ಪುಟ:ಅರಮನೆ.pdf/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫೮ ಅರಮನೆ ಮಾಡಿಯೇ ಯಿಲ್ಲಿ ಕೂಸು ಹುಟ್ಟು ತಮ್ಮೆ ಯಂಬ ಪ್ರತೀತಿಯು.. ತಮ್ಮ ಮಗ ಹರೇವಿಗೆ ಬಂದೊಡನೆ ಕಾಳಗದೊಳಗ ನುಗ್ಗಾಡಿ ಸತ್ತುಸಕರನ್ನು ಸೆದೆ ಬಡಿದೇ ಹೊರ ಸೊರಗ ಸೇರಬೇಕೆಂದು ಯಲ್ಲಿರುವ ಪ್ರತಿಯೋವ್ವ ತಾಯಿಯ ಕನಸು ಯಂಬುದು ಜನಜನಿತವು.. ತಮ್ಮ ಕಣೋಟ ಮಾತ್ರದಿಂದ ಸತ್ತುಗಳನ್ನು ಅಲ್ಲ ಸಾಯಿಸಬಲ್ಲ ಸೂರರಿಗಿಲ್ಲಿ ಬರವಿಲ್ಲ ಯಂಬುದು ತಾನು ಕಂಡುಂಡಿರುವ ಸತ್ಯವು.. ಕುಂತಳ ಪ್ರಾಂತದೊಳಗ ಯಲ್ಲೇ ಯುದ್ದ ಕಾಳಗ ನಡೆಯಲಿ. ಅಲ್ಲಿ ಸದರಿಪಟ್ಟಣದ ಮಂದಿ ಯಿದ್ದೇ ಯಿರುತಾರ.. ಕುಂತಳ ಪ್ರಾಂತದ ಮೂಲೆ ಮೂಲೆಯಲ್ಲಿರುವ ಊರಗಲ್ಲು, ಮಾಸ್ತಿಗಲ್ಲುಗಳೊಳಗ ಬದುಕಿರೋರು ಯೊ ಪಟ್ಟಣದವರು.. ಆದರ ತಾನೀಗ ನೋಡುತ್ತಿರುವುದೇನು? ಕೇಳುತ್ತಿರುವುದೇನು? ಮಾಯಾವಿ ಮೋಬಯ್ಯನ ಮಸಲತ್ತುಗಳ ಪಯ್ಕೆ ಯಿದೂ ವಂದಾಗಿರಬೌದಾ ಯಂಬ ಅನುಮಾನವೂಬಾರದಿರಲಿಲ್ಲ ಅಲಬರನಿಗೆ.. ಯೇನೇ ಆಗಲಿ ತಾನು.. ಪ್ರವೇಶ ಮಾಡಿದಂಥ ಅರಮನೆ ವಂದು ಅರಮನೆಯಾSS.. ಸಿಮಾಸನದ ಮ್ಯಾಲ ಲೀಲಾಯಿನೋದ ಮಾಡುತ, ವಂಚೂರಾದರೂ ಗಾಂಭೀ‌ಯಿಲ್ಲದ ಹೆಂಗಬೇಕೋ ಹಂಗ ಕೂಕಂಡಿರುವ ಮೋಬಯ್ಯನು ವಬ್ಬ ರಾಜನಾss.. ಆದರೆ ಅವಯ್ಯನ ಕರಿದುಟಿಗಳ ನಡುವೆ ನುತ್ಯ ಮಾಡುತಲಿದ್ದಲಾಸ್ಯವು ಯಾವ ಯಿಟ್ಟೋರಿಯಾ, ಯಲಿಜಬೆತ್ತು ರಾಣಿಯಂದಿರ ಮುಖಗಳ ಲಾಸ್ಯಕ್ಕಿಂತ ಕಡಿಮೆಯಿರಲಿಲ್ಲ... ಆತನ ನಿಸ್ತೇಜ ಕಣ್ಣುಗಳಲ್ಲಿ ಯುದ್ಧಸಂಬಂಧೀ ತರಾವರಿ ಸಾಮಾಗ್ರಿಗಳಡಗಿರುವಂತೆ.. ಆತನ ಮುಖದ ನಿರಿಗೆಗಳಲ್ಲಿ ಬಯಬಲ್ಲಿನ ಪ್ರಾಚೀನಾಕ್ಕರಗಳಿರುವಂತೆ ತನಗೆ ಭಾಸವಾಗುತ್ತಿರುವುದು.. ತನ್ನೊಂದಿಗೆ ದುಭಾಷಿಯಾಗಿ ಬಂದಿರುವ ಯಂಕೋಬರಾಯನು ಗಂಟಲು ಕೆರಕೊಂಡು ವುಗುಳು ನುಂಗುತ್ತಿರುವ ಸದ್ದು ಕೇಳಿ ಬರುತಲಿರುವುದು.... ಅಲಬ‌ನ ಬಾಯಿಯಿಂದ ವಂದನೆಯದು ಯಾಕ ಹನ್ನೊಂದನೇ ಪ್ರಶ್ನೆಯೂ ಹೊರ ಹೊಂಡದಾಂಗಾತು.. ಮುಂದಕ ಯೇನಾತೋ? ಯೇನು ಬಿಟ್ಟಿತೋ..? ಮೂಕ ಯಿಸುಮಿತಗೊಂಡ ಭಕುತಾದಿ ಮಂದಿ ಸಿವನ್ನಾಮ ಪಾರೊತೀ ಪತಿ ಹರಹರ ಮಾದೇವಾss ಯಂದು ವಕ್ಕೊರಲಿನಿಂದ ಕೂಗುತಿರುವಾಗ್ಗೆ.... ಸಿಟ್ಟು ಸೆಡವುಗಳಿಂದಾತೀತಗೊಂಡ ಅಲಬರು ಯಿಚಿತ್ರಾನಂದಾವೇಸದಲ್ಲಿ