ಪುಟ:ಅರಮನೆ.pdf/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೬೧ ಗುಂಟ ಮೆರವಣಿಗೆ ಮಾಡಿತು. ಕರಪೂರ, ದುಬತ್ತಿ ವಾಸನೆಯಿಂದ ಯಿಡೀ ಪಟ್ಟಣ ತುಂಬಿ ತುಳುಕಾಡುತ್ತಿರುವಾಗ್ಗೆ.. ಫಲಾನ ಸಂವತ್ಸರ ತ್ರಯೋದಶಿ ಮಂಗಳವಾರ ಕುತ್ತಿಕಾ ನಕ್ಷತ್ರದ ಮೂರನೇ ಚರಣದ ಸುಭ ಸಮಯದಂದು ಫಲಾನ ತಾಯಿ ತಂದೆಯ ಮಗನಾದ ಹಂಪಜ್ಜನು ಅರಮನೆಯ ದಿವಾನಖಾಸದ ನಟ್ಟ ನಡುವೆ ನಿರುಮಿಸಿದ್ದ ನೆಲಮಾಳಿಗೆ ಯೊಳಗಿಳಿದು ಅಂತಾನಗೊಂಡು ತನ್ನ ಲವುಕಿಕ ಬದುಕಿಗೆ ಸಮಾಪ್ತಿ ಪಲುಕಿದನು.. ಅದಾದ ನಂಬತ್ತನೇ ದಿವಸ ಗುಂಡುಮುಳುಗು, ಕಾನಾಮಡುಗು, ಬಡೇಲಡಕು ಗ್ರಾಮಸ್ಥರು ಬರೋಬ್ಬರಿ ನೂರು ಚೀಲ ಜೋಳದನ್ನ, ನೂರಾವಂದು ಕೊಪ್ಪರಿಗೆ ಹುಗ್ಗಿ ಮಾಡಿಸಲು, ಸದರಿ ಪಟ್ಟಣದವರೊಂದೇ ಅಲ್ಲದೆ ಸುತ್ತಮುತ್ತಲ ನಲವತ್ತಯ್ಯವತ್ತು ಗ್ರಾಮಸ್ತರು ವುಂಡು ಅಗಲಿದ ಆತುಮವನ್ನು ತ್ರುಪ್ತಿಪಡಿಸಿದರು. ಸಮಾಧಿ ವಳಗೆ ಸುಖನಿದ್ರೆಮಾಡುತಲಿರುವ ಹಂಪಜ್ಜನಿಗೆ ಬಿಸಿಲು ತಗುಲದಿರಲೆಂದು ಅದರ ಸುತ್ತಮುತ್ತ ಅರಳೆ, ಬೇವು, ಜಮ್ಮಿ ಬಿಲ್ವ ಸಿರಿಗಂಧ ಬಿವೇ ಮೊದಲಾದ ಕಿಮ್ಮತ್ತಿನ ಮರಗಳನ್ನು ನೆಡಲಾಯಿತು. ಆತನ ಕಿವಿಗೆ ಸದಾ ಅಂಬಾ.. ಅಂಬಾ... ಯಂಬ ನಾದ ಕೇಳಿ ಬರುತ್ತಿರಲೆಂದು ನೂರಾರು ತಾಯಾಕಳುಗಳನ್ನು ಅವುಗಳ ಕರುಗಳ ಸಮೇತ ಅರಮನೆಯ ಪ್ರತಿಯೊಂದು ಕಂಭಕ್ಕೆ ಕಟ್ಟಿ ಅವುಗಳ ಮುಂದೆ ಸಣ ಸಣ್ಣ ಗೋದಲೆಗಳನ್ನು ನಿರುಮಿಸಲಾಯಿತು. ಸಸ್ಯ ಸಂಪತ್ತು, ಪಸು ಸಂಪತ್ತು ದಿನದಿನಕ್ಕೆ ಪ್ರವರಮಾನಕ್ಕೆ ಬರುತ್ತಿದ್ದ ಕುದುರೆಡವು ಅರಮನೆ ಕಾಲಗಳೆದಂತೆ ತಾಯಿಮನೆಯಂದು ಕುಂತಳ ಸೀಮೆ ವಳಗೆ.. ಅಲಬರನು ಮನಃಪರಿವರನಗೊಂಡು ಹೋದುದರ ಕುರುತು ತಲಾವಂದೊಂದು ಕಥೆಗಳನ ಕಟ್ಟಿ ಹಬ್ಬಿಸುತಲಿದ್ದ ಮಂದಿ ಕಲ್ಪನಾಲೋಕದಿಂದ ವಾಸ್ತವಕ್ಕೆ ಮರಳಿ ದಿಗ್ಭ್ರಾಂತರಾದರು. ಮಳೆಗಾಲ ಸುರುವಾದಲಾಗಾಯ್ತು ವಂದೇ ಎಂದು ಹನಿ ಮುಗುಲಿಂದ ಕಡಕೊಂಡು ನೆಲಕ್ಕೆ ಬಿದ್ದಿಲ್ಲವಲ್ಲಾ.. ಆಕಾಸದ ಯಾವ ಮೂಲೇಲೂ ಅಂಗಯ್ಯಗಲ ಮೋಡದ ಸುಳಿವಿಲ್ಲವಲ್ಲಾ.. ಯಂಜಲಗಯ್ಯ ತೊಳಕೊಳ್ಳಲಕ, ಯಿನ್ಸಿ ಕುಂತು ಬಂದ ಕಂದಮ್ಮಗಳ ಕುಂಡಿ ತೊಳೆಂಯಲಕ, ಬಿಕ್ಕು ಹತ್ತೋ ಗಂಟುಗಳನ ತೇವ ಮಾಡಿಕೊಳ್ಳಲಕ, ನೆಲದಡೀಲಿರೋ ಬೀಜ ಮೊಳೆಯಲಕ ನೀರಿಲ್ಲದಾಂಗಾ ಗಝಲ್ಲಾ ಯಂದು