ಪುಟ:ಅರಮನೆ.pdf/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪೮ ಅರಮನೆ ವಸ್ತು ಯಿಶೇಷ ತಂದು ಪಿಸುಗುಟ್ಟುತಲಿದ್ದರು, ಪ್ರತಿಯೊಂದು ಮಾಹಿತಿಗೂ ಯಿಂಡಿಯಾ ಹೀಗೂ ವುಂಟೇ ಯಂದು ವುದ್ದರಿಸುತಲಿದ್ದ. ದಂಡು ಸಮೇತ ಹೋಗಿ ಅಲ್ಲಿನ ಅಲವುಕಿಕರ ವುಪಟಳವನ್ನು ನಿಗ್ರಹ ಮಾಡಬೇಕೆಂದರ ಕಲೆಬ್ರುಸಾಹೇಬ ಯಾವ ತಪಾಲಿಗೂ ಮಾರು ಜವಾಬು ಕೊಡುತ್ತಿಲ್ಲ. ಯಿಲ್ಲಿ ನೋಡಿದರೆ ಆಳೋರ, ಆಳಿಸಿಕೊಳ್ಳೋರ ಅಹವಾಲುಗಳ ರಾಶಿ ನಡುವೆ ತನಗೆ ವುಸಿರಾಡುವುದಕ್ಕೂ ಪುರುಸೊತ್ತಿಲ್ಲ... ನಿಖಾಲೆ ಮಾಡಬೇಕಾದ ದಸ್ತಾವೇಜುಗಳ ನಿಟ್ಟಿನ ಯೀಚೆ ಕೂತರ ತಾನು ಆಚೆ ಕಡೆ ಗೋಚರಿಸುವುದೇ ಅಪರೂಪ, ತನ್ನ ಪತ್ನಿ ಜೆನ್ನಿಫರು ಮಾತ್ರಕುದುರೆಡವಿನ ಉದ್ಯಾಮಾನಗಳ ಕಟ್ಟಾ ಅಭಿಮಾನಿಯಾಗಿಬಿಟ್ಟಿರುವಳು. ಅತಿಮಾನುಷ ಘಟನೆಗಳಿಲ್ಲವೆಂದರೆ ಯಿಂಡಿಯಾಕ್ಕೆ ಅಸ್ತಿತ್ವವೇ ಯಿರುವುದಿಲ್ಲ ಯಂಬುದು ಆಕೆಯ ಅನ್ನಿಸಿಕೆ. ಸ್ವತಃ ಬ್ರಿಟೀಷ್ ಪ್ರಜೆಯಾಗಿರುವ ಆಕೆ ಯೀಸ್ಟ್ ಯಿಂಡಿಯಾ ಸರಕಾರದ ಆಕ್ರಮಣಶೀಲ ಪ್ರವುರುತ್ತಿಯನ್ನು ಬಲವಾಗಿ ಯಿರೋಧಿಸುತ್ತಿರುವಳು. ಯಿದು ಅನ್ಯಾಯವೆಂದೂ, ಯಿಂಡಿಯಾದ ನೆಲ ಕಂಪನಿಯನ್ನು ಕ್ಷಮಿಸುವುದಿಲ್ಲವೆಂದೂ.. ಸೂದ್ಯೋದಯ, ಸೂಯ್ಯಾಸ್ತಗಳ ಗವುರವಕ್ಕೆ ಪಾತ್ರವಾಗಿರುವ ಬ್ರಿಟೀಷ್ ಸರಕಾರದ ಸೇವೆಯಲ್ಲಿರುವುದೇ ಹೆಮ್ಮೆಯ ಯಿಷಯವೆಂದು ಭಾವಿಸಿರುವ ತಾನು ಆಕೆಯನ್ನು ಯಿಂಡಿಂರಾ ಕುರಿತು ಯೋಚಿಸದಂತೆ ಮಾಡಲು ಕಂಗೊಂಡಿರುವ ಯೋಜನೆಗಳಾದರೋ ಹಲವಾರು.. ಸಂಗೀತ, ಕಲೆ, ಸಾಹಿತ್ಯ ಆದ್ಯಾತುಮ ಯವೇ ಮೊದಲಾದವುಗಳು ಅವಾಗಿರುವವು.. ಅದಕ್ಕೆಂದೇ ಯಿಶೇಷ ಪರಿಣತರನ್ನು ನೇಮಿಸಿದ್ದನು. ಆದರೂ ನಮ್ಮೊಮ್ಮೆ ಬೆಚ್ಚಿಬಿದ್ದವಳಂತೆ ಕುದುರೆಡವನ್ನು ಗ್ರಾಫಿಸಿಕೊಳ್ಳುತ್ತಿದ್ದಳು ವುತ್ತಮ ವಗ್ಧ ಚಿತ್ರಕಲಾವಿದೆಯೂ ಆಗಿದ್ದ ಜೆನ್ನಿಫರಮ್ಮಾ........ ಕವುಡು ಮತ್ತು ತಿಕ್ಕಡಿ ಕಡಿಮೆಯಾತು ಯಂಬುದಕ್ಕೆ ಸಾಕ್ಷಿಯಾಗಿ ಸೀನೋಜಿರಾವ್ ಹೇಳಿದ್ದನ್ನು ಕೇಳಿಸಿಕೊಂಡ ಯಡ್ಡವರು “ಹ್ವಾ... ಭಮ್ರಮಾಂಬೆ ಯುವರ್ ಹಯ್ಕೆಸ್ತೂ” ಯಂದು ವುದ್ದಾರ ಮಾಡಿದನು. ಕೂಡಲೆ ಆಕೆಯನ್ನು ಬರಮಾಡಿಕೊಂಡು ಕ್ಷೇಮ ಲಾಭ ಯಿಚಾರಿಸಿದನು. ಅವರಿಬ್ಬರ ನಡುವೆ ಮಾತುಕತೆ ಸಾಂಗೋಪಾಂಗವಾಗಿ ನಡೆಯಿತು. ಅವರಿಬ್ಬರಿಗೆ ದುಭಾಷಿಯಾಗಿ ಕಾಠ್ಯ ನಿರುವಹಿಸಿದವರೆಂದರೆ ಹೆಬ್ಬೆಟಂ ಗೋಯಿಂದರಾಯರು. ಹಡಗಿನಲ್ಲಿ ಪ್ರಯಾಣ ಮಾಡಿದ ತಂದೆಯೋಗ್ಯನ ಮಕ್ಕಳೂ ಚತುರ್‌ಭಾಷಾಕೋಯಿದರೂ