ಪುಟ:ಅರಮನೆ.pdf/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪ರ್೪ ಆದ ರಾಯರು ಯಿದ್ದದ್ದು ಯಿದ್ದಂಗೆ ತಝುಮೆ ಮಾಡಿದರೆಲ್ಲಿ ತಿಕ್ಕಡಿ ತಮಗೆ ತಗುಲುವುದೋ ಯಂಬ ಅಳುಕಿಗೆ ಸಿಲುಕಿದರು.. ಕನ್ನೂಡ ಭಾಷೆಯನ್ನು ತಕ್ಕಮಟ್ಟಿಗೆ ಅರಮಾಡಿಕೊಳ್ಳಬಲ್ಲವನಾಗಿದ್ದ ಯಡ್ಡವರುನ ಸಮಕ್ಷಮದಲ್ಲಿ ಸುಳ್ಳಿಗೆ ಅವಕಾಶಯಿರಲಿಲ್ಲ... ಕುಂತಳ ಸೀಮೆಯ ಕೆಲ ರಾಜರಿಂದ ಲಂಚರುಷುವತ್ತು ಪಡೆದು ಕುದುರೆಯನ್ನು ಕತ್ತೆ ಮಾಡಿದ ಆರೋಪಕ್ಕೆ ಸಿಲುಕಿ ನಾಲಕಯ್ದು ಮಂದಿ ದುಭಾಷಿಗಳು ನವುಕರಿ ಕಳೆದುಕೊಂಡನಂತರವೇ ಗೋಯಿಂದರಾಯರು ದುಭಾಷಿಯಾಗಿ ನಿಯುಕ್ತರಾಗಿದ್ದರು. ಆದ್ದರಿಂದ ರಾಯರಿಗೆ ಕುದುರೆಗೆ ಕೋಡುಗಳಿವೆ ಯಂದು ಹೇಳುವ ಧಯ್ರ ಬರಲಿಲ್ಲ.. ಹೇಳೋದನು ಹೇಳಿಯಾದ ಮ್ಯಾಲ.. ಕೇಳೋದನು ಕೇಳಿಯಾದ ಮ್ಯಾಲ ಯಡ್ಡವರು ರಾಜಮಾತೆಯನ್ನು ಆಪ್ತ ಸಹಾಯಕಿ ಪವುಲಿನ್ನಳ ಮುಖಾಂತರ.... - ರೂತನೇಮ ಕುಲಾಚಾರಗಳ ಯಿಷಯದಲ್ಲಿ ಕಟ್ಟುನಿಟ್ಟಾಗಿದ್ದ ಭಮ್ರಮಾಂಬೆಯನ್ನು ಜೆನ್ನಿಫರಮ್ಮ ಗವುರವಾದರಗಳಿಂದ ಬರಮಾಡಿಕೊಂಡಳು. ವಬ್ಬರೊಬ್ಬರು ಪರಸ್ಪರ ನೋಡಿ ಬೆರಗಾದರು. ಆಕೆಯಾಡುವ ಮಾತು ಯೀಕೆಗೆ ತಿಳಿವಲ್ಲದು, ಚೀಕೆಯಾಡುವ ಮಾತು ಆಕೆಗೆ ತಿಳಿವಲ್ಲದು. ಮಾತೆಂಬುದು ಕಟಕಟೆಯಲ್ಲಿ ನಿಂತಿತ್ತು. ಮುಂದಿನ ವರುಷ ಲಂಡನ್ನಿನ ಆರುಗ್ಯಾಲರಿಯಲ್ಲಿ ನಡೆಯುವ ಚಿತ್ರಕಲಾ ಸ್ಪರೆಗೆ ತನ್ನದೊಂದು ಕಲಾಕ್ರುತಿಯನ್ನು ಕಳಿಸಬೇಕಿದ್ದ ಜೆನ್ನಿಫರಮ್ಮ. ಅದಕ್ಕೆಂದು ನೆನಪಿನ ಶಕ್ತಾ ಧಾರ ಮ್ಯಾಲ ಜಗಲೂರೆವ್ವಳ ಚಿತ್ರಬಿಡಿಸಿದ್ದ ಜೆನ್ನಿಫರಮ್ಮ.. ಆಕೆಯ ಗರುಭದಲ್ಲಿ ರಾಜಮಾತೆಯ ಭಯಮಾಂಬೆಯನ್ನು ಬಿಡಿಸಬೇಕೆಂದಿರುವ ಜೆನ್ನಿಫರಮ್ಮ.. ಅಯ್ಯೋ ತಾನ್ಯಾವತ್ತೂ ಚಿತ್ತಾರದೊಳಗ ಮೂಡಿದಾಕೆಯಲ್ಲ... ಮೂಡುವ ಯಿರಾದೆ ತನಗಿಲ್ಲ.. ಬಣ್ಣ ಪೂಸಿಕೊಂಡು ಸರೀರದ ಅಂಗಾಂಗಾನ ಮಲಿನ ಮಾಡಿ ಕೊಂಡಾಕೆಯಲ್ಲ.. ಯಂದು ಮಿಡುಕಾಡೂತ ಆ ಗುದ್ದೆಯು ಬ್ಯಾಡ ತಾಯಿ ಬ್ಯಾಡ ಮಗಳೇ ಯಂದು ಬಗೆ ಬಗೆ ರೀತೀಲಿ ಗೋಗರೆಯುತ್ತಾಳೆ. ಜೆನ್ನಿಫರಮ್ಮ ತೋರಿಸಿದ ವಲ್ಲಚಿತ್ರದಲ್ಲಿ ಬಸುರಿ ಜಗಲೂರೆವ್ವ ಬ್ಯಾನೆ ತಿಂಬುತ್ತಿರುವುದನ್ನು ನೋಡಿದ ಮ್ಯಾಲ ರಾಜಮಾತೆಗೆ ಭೂಮಾಯಿ ಬಾಯಿತೆರೆದು ತನ್ನನ್ನು ನುಂಗಬಾರದೆ ಯಂದೆನ್ನಿಸಿತು. ಆಕೆಯ ಗರುಭದೊಳಗೆ ತನ್ನನ್ನು ಕೂಸಿನೋಪಾದಿಯಲ್ಲಿ ಅಮರಿಸಲು ಹೊಂಚಿರೋ ಯೀ ಕುಂಪಣಿ ಹೆಣುಮಗಳಿಗೆ ಬುದ್ದಿ ಅಯಿತೋ? ಯಿಲ್ಲವೋ? ಆ ತೊತ್ತಿನ ಕುಲ ಯಾವುದು? ತನ್ನ ಕುಲ ಯಾವುದು? ಆಕೆಯ