ಪುಟ:ಅರಮನೆ.pdf/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮನುಷ್ಯರ ಪಾಡೇನು? ತನ್ನ ಹೆಂಡತಿ ಜೆನ್ನಿಫರು ಸಹ ವಳಗಿಂದೊಳಗೆ ಮೂಳೆ ಮೋಬಯ್ಯನ ಕಟ್ಟಾ ಅಭಿಮಾನಿಯಾಗಿರುವಂತಿರುವುದು.. ಲಂಡನ್ನಿನ ಪದಧ್ವನದಲ್ಲಿ ಆಕೆಯ ಕಲಾಕ್ರುತಿಗೆ ಪ್ರಶಸ್ತಿ ಬರದಿರುವಂತೆ ಮಾಡುವುದು ಹೇಗೆ? ಯಂದು ಯಸನದ ಮ್ಯಾಲ ಯಸನ ಮಾಡುತ ಆ ಅಧಿಕಾರಿಯು ಸತಪತ ಅಡ್ಡಾಡುತ್ತಿರುವನು. ತಾನಿದ್ದ ಪಡಸಾಲೆಯ ವಂದು ಕಡೆ ಕಲೆಟುಸಾಹೇಬ ಥಾಮಸು ಮನೋನ ಆಳೆತ್ತರದ ತಯ್ದವರಣ ಚಿತ್ರಯಿದ್ದಿತು.. ಅದು ಎಂದು ಚಣ ನಕ್ಕಂತಾಯಿತು. ಹನ್ನೊಂದು ಚಣ ತನ್ನ ವಾಲ ಮುನುಸುಕೊಂಡಂತಾಯಿತು. ಅದಕ್ಕೆ ಜೀವ ಬಂದಿರಬಹುದೆಂಬ ಭ್ರಮೆಗೆ ವಳಗಾಗಿ ಮುಂಡೆ ತೂರಿ ಕುಳಿ ತೆದ್ದು ಗವುರವಿಸಿದನು. ಜೀವ ಭಯದಿಂದಾಗಿಯೋ.. ಅತ್ಯುಗ್ರಸ್ವಾಭಿಮಾನದಿಂದಾಗಿಯೋ ಕುದುರೆಡವು ಕಡೇಕ ಹೋಗದೆ ಕೂಡ್ಲಿಗಿ ಅತಿಥಿಗುಹದಲ್ಲಿ ವಾಸ್ತವ್ಯ ಹೂಡಿರೋ ರಾಜಮಾತೆ ಭಮ್ರಮಾಂಬೆಯನ್ನೂ.. ಆಕೆಯ ಪರಿವಾರವನ್ನೂ ನೆನಪಿಸಿಕೊಂಡನು. ಯಿದ್ದಕ್ಕಿದ್ದಂತೆ ಕುಂಪಣಿ ಸರಕಾರವು ಸಮಸ್ತ ಅಧಿಕಾರವನ್ನು ಅವರಿಂದ ಕಿತ್ತುಕೊಳ್ಳಬಾರದಿತ್ತು. ಯೇನಾದರೊಂದು ಪದ್ಯಾಯ ಯವಸ್ಥೆಯನ್ನು ಆ ಕೂಡಲೆ ಮಾಡಿರಬೇಕಿತ್ತು. ತನಗಿನ್ನೂ ನೆನಪಿಲ್ಲದಿಲ್ಲ, ಪುವ್ವಲ ರಾಜರ ಅಧಿಕಾರವನ್ನು ಮೊಟಕುಗೊಳಿಸಿದ್ದು, ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟಿದ್ದಕ್ಕೆ ಕಾರಣಗಳು ಬೇರೆ ಯಿರುವವು. ಸಾಮಂತ ಸಾಮಂತರ ನಡುವೆ ಕಚ್ಚಾಟ, ಹಗೆತನ, ದ್ವೇಷ ಸದಾ ಯಿರುವಂತೆ ನೋಡಿಕೊಳ್ಳುವುದು ಸಹ ತನ್ನ ಯೀಸ್ಟ್ ಯಿಂಡಿಯಾ ಕಂಪನಿಯ ಕುಟಿಲ ತಂತ್ರಗಳಲ್ಲೊಂದು. ಯವರು ಅವರ ಮ್ಯಾಲ ಯೇರಿ ಹೋಗಲಕ, ಅವರು ಯಿವರ ಮ್ಯಾಲ ಯೇರಿ ಹೋಗಲಕ ಕಂಪನಿ ಧನದ ರೂಪದಲ್ಲೋ... ಮದ್ದು ಗುಂಡು ಪಿರಂಗಿ ಲಿವೇ ಮೊದಲಾದ ಯುದ್ದ ಸಾಮಾಗ್ರಿಗಳನ್ನು ಸಾಲವಾಗಿ ಸರಬರಾಜು ಮಾಡುವ ರೂಪದಲ್ಲೋ, ಸಮ್ಮಿಕರನ್ನು ಯಂತಿಷ್ಟು ರುಸುಮು ಯಂದು ಗೊತ್ತುಪಡಿಸಿ ಕಳಿಸುವ ರೂಪದಲ್ಲೋ.. ಸಹಾಯ ಹಸ್ತ ಚಾಚುವುದು, ತನ್ಮೂಲಕ ವುಭಯ ಬಣಗಳನ್ನು ದುಶ್ಚಲಗೊಳಿಸುವುದು... ಬಡ್ಡಿ, ಚಕ್ರಬಡ್ಡಿ ಸೇರಿ ಸೇರಿ ಅಗಾಧ ರೂಪದಲ್ಲಿ ಸಾಲ ಬೆಳೆಯುವಂತೆ ನೋಡಿಕೊಳ್ಳುವುದು, ಅದನ್ನು ತೀರಿಸಲು ನಿಶ್ಯಕ್ತರಾಗೋ ರಾಜರನ್ನು ಪದಚ್ಯುತಿಗೊಳಿಸುವುದು ತಮ್ಮ ಕಂಪನಿಯ ತಂತ್ರಗಾರಿಕೆಗಳಲ್ಲಿ ವಂದು. ಕುದುರೆಡವಿಗೆ ಸಂಬಂಧಿಸಿದಂತೆ ಆಗಿದ್ದೂ ಯಿದೆ. ಅವರು ನಿರೀರರಾಗಲು