ದು
ಹೋಗಿರುವುದರ ಬಗೆಗಾಗಲೀ ಖೇದ ವಂಥಟಗು ಯಿದ್ದಂಗಿಲ್ಲ. ಯಂದು ಯೋಚಿಸುತ ಯೋಚಿಸುತ ಅರಮನೆಯವ್ವ... ಕುದುರೆಡವು ಪಟ್ಟಣವು ಸೋಭಾಯಮಾನವಾಗಲು ಕಾರಣಕತ್ತರಾದ ಕಸುಬಸ್ಥ ಮಂದಿ ಯೀ ಪ್ರಕಾರ ಯಿರುವರು... ಅವನ ಖಾಸಾ ವಾರ ಯನಿಸಿದ ಮಂಗಳದಾಯಕ ಮಂಗಳವಾರದಂದು ನೂರಾರು ಕುರಿ ಮೇಕೆಗಳು ಬಲಿಗೊಳ್ಳುವವೆಂಬ ವರಮಾನಕ್ಕನುಸಾರವಾಗಿ ಅವ ಕೈ ತುಸು ನೋವಾಗದಂತೆ ಕಡಿಂುವಲ್ಲಿ ನಿಪುಣರೂ, ದಯಾಮರುಸಂಪನ್ನರೂ ಆದಂಥ ಕಟುಕರ ದಯಾನಂದನು ಕವುತಾಳದಿಂದಲೂ.. ಕಟುಕರ ಕರುಣಾಕರನು ರವಡೂರಿನಿಂದಲೂ.. ಕಟುಕರ ಕರುಳಪ್ಪನು ಕಮ್ಮರ ಚೇಡುವಿನಿಂದಲೂss... ಬರುವ ಭಕುತಾದಿವಂದಿಂರು ಪೂಜಾಕಂತುಂಕಯ್ಯಾರವಾಗಿ ಖರೀದಿಸುವಂಥ ಸಾಮಾನುಗಳಾದ ಕಾಯಿ, ಹೂವು, ಹಣ್ಣು, ಲೋಬಾನ, ಕುಂಕುಮ, ಲೋಭಾನ ಯವೇ ಮೊದಲಾದುವುಗಳನ್ನು ಮಾರು ವಂಥವರಾದ ಕರುಬಸಪ್ಪ ಕರಿಂಗೋಮಲದಿಂದಲೂ, ವಲಯಾರಪ್ಪ ವಡ್ರಳ್ಳಿಯಿಂದಲೂ, ವಯಿಲಾರ ಪ್ಪನು ವಾರದಿಂದಲೂ.. ವುರುಕು೦ದೆ ಪ್ಪ ಹಾಲೇರಿಯಿಂದಲೂsss... ಬರುವ ಭಕುತಾದಿ ಮಂದಿಯ ವುದರಪೋಷಣೆ ಮಾಡಲೆಂದು ಹೊರಟವರು, ಸಿವಲಿಂಗನು ಕುಕ್ಕುಪ್ಪಿಯಿ೦ಲೂ, ಮಾಲಿಂಗನು ಹರವದಿಯಿಂದಲೂ, ಕುಳ್ಳಾಯಿಯು ಕೊಕ್ಕರಚೇಡುವಿ ನಿಂದಲೂsss .. ಬರುವ ಭಕುತಾದಿಯ ಪ್ರಮುಖ ಯಿಂದ್ರಿಯ ಅಗತ್ಯ ಪೂರಯಿಕೆ ಮಾಡಲೆಂದು ರುಕ್ಕುಮಿಣಿಯು ಕಂದಗಲ್ಲಿನಿಂದಲೂ, ಲಚ್ಚುಮಿಯು ಮಾರಲಮಡಕೆಯಿಂದಲೂ, ಚಂದ್ರವ್ವನು ಹನಸಿಯಿಂದಲೂ, ಬಸವ್ವನು ಅಮ್ಮನಕೇರಿಯಿಂದಲೂss..