ಪುಟ:ಅರಮನೆ.pdf/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೫೭ ಕಣರಯ್ಯಾ.. ಯಂದು ಹೇಳುತ ಲೋಕಕ್ನಾನ ಮೆರೆಯುತಲಿದ್ದರು. ಹಿಂಗು ಅರಮನೆಯೊಳಗ ಆರು ಮೂರಾಗುತಲಿದ್ದ ಪರಿಯ.. ಮೂರು ಆರಾಗುತಲಿದ್ದ ಪರಿಯ ಯೇನು ಹೇಳಲಿ ಸಿವನೇ...... ಬಜ್ಜಿ ಚಂಡಯ್ಯನ ಅವಳಿ ಜವಳಿ ಮಕ್ಕಳಾದ ರುಂಡಯ್ಯ, ಮುಂಡಯ್ಯ ತಾವಿದ್ದ ಬತೇರಿ ಮ್ಯಾಲಿಂದಲೇ ಅಟ್ಟಂಬಟ್ಟಾರಣ್ಯವಿನ ಬಯ್ತಲೆ ಯಂಥ ಹಾದಿಗುಂಟ ಕೆಂಧೂಳನ್ನೂ.. ಕೆಂಧೂಳೊಳಗೆ ಹತ್ತಾರು ಕುದುರೆ ಸವಾರರನ್ನೂ ಕಂಡರು. ಬತೇರಿಯಿಂದ ಅಬಡಾ ದಬಡಾ ಕೆಳಗಿಳಿದು ಪ್ಲಾ..ಹಾ.. ಅಲಬರೊ. ಹೋ... ಹೋ.. ಅಲಬಕ್ಕೂ ಯಂಬ ಯಿಲಚ್ಚಣ ನಾಮವಾಚಕವನ್ನೂ, ಬಂದ್ರೂ.. ಬಂದ್ರೂ... ಯಂಬೆರಡು ಮಾಯಾವಿ ಕ್ರಿಯಾಪದಗಳನ್ನು ಪ್ರತಿಯೊಂದು ಕಿವಿಯೊಳಗ ಬಿತ್ತುತ್ತ ಮಾಯವಾದರು. ಅದರ ಹಿಂದೆಯೇ... ಬಜ್ಜಿ ಚಂಡಯ್ಯನ ಮಕ್ಕಳ ಮಾತನ್ನು ನಂಬುವುದೆಂತು? ಸುಳ್ಳೇ ಆತನ ಮನೆದೇವರು.. ನೀರಿಗೆ ಹಾಲು ಬೆರೆಸುವಲ್ಲಿ ನಿಪುಣರಾದ ಅವರ ಮಾತಿನಲ್ಲಿ..... ಅಲಬರು ತನ್ನ ಕಿರುಸೇನಾ ತುಕುಡಿಯೊಂದಿಗೆ ಬಂದೇ ಬಿಟ್ಟನು. ತಾನು ಅಂದುಕೊಂಡಿದ್ದೊಂದು.. ಯಿಲ್ಲಿ ತನಗೆ ಗೋಚರ ಆಗುತ್ತಿರುವುದೇ ಯಿನ್ನೊಂದು.. ಕೋಟೆಯ ದಿಡ್ಡಿಬಾಗಿಲು ಹಾರೊಡೆದಿರುವುದಲ್ಲಾ.. ಕಾವಲು ಕಾಂರುವಂಥ ವಬೈ ಸಯೀಕನ ಸುಳಿವಿಲ್ಲವಲ್ಲಾ.. ದೆ೦ಥಾ ಸಾಮುರಾಜ್ಯವಿದ್ದೀತು? ಯಂದು ವುದ್ದಾರ ತೆಗೆದನು. ತಲುಪು ತಲುಪುತ್ತಿದ್ದಂತೆ ಕನಿಷ್ಟಪಕ್ಷ ವಂದುನೂರು ಮಂದಿ ಸತ್ತುಸಮ್ಮಿಕರನ್ನು ಢಮ ಢಮಾರೆಂದು ಸಾಯಿಸಿ ಪರಾಕ್ರಮ ಮೆರೆಯಬೇಕೆಂದು ಭಾವಿಸಿದ್ದನು. ಆದರೆ ಅಂಥದ್ದೊಂದು ರಕುತಪಾತಕ್ಕೆ ಅಲ್ಲಿ ಆಮಂತ್ರಣ ಯಿರಲಿಲ್ಲ. ಕಾಲು ಕೆದರಿ ಜಗಳ ತೆಗೆಯೋರಿರಲಿಲ್ಲ.. ಮುಖಮಾರೀನ ಗಂಟು ಹಾಕ್ಕೊಂಡು ದುರುದುರುಗುಟ್ಟಿ ನೋಡುವವರಿರಲಿಲ್ಲ... ಅದಕ ಬದಲಾಗಿ.... ಬರೀ ಬಿ.. ಬಿಸುಲಾಗ ಬಂದು ದಣುಕೊಂಡಂಗದೀರಿ.. ಕೂಕಳ್ಳುತೀವಂದರ ನೆಳ್ಳು ಮಾಡತೇವ.. ಹಸದೀವಂದರ ವುಂಬಲಕ ಬಾನ ಹಾಕತೇವ. ನೀರಡಸೀದಿವಂದರ ಕುಡಿಯಲಕ ನೀರು ನಿಡಿ ಕೊಡುತ್ತೇವ ಅಂಬುವವರು ಹೆಜ್ಜೆ ಹೆಜ್ಜೆಗೆ ತಗುಲಿ ತನ್ನನ್ನು ಗಾಬರಿಗೊಳಿಸತೊಡಗಿದರು. ತನಗಷ್ಟೆ ಅಲ್ಲ.. ತನ್ನಂಥ ಯಾವುದೇ ಸೂರ ಸೇನಾನಿ ಹೆಮ್ಮೆ ಪಡುವಂಥ ಪಟ್ಟಣವು ಕುದುರೆಡವು.. ಬಸರೊಳಗ ಶಿರಸ್ತ್ರಾಣ, ಕವಚ, ಸಸ್ತರಾಸ್ತರಧಾರಣ