ಪುಟ:ಅರಮನೆ.pdf/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫C ಅರಮನೆ ಬಸಿರೊಳಗೆ ರಾಜಮಾತೆಯಾದ ತಾನು!.. ಛೇ.. ಛೇ.. ರಾಜಮಾತೆಯ ಮಿಡುಕಾಟ ವಂದು ರೀತಿಯದಾ? ಯರಡು ರೀತಿಯದಾ?..ಯಿಲ್ಲಿ ಕುಲದ ಪ್ರಶ್ನೆಯಲ್ಲಿ ಬರುವುದಿಲ್ಲ. ಯಿದು ಕೇವಲ ಚಿತ್ರಮಾತ್ರಯಂದಂತ ಜೆನ್ನಿಫರಮ್ಮ ಯಷ್ಟು ಹೇಳಿದರೂ ಕೇಳುತಾಯಿಲ್ಲ.. ಆಗಿದ್ದು ಚೆನ್ನಿಫರಮ್ಮ ಮಾರೀನ ಸಪ್ಪಗೆ ಮಾಡಿಕೊಂಡದ್ದನ್ನು ನೋಡಿ.. ಸಮ್ಮಿಕನ ಕಿವೀಲಿ ಠಸ್ಯಾ ಪುಸ್ಕಾಂತ ಯಿಂಗಲೀಸು ಮಾತಾಡಿದ್ದನ್ನು ನೋಡಿ ಯಲ್ಲಿ ತಮ್ಮನ್ನು ಬಂಧಿಸಿ ಸರೆಯಲ್ಲಿಡುತಾರೋ ಯಂದು ಯಿಲಯಿಲಾಂತ ವದ್ದಾಡಿದಳು. ಕೊನೀಕೆ.. ನೀನೆಂಗ ಕುಂತಗ ಅಂದರ ಹಂಗ ಕುಂತಗಂತೀನಿ ಕಾಯಿ.. ಹೇಳಿದಂಗ ಕೇಳುತೀನಿ.. ನಿನ ಗಂಡಗ ಹೇಳಿ ಅರಮನೇಲಿಂದ ಮೋಬಯ್ಯನ ಮಾತ್ರವೋಡ್ಡು ಯಂದು ದಯನಾಸದಿಂದ ಯಾವತ್ತೂ ತನ ಸರೀರದಿಂದ ಕೇಳಿಕೊಂಡಳು. ಅದು ನೀಡಿದ ನಾನಾ ಯಿಧದ ಪ್ರೇರಣೆಗಳಿಂದ ಸ್ತೂರಿ ಪಡೆದು ಜೆನ್ನಿಫರಮ್ಮ ರಾಜಮಾತೆಯನ್ನು ಕಿರೀಟ, ಸಿಮ್ಮಾಸನ ಅರಮನೆ ಸಮೇತ ಜಗಲೂರೆವ್ವನ ಬಸಿರೊಳಗೆ ಯಿಮುರಿದಳು.. ಆ ಆಳೆತ್ತರದ ಚಿತ್ರವನ್ನು ಯಿಯಿದ ದೂರದಲ್ಲಿ ನಿಂತು ನಿರುಕಿಸಿ ತನ್ನೊಳಗಿನ ಕಲಾವಿದರನ್ನು ಅಭಿನಂದಿಸಿಕೊಂಡಳು ಜೆನ್ನಿಫರಮ್ಮ, ಪ್ಲಾ... ಪ್ಲಾ.. ರಾಜಮಾತೆಯೇ, ನೀನು ಅಜರಾಮರಾಗೋ ಕಾಲ ದೂರವಿಲ್ಲ... ನೀನು ಜಗದ್ವಿಖ್ಯಾತಳಾಗೋ ಕಾಲ ದೂರಯಿಲ್ಲ ಯಂದು ಭಮ್ರಮಾಂಬೆಯನ್ನು ಅಪ್ಪಿಕೊಳ್ಳುತ್ತಿರುವಾಗ್ಗೆ..... ಯಿತ್ತ ಯಡ್ಡವರು ಸೇನಾಪತಿಯಾದ ಅಲಬಲ್ಬನನ್ನು ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ಕುದುರೆಡವು ಅರಮನೆಯನ್ನು ಮೊಬಯ್ಯನಿಂದ ವಶಪಡಿಸಿಕೊಳ್ಳುವ ಸಂಬಂಧೀ ಯಿಚಾರಗಳನ್ನು ಕುರಿತು ಸಮಾಲೋಚನೆ ನಡೆಸುತ್ತಾ ಯಿದ್ದನು.. ಯಿಷ್ಟುದ್ದ, ಅಷ್ಟಗಲಯಿದ್ದ ಅಲಬರು ಧಾರವಾಡದ ಥ್ಯಾಕರೆಸಾಹೇಬನಿಗೆ ತುಂಬಾ ಅಗದಿ ಯಿದ್ದನು. ಜಲ, ನೆಲ, ಪದಾತಿಗಳನ್ನು ಜಾಣಾಕ್ಷತನದಿಂದ ನಡೆಸಿ ಯಿಕ್ಟೋರಿಯಾ ರಾಣಿಯ ಸೊಂತ ಬಾಯಿಯಿಂದ ಶಬ್ಬಾಷ್‌ಗಿರಿ ಪಡೆದಿದ್ದನು. ಅಳ್ಳಗಡ್ಡ, ಕಪ್ಪಡ್ತಾಳ್ಳು ಪಿಡುಗುರಾಳ್ಳು, ಸಿಂಗನಮಲ ಯಿವೇ ಮೊದಲಾದ ಪಾಳ್ಳೆಪಟ್ಟುಗಳನ್ನು ಧೂಳಿಪಟ ಮಾಡಿದ್ದನು. ಪತ್ತಿಕೊಂಡ, ಹಲಗೇರಿ, ಆಸುಪರಿಯೇ ಮೊದಲಾದ ಕುರುಚಲು ಅಡವಿ ಪ್ರಾಂತಗಳ ಮುಸುಗು ಮರೆ ಬಂಡಾಯವನ್ನು ನಿದ್ದಯತೆಯಿಂದ ಹತ್ತಿಕ್ಕಿದ್ದನು. ಅವನ ಪರಾಕ್ರಮವನ್ನು ಮೆಚ್ಚಿದ ಥಾಮಸು ಮನೋ ಸಾಹೇಬನು ಕುಂತಳ ಪರಗಣ