ಪುಟ:ಅರಮನೆ.pdf/೪೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೪೭ ಅಗತ್ಯವಾದ ಮಾಂಸವನ್ನು ಸರಬರಾಜು ಮಾಡೋ ಗುತ್ತಿಗೆಯನ್ನು ಥಾಮಸು ಮನೋ ಸಾಹೇಬನಿಗೆ ಹೇಳಿ ಕೊಡಿಸುವುದಾಗಿ ವಚನ ಕೊಟ್ಟಿದ್ದರು. ಆದರೆ ತನ್ನ ಹೆಂಡತಿ ತುಳುಜಾಬಾಯಿಗೆ ಸುತಾರಂ ಅದು ಯಿಷ್ಟಯಿರಲಿಲ್ಲ.. ಸಲ್ದಾರ ಯಂಬ ಬಿರುದನ್ನು ಕಿತ್ತೊಗೆದು ಆ ಕೆಲಸಕ್ಕೆ ಸೇರಿಕೊಳ್ಳಿ ಎಂದು ನಿಷ«ರವಾಗಿ ಹೇಳಿದ್ದಳು. ಆದ್ದರಿಂದ ಸೀನೋಜಿರಾವ್ ಯಿಪರೀತವಾದ ಸಂದಿಗ್ಧಕ್ಕೆ ಸಿಲುಕಿ ವದ್ದಾಡುತ್ತಿದ್ದನು. ಕುದುರೆಡವಿನ ಪರಿಸ್ಥಿತಿ ಗಾಳಿ ಮೂಲಕ ತನಗೆ ಗೊತ್ತಿದ್ದುದರಿಂದ ಮುಂದೆ ನೀವೇನು ಮಾಡುತೀರಿ?” ಯಂಬ ಪ್ರಶ್ನೆಯನ್ನು ಆತ ರಾಜಮಾತೆಗೆ ಹಾಕುವ ಗೋಜಿಗೆ ಹೋಗಲಿಲ್ಲ..... ರಾಜಮಾತೆ ಭದ್ರವಾಂಬೆಯು ತನ್ನ ವಡಲೊಳಗಿನ ನೀರು ಅಳ್ಳಾಡದಂತೆ ಕುಂಪಣಿಯೋರ ಕಛೇರಿ ಮುಂದ ತಾಸುಗಟ್ಟಲೆ ಕೂಡುರೋದು ಯಡ್ಡವರನು ಯೀಗ ಕರೆಯಿಸ್ಕಂತಾನೆ, ಆಗ ಕರೆಯಿಸ್ಕಂತಾನೆ ಯಂದು ತಾಸುಗಟ್ಟಲೆ ಕಾಯೋದು, ನಿರಾಸೆ ಹೊಂದಿ ವಾಪಸಾಗೋದು ಮಾಡತೊಡಗಿದ್ದಳು. ತಾನೂ ದೂತನ ಸಂಗಾಟ ಕಳುವುತ್ತಿದ್ದ ವಕ್ಕಣಿಕೆಯೊಳಗ ಯಿರುತ್ತಿದ್ದುದೇ ಎಂದು.. ಯಡ್ಡವರ ಸಾಹೇಬ ಮೋದಿಕೊಳ್ಳುತ್ತಿದ್ದುದೇ ವಂದಾಗಿತ್ತು. ಹಿಂಗಾಗಿ ರಾಜಮಾತೆಗೆ ಫಜೀತಿಗಿಟ್ಟುಕೊಂಡಿತ್ತು. ಆದರೂ ಬೇಸರವಾಗುತ್ತಿರಲಿಲ್ಲ. ಕುದುರೆಡವಲ್ಲಾದರೋ ತಲೆಯಳೆದುಕೊಂಡರ ಕಾಲುಗಳು ಹೊರಗ ವುಳಿಯುವಂಥ, ಕಾಲುಗಳನ್ನೆಳೆದುಕೊಂಡರ ತಲೆ ಹೊರಗುಳಿಯುವಂಥ ಬದುಕು. ಯಲ್ಲಿ ತಾವು ಕೂಲಿ ಕುಂಬಳಿ ಮಾಡಿ ಬದುಕಬೇಕಾಗಿ ಬರುವುದೋ ಯೇನೋ? ತಾವು ವುಪಾಸಯಿದ್ದರೂ ಅರಮನೆಯೊಳಗೇ ಯಿರಬೇಕು, ಸತ್ತರೂ ಅರಮನೆಯೊಳಗಾ ಸಾಯಬೇಕು. ಅದರೊಳಗ ಯಲ್ಲಾ ಕಡೇಕೂ ತಮ್ಮೆಲ್ಲರ ಸಮಾಧಿಗಳಿರಬೇಕು. ಯಾಕಂದರ ಆಗ ಯಾರೂ ಅರಮನೇನ ಖರೀದಿ ಮಾಡೋಕೆ ಹೋಗೋದಿಲ್ಲ.. ಹಿಂಗಾss ಯೇನೇನೋ ಯೋಚನೆ ಮಾಡೋ ರಾಜಮಾತೆಯು ಅಪ್ಪಿಯಾದರೂ, ತಪ್ತಿಯಾದರೂ ಮೋಬಯ್ಯನ ಬಗ್ಗೆ ದುಸುರಾ ಮಾತನ ಆಡೋದಿಲ್ಲ.. ಅದೂ ಕೂಡ್ಲಿಗೀನ ಸೇರುವಿಕೆ ಮಾಡಿದ ನಂತರವೇ.. ವಂದು ರೀತೀಲಿ ಹೇಳಬೇಕೆಂದರೆ.... ಕುದುರೆಡವು ಕಡೇಲಿಂದ ಆಗಮಿಸುತಲಿದ್ದ ವಂದಲ್ಲಾವಂದು ವರಮಾನಗಳಿಂದಲೂ, ಪತ್ನಿ ಜೆನ್ನಿಫರಳ ಅಪರಿಮಿತ ಕಾಟದಿಂದಲೂ ಅಧಿಕಾರಿ ಯಡ್ಡವರನು ರಾಜಮಾತೆ ಭಮ್ರಮಾಂಬೆಯ ನಿರೀಕ್ಷೆಯಲ್ಲಿದ್ದ. ಗುಪ್ತಚಾರರು