ಪುಟ:ಅರಮನೆ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Oos ಅರಮನೆ ಸುಖದುಕ್ಕಗಳನು ಯಿಚಾರಿಸುತ್ತ ಥಳಗೇರಿಯನ್ನು ಪ್ರವೇಶ ಮಾಡಿ ತಮ್ಮ ಮನೆಯಂಗಳದಲ್ಲಿ ತಲೆಮ್ಯಾಲಿದ್ದ ಹುಲ್ಲಿನ ಹೊರೆಯನ್ನು ದೊಪ್ಪಂತ ಯತಿ ಹಾಕಿದೇಟಿಗೆ ಅಜುಬಾಜುಕಿದ್ದ ಮನೆಗಳ ಮಾಡಿನಿಂದ ತಪತಪಾಂತ ಮಣ್ಣು ಸುರಿಯಿತು. ತಮ್ಮ ತಮ್ಮ ಮನೆಗಳಿಂದ ಹೊರ ಬಂದು ಜನ ಆಕೆಯ ದರುಸನ ಪಡಕೊಂಡರು. ಆಕೆಯ ಕಯ್ಲಿದ್ದ ಕುಡುಗೋಲು ಬಿಸಿಲನ್ನು ಪ್ರತಿಫಲಿಸಿದೇಟಿಗೆ ಅರಮನೆಯ ವುಪ್ಪರಿಗೆ ವಂಟಿಗಣ್ಣನ್ನು ಮುಚ್ಚಿಕೊಂಡಿತು.... ವಳಗಡೀಕಿರೋ ತನ್ನ ಗಂಡ ಹೊರೀಕೆ ಬರಲೀ ಅಂತ ವಂದು ನಿಡುಸುಯ್ದಳು. ಕೆಮ್ಮಿ ಕ್ಯಾಕರಿಸಿದಳು. ಯೇನು ಮಾಡುತ್ತಿದ್ದಾನೀ ಮುದೇ... ಯಂದು ಗೊಣಗಿದಳು. ವಂದೊಂದೆ ಹೆಜ್ಜೆಯನಿಕ್ಕುತ ವಳಗಡೀಕೆ ಹೋಗಿ ನೋಡುತ್ತಾಳೆ.. ವ೦ದು ಪುರುಷಾಕುತಿಂರು ಮುಂಡಕ್ಕೆ ವಂದು ದೋತರವನ್ನುಟ್ಟುಕೊಂಡು, ತಲೆಮ್ಯಾಲ ಎಂದು ಮುಂಡಾಸು ಬಿಕ್ಕೊಂಡು, ಹಣೆಮಾಲ ರೂಪಾಯಗಲದೋಟು ಕುಂಕುಮದ ಬೊಟ್ಟಿಟ್ಟುಕೊಂಡು ಬಾಯಿಂದ ಯೇನೋ ವಟಗುಟ್ಟುತ ಕರಿಗಂಬಳಿ ಗದ್ದುಗೆ ಮ್ಯಾಲ ವಟ್ಟೆ ಮದಲಿಂಗನಂಗ ಕೂಕಂಡಿರೋದು ಕಾಣಿಸಿತು. ಯಾರಿದ್ದೀತೀತ ಅಂತ ಸನೀಕ ಹೋಗಿ ನೋಡುತ್ತಾಳೆ. ತನ್ನ ಗಂಡ.. ನಗು ಬಂತು.. ನಕ್ಕರಲ್ಲಿ ಅನ್ಯಾಯವಾಗುವುದೋ ಯಂದು ಹಿಂದೇಟು ಹಾಕುತ " ಯ್, ವಳ್ಳಿ ಮದ್ದಿಂಗನಗೆ ಅಲಂಕಾರ ಮಾಡ್ಕೊಂಡು ಕೂಕಂಡಿದ್ದೀಯಲ್ಲಾ.. ವಂದು ಗಾವಾದ ಪಿಳ್ಳೇನ ತಗದು ನಾನೇ ನಿಂತಿದ್ದು ಲಗುನ ಮಾಡಲೇನು?” ಯಂದು ಚಾಸ್ಪಿ ಮಾಡಿದಳು. ಅದಕ್ಕಾತನ ಬಾಯಿಯಿಂದ ದುಸುರಾ ಮಾತು ಹೊಂಡಲಿಲ್ಲ. ಬಗಬಗ್ಗಿ ನೋಡಿ "ಯಾಕ ಮಾರೀನ ವಂಥರಾ ದಿಮ್ಮಗ ಮಾಡಕಂಡಿಯಲ್ಲಾ?” ಅಂದಳು. ಅದಕೂ ಆತನ ಬಾಯಿಯಿಂದ ಮಾತು ವುದುರಲಿಲ್ಲ.. ಕುಂತ್ತಾ.. ಯೇಟೊತ್ತು ಕುಂತಗಂಡಿದ್ದೀಯೋ ಕುಂತಗಂಡಿರು.. ಕುಂಡಿ ಸುಟ್ಟ ಮಾಲ ನೀನೇ ಯದ್ದೇಳುತೀ... ಯಂದು ತನ್ನ ಪಾಡಿಗೆ ತಾನು ಮನೆಯ ದಗದ ವದಕನಕ್ಕೆ ತೊಡಗಿದಳು. ವಟವಟ ಅನಕಂತ ಕಸ ಮುಸುರಿ ಮಾಡಿದಳು, ಮುದ್ದೆ ತಿರುವಿಟ್ಟು ಯಿಂಡಿ ಅರೆದಿಟ್ಟು “ಯ್ಯೋಯ್... ವುಣುವಂತಿ, ಕಯ್ಯಕಾಲು ಮಾರೀನ ತೊಳಕಂಡು ಬಾ” ಅಂದಳು. ಅದಕ್ಕೂ ಆ ಸರೀರ ಮಿಸುಕಾಡಲಿಲ್ಲ.. ವಡಲು ಸುಟ್ಟಮ್ಯಾಲ ನೀನೇ ವುಂಬುತಿ ಯಂದು ವಟಗುಟ್ಟುತ್ತ ತಾನೊಂದೆರಡು ತುತ್ತು ಗಂಟಲಿಗೆ ನೂಕಿ ವಂದೂವರೆ ತಂಬುಗೆ ನೀರು ಸೊಂಡಿ "ಯಾಕಿಂಗ ಕುಂತಗುಡಿರ ಬೌದೀತ? ನಾನೋಗೋ ಹೊತ್ತಿನಾಗ ಬೇಷಿದ್ದ.. ಬರೋ