ಪುಟ:ಅರಮನೆ.pdf/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫೪ ಅರಮನೆ ಮಂದಿ ಮಂದಿ ಮಾತ್ರ. ಅವರ ಪಯ್ಕಿ ನಾನೂ ವಬ್ದಾಕಿ ಅದೀನಿ.. ಪಟ್ಟಣದಿಂದ ರಣಬಯ್ಲಿಗೆ ಬಂದಿರೋ ನಿಮಗಿಲ್ಲಿ ತಿಂಬಲಕ ಹಣ್ಣು ಹಂಪಲ ಯಿಲ್ಲರಪ್ಪಾ.. ಕುಡಿಯಲಕ ನೀರುನಿಡಿಯಿಲ್ಲರಪ್ಪಾ.. ಅಷ್ಟೇ ಯಾಕ ಬರಿ. ಕುಂತಗಿ ಅಂಬಲಕ ಬಾಯಿ ಯಿಲ್ಲರಪ್ಪಾ..” ಯಂದು ಗೊಳ ಗೊಳ ನುಡಿದು ವಳ ಹೋಗಿ ದಬಕ್ಕಂತ ಬಾಗಲಿಕ್ಕಿಕೊಂಡಳು. “ಯೇನೀಕಿ? ಯಂಥಾಕಿ ಯಿದ್ದಾಳು? ಕೇಳೋ ಯವಧಾನ ತೋರಲಿಲ್ಲ” ಯಂದು ಮಂದಿ ತಮ್ಮ ಗಂಟಲಲ್ಲಿದ್ದ ಮಾತುಗಳನ್ನು ಅನ್ನನಾಳಕ್ಕೆ ಯಿಳಿಬಿಟ್ಟುಕೊಂಡಿತು. ವಡಲ ತಳ ಸೇರಿದಂಥ ಮಾತುಗಳು ತರಾವರಿ ನ್ನುತ್ಯಾಲಾಪಕ್ಕೆ ತೊಡಗಿರಲು, ಗತಿ ಕಾಣದೆ ವದ್ದಾಡುತ್ತಿರಲು, ಪರಸ್ಪರ ಸಂತಯಿಕೆಗೆ ತೊಡಗಿರಲು ಯಿಷಣ್ಣವದನಗೊಂಡ ಮಂದಿಯು ಪವಾಡ ಮಯ್ಕೆಗಳನ್ನು ವಂದರ ಮ್ಯಾಲೊಂದರಂತೆ ತೋರಿದ ಮೋಬಯ್ಯ ಯಿರುವಾಗ ತಾವ್ಯಾಕೆ ಯಸನಗಳನ್ನು ನವೆಯಬೇಕು ಯಂದು ನಿರರಿಸಿದರು..... ತಮಗೆ ಯುದ್ಧ ರಣರಗಳೆಗಳೆಂಬುದೇನು ಹೊಸದಲ್ಲ.. ಅವು ವಂದರಮ್ಯಾಲೊಂದರಂತೆ ಬಂದಿರುವುದುಂಟು.. ಕಾಲಿಗೊಂದೊಂದು ಹಾನಿ ಮಾಡಿ ವಾಪಾಸೋರುವುದುಂಟು.. ಮನೆಮನೆಗಳಲ್ಲಿ ಪ್ರಾಣ ನಷ್ಟ ಮಾಡಿಕೊಂಡವರುಂಟು. ಆಸ್ತಿಪಾಸ್ತಿ ನಷ್ಟ ಅನುಬೋಸಿದವರುಂಟು.. ವಂದಲ್ಲಾವಂದು ಅಂಗಾಂಗ ಲುಕ್ಸಾಣು ಮಾಡಿಕೊಂಡೋರುಂಟು.. ಬಲಿದಾನಕ್ಕೆ ಹಿಂದು ಮುಂದು ನೋಡೋರು ವಬ್ಬರಾದರೂ ವುಂಟಾ ಪಟ್ಟಣದೊಳಗ?.. ಯೀರಗಲ್ಲುಗಳು, ಮಾಸ್ತಿಗಲ್ಲುಗಳು ಮನಾಂ ಯಿರೋ ಪಟ್ಟಣದೊಳಗ.... “ಅಲಲಲಾss ರಾಜಮಾತೆ.. ನಿನ್ನ ಗಂಡಂದಿರು, ಮಕ್ಕಳು, ಮೊಮ್ಮಕ್ಕಳಂದಿರು ಮಾಡಿದ ಘನ ಕಾರ್ ಬಾಯಿ ಬಿಚ್ಚಿ ಹೇಳಬೇಕಾ? ನಿನ್ನ ರಾಜರ ಪಾಪದ ಕೊಡ ತುಂಬು... ಸಿಮ್ಮಾಸನ ಸಮೇತ ಅರಮನೇನ ಸಾಂಬವಿ ಕಬಜಾ ಮಾಡಿದಳು.. ಯಿದು ನಿನ್ನ ಪರೀಕ್ಷೆ ಕಾಲ ಅಂತ ತಿಳಕೊಳ್ಳಿಲ್ಲಲ್ಲಾ, ನಿನ್ನ ನಿಷ್ಟೇನ ತಾಯಿಗೆ ಮನವರಿಕೆ ಮಾಡಿಕೊಡ್ಲಿಲ್ಲಾ. ಕುಂಪಣಿ ಸರಕಾರದ ಮಟ ವಯ್ದು ದೂರು ಕೊಟ್ಟಿದ್ದೀಯಲ್ಲಾ.. ಯಿದು ಸರೀನಾ?.. ನಿನ್ನ ಸಾಂಬವಿ ನೋಡ್ಕಂತಾಳ.. ನಮಗ್ಯಾಕ ನಿನ್ನ ವುಸಾಬರಿ' ಯಂದನಕಂತ ಮಂದಿ ರಣಬಯಲಿನಿಂದ ಹೊರಟು ಬಂದು ಪಟ್ಟದೊಳಗೆ ಅಂಡಾವರನ ಗೊಂಡರು.... ಬತೇರಿಗಳನ್ನೇರಿ ಕೂಡ್ಲಿಗಿ ಹಾದಿಯುತ್ತ ತಮ್ಮ ತಮ್ಮ ಕಣ್ಣುಗಳನ್ನು