ಪುಟ:ಅರಮನೆ.pdf/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಅವರವರು ಅವರವರ ಹಾದಿಯಲ್ಲಿದ್ದು ಕುದುರೆಡವು ಕಡೇಕ ತಮ ತಮ್ಮ ಸಮುಸಾರ ಸಮೇತ ಮುಖ ಮಾಡಿರುವಾಗ್ಗೆ.. ತಮ ತಮಗಾಗೋ ಲಾಭ ಲುಕ್ಸಾಣನ್ನು ಲೆಕ್ಕ ಹಾಕುತ್ತಿರುವಾಗ್ಗೆ.. ಹೆಜ್ಜೆ ಹೆಜ್ಜೆಗೆ ಸಿವನಾಮ ಪಾರೋತಿಯ ನಾಮ ಸರಣೆ ಮಾಡುತ್ತಿರುವಾಗ್ಗೆ. ಅವರು ಹೆಜ್ಜೆಯಿಡುತ್ತಿದ್ದೇಟಿಗೆ ಹಾದಿ ತಂತಾನೆ ವುದ್ದುದ್ದಕ ಆಗುತ್ತಿರುವಾಗ್ಗೆ.... “ನೀನೇ ರಾಜಮಾತೆ ಭಯವಮಾಂಬೆ ಅಂಬುದಕ ಮೀನ ಗುರುತ ತೋರಿಸಬೇಕು ತಾಯಿ” ಯಂದು ಧರುವಛತ್ರದ ಧರುಮದರುಶಿ ಯಂಕೋಬರಾಯನು ಕೇಳಿದ್ದಕ್ಕೆ “ಯಿದೇ ನೋಡಪ್ಪಾ” ಯಂದು ಆಕೆಯು ಯಿದನ್ನು ತೋರಿಸುತ್ತಿದ್ದಳು. ಅದನ್ನು ನೋಡಿ ಅನುಮಾನ ವದಗಿ ರಾಯನು ಅಯವ್ವನನ್ನು ನಖಶಿಖಾಂತ ಪರಾಂಬರಿಸಿದನು. ರಾಜಕಳೆ ವಂಥಟಗಾದರೂ ಆಕೆಯ ಮಯ್ಯ ಮಾಲ ವುಳುದಿರಲಿಲ್ಲ. ಯಲ್ಲೂವರೆ ದಿನಮಾನದ ಪ್ರಯಾಣದಿಂದಾಗಿ ಕುದುರೆಡವು ಮತ್ತು ಕೂಡ್ಲಿಗಿ ಪಟ್ಟಣಗಳ ನಡುವೆ ಯಿದ್ದ ರಗಡು ಹಾದಿ ಆಕೆಯ ಸರೀಶ “ಯಿಲ್ಲ ಯಜಮಾನ ನಾನೇ ರಾಜಮಾತೆ” ಅಂದರೂ ಅವಯ್ಯ ಕೇಳುದಕ ತಯಾರಿರಲಿಲ್ಲ.. ಆಗ ಕೆಲದಿವಸಗಳ ಹಿಂದೆ ಜಗಲೂರೆವ್ವ ಯಂಬ ರಾಜಮಾತೆ ಬಂದಿದ್ದಳೆಂದೂ, ಆಕೆಗೂ, ನಿನಗೂ ರಗಡ ಫರುಕು ಯಿರುವುದೆಂದೂ ವಾದಿಸಿದ. ಆಕೆ ಜೀತಗಾರನ ಹೆಂಡತಿ ಯಂದೂ, ತಾನೇ ಖರೇವಂದರೂ ರಾಜಮಾತೆಯಂದೂ ಬಿಡುಬಿಡಿಸಿ ಹೇಳಿದಳು. ಆಕೆಯ ಸಂಗಾಟಯಿದ್ದಂಥ ಮನುಷ್ಯ ತಾನು ಅಮಾತ್ಯನೆಂದೂ, ಯಿನ್ನೊಬ್ಬಾತ ತಾನು ಸೇನಾಪತಿ ಯಂದೂ, ಮಗುದೊಬ್ಬಾತ ತಾನು ಭಂಡಾರಿ ಯಂದೂ ಪರಿಚಯ ಹೇಳಿಕೊಳ್ಳಲು ರಾಯನು ಬಲು ಪರಪಾಟು ಬಿದ್ದನು. ಅಮಾತ್ಯ ಯಂಬುವಾತನ ಮಯ್ಯ ಮಾಲ ಗುಲಗಂಜಿ ಗಾತುರದಷ್ಟಾದರೂ ಅಮಾತ್ಯನ ಯಿಲ್ಲವು.. ಸೇನಾಪತಿ ಯಂಬುವಾತನ ಮಮ್ಮಿ ಮಾಲ ತೆಲಗಾತುರದಷ್ಟಾದರೂ ಸೇನಾಪತಿತನ ಯಿಲ್ಲವು.. ಭಂಡಾರಿ ಯಂಬುವಾತನ ಸರೀರವಂತೂ ದುಗ್ಗಾಣಿಗೂ ಬೆಲೆ ಬಾಳುತಾ ಯಿಲ್ಲವು.. ಆಕೆಯಂಥ ರಾಜಮಾತೆಯು, ಯಿವರೆಂಥ ರಾಜೋಳಿಗಮಾನ್ಯರು ಯಂದಂದುಕೊಂಡನು ಮ್ಯಾಲಿಂದ ಮ್ಯಾಲೆ.. ಯೇನು ಹೇಳಿದರೂ ಅವಯ್ಯ ತನ ಕಿವಿಮ್ಯಾಲ ಹಾಕೊಳ್ಳಲು ಸಿದ್ಧನಿರಲಿಲ್ಲ. ಆಗಿದ್ದು ರಾಜಮಾತೆಯು ತಾವು ರಾಜಮನೆತನದೋರು ಅಂಬುದಕ್ಕೆ ಅಗೋ ನೋಡಲ್ಲಿ