ಪುಟ:ಅರಮನೆ.pdf/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪೬ ಅರಮನೆ ಯಂದು ಸಾರೋಟು ಕುದುರೆಗಳತ್ತ ಬೊಟ್ಟು ಮಾಡಿದಳು. ಹುಬ್ಬಿಗೆ ಕಯ್ಯ ಹಚ್ಚಿ ನೋಡಿದ. ಆಗಿದ್ದು ಆತನು “ಯೇನವ್ವಾ ಮುದುಕಿ? ಮುರುಕು ಬಂಡಿಯನ್ನು ಸಾರೋಟಂಬುತ್ತೀ.. ಕತ್ತೆಗಳನ್ನು ಕುದುರೆಗಳಂಬುತೀ.. ನಿನ್ನ ತಲಿ ಸಜ್ಜಿದ್ದಂಗಿಲ್ಲ.. ನಡ್ನಡೀ” ಯಂದು ಗದರಿದನು. ಆಕೆಯ “ಬರೆಪ್ಪಾ.. ಬರಿ... ನಮಗಿನ್ನೂ ದಯವದ ತಿಕ್ಕಡಿ ಬಿಟ್ಟೋದಂಗಿಲ್ಲ” ಯಂದು ನೀರಿದ್ದಲ್ಲಿ ಕುಡುದು, ನೆಟ್ಟಿದ್ದಲ್ಲಿ ದಣುವಾರಿಸಿಕೊಂಡರಾಯಿತೆಂದು ಭಾವಿಸಿ ತಿರುಗುತ್ತಲೂ ಆರು ಮೊಳದುದ್ದದ ಸೀನೋಜಿರಾವ್ ಘೋರೈಡೆ ಯಂಬಾತನು ಆಚೆ ಕಡೇಲಿಂದ ಉಚ್ಚ ಕಡೇಕ ಬರೋದಕ್ಕೂ ಸರಿಹೋತು. ಆತ ನರಸಾಪುರವನ್ನಾಳುತ್ತಿದ್ದಂಥಾ ಮರಾಠಿ ಸರದಾರ ಯಂಬ ವಿಷಯ ಗೊತ್ತಿದ್ದರೂ ತರುಬಿ ಮಾತಾಡಿಸುವ ಗೋಜಿಗೆ ರಾಜಮಾತೆ ಹೋಗಲಿಲ್ಲ. ಆತಗ ತನ್ನ ಗುರುತು ಅಯ್ಯೋ? ಯಿಲ್ಲವೋ? ಗುರುತಿಸಿದರೂ ಮಾತಾಡಿಸುತ್ತಾನೋ ಯಿಲ್ಲವೇ? ಆತನ ಕಣ್ಣಿಗೆ ಬೇರೊಂದು ಯಿದದಿ ಗೋಚರಿಸಿ ಅವಮಾನಗೊಳ್ಳೋದು ಯಾಕೆಂದು ಬಗೆದ ರಾಜಮಾತೆಯನ್ನು ಸರದಾರನೇ ಗುರುತಿಸಿ ಹತ್ತಿರ ಬಂದು ಮಜುರೆ ಸಲ್ಲಿಸಿದನು. ಕಲೆಬ್ರುಥಾಮಸು ಮನೋನ ಆದೇಸದಂತೆ ತಾಲೂಕಾಧಿಕಾರಿ ಎರುಡ್ಡವರನಿಗೆ ಸಲ್ಲಿಸಲೆಂದು ದಾಸ್ತಾವೇಜುಗಳೊಂದಿಗೆ ಹೇಳೆಂಟು ದಿವಸಗಳ ಹಿಂದೆಯೇ ಬಂದು ಅದೇ ಧರುವ ಛತ್ರದಲ್ಲಿ ಮುಕ್ಕಾಂ ಹೂಡಿದ್ದನು. ರಾಜಮಾರಾಜರ ಬಿಡದಿಗೆಂದೇ ಕಟ್ಟೆಯಿಸಿದ್ದ ವಸತಿಗ್ರಹ ಬೊಮ್ಮಘಟ್ಟದ ಹಾದಿಯಲ್ಲಿತ್ತು. ಆದರೆ ಪಿಂಚಣಿ ಗೊತ್ತಾದ ರಾಜರು ಅಲ್ಲಿ ವುಳಕೊಳ್ಳುವಂತಿರಲಿಲ್ಲ.. ರಾಜಸತ್ತೆಯಿಂದ ಅಮಾನತು ಗೊಂಡೋರ ಹಣೆಬರಾವು ಅದೇ ಆಗಿತ್ತು. ಆದ್ದರಿಂದ ಸೀನೋಜಿರಾವ್ ಸಿಪಾರಸು ಮಾಡಿ ಅದೇ ಧರುಮ ಛತ್ರದಲ್ಲಿ ರಾಜಮಾತೆಗೆ, ಮತ್ತಾಕೆಯ ಪರಿವಾರದ ಮಂದಿಗೆ ವಸ್ತಿ ಮೇರುಪಾಟು ಮಾಡಿದನು. “ಮುಂದೇನು ಮಾಡಲಕಂತ ಮಾಡಿ?” ಯಂದು ರಾಜಮಾತೆಯು ಕೇಳಿದ್ದಕ್ಕೆ ಸೀಮೋಜಿರಾವನು ಗೊಂದಲದಲ್ಲಿ ಸಿಲುಕಿದನು. ಅದು ಯಾವುದೆಂದರೆ ಮರಾಠ ದೇಸಕ್ಕೆ ಹೋಗೋದೊ? ಅಥವಾ ಸಂಡೂರು ಗಡ್ಡೆಯಲ್ಲಿ ಮಾಂಸದಂಗಡಿಯನ್ನು ತೆರೆಯುವುದೋ? ಸಂಡೂರೊಳಗೆ ಯಿದ್ದಂಥ ರಾವ್ ಬಹಾದ್ದೂರು ರಾಜಾ ಪಂಪನಗವುಡರು ಕುಂಪಣಿ ಸಯೀಕರ ಮೊಟಕ್ಕೆ