ಪುಟ:ಅರಮನೆ.pdf/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ಅರಮನೆ ಕೊಂಡ.. ಆದರೆ ಎಲ್ಲಿಗೆ ಹೋಗುವುದು? ಯೇನು ಮಾಡುವುದು? ಹಾಗೆ ಮಾಡಿದಲ್ಲಿ ಕಂಪನಿ ತನ್ನನ್ನು ಯಿಚಾರಣೆಗೊಳಪಡಿಸಿ ಶಿಕ್ಷಿಸದೆ ಬಿಡುವುದಿಲ್ಲ.... ಯಿಡೀ ರಾತ್ರಿಕಣ್ಣಲ್ಲಿ ಯಣ್ಣೆ ಬಿಟ್ಟುಕೊಂಡು ಯೋಚಿಸಿದ ಯಡ್ಡವರು ಯಿಷ್ಟು ವರ್ಷ ತನಗೆ ಅನ್ನ ನೀಡಿದ, ಸಾಮಾನ್ಯ ಸೋಲ್ಟರನಾಗಿದ್ದ ತನ್ನನ್ನು ಅಧಿಕಾರಿ ಪದವಿಗೇರಿಸಿ ಗವುರವಿಸಿದ ಕಂಪನಿಗೆ ಸದಾ ನಿಷ«ನಾಗಿರಬೇಕೆಂದು ನಿರರಿಸಿದ. ಹಾಗೆಯೇ ತನ್ನ ಕುಲಾಚಾರವೇ ಮೇಲೆಂದು ಕೊಂಡಿರುವ ರಾಜಮಾತೆಗೆ ಹೇಗಾದರೂ ಮಾಡಿ ಆಕೆ ಕುದುರೆಡವು ಅರಮನೆಯನ್ನು ಮರಳಿ ದೊರಕಿಸಿಕೊಡಬೇಕು. ಊ ಕುರಿತು ಕಲೆಟಸಾಹೇಬನಿಗೆ ತಾನು ರವಾನಿಸಿರುವ ದಸ್ತಾಯೇಜುಗಳು ಹತ್ತು ಹಲವು. ಆದರೆ ಆತನಿಂದ ಯಾವುದೇ ಜವಾಬಿಲ್ಲ. ಪ್ರಾಯಶಃ ಆತಗೆ ಪುರುಸೊತ್ತಾಗಿರಲಿಕ್ಕಿಲ್ಲ... ದತ್ತಮಂಡಲದ ರಚನೆಯಾದ ಬಳಿಕ ಆತ ತನ್ನ ಆಯುರಾರೋಗ್ಯ ಲೆಕ್ಕಿಸದೆ ಮಂಡಲದ ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡುತ್ತಿರುವನು.. ಹೇಗೋ ಕ್ರಿಸ್ಮಸ್ ಹಬ್ಬಕ್ಕೆ ಆತ ಬಳ್ಳಾರಿಗೆ ಬಾರದೆಯಿರಲಾರರು.. ಕ್ರಿಸ್‌ಮಸ್ ಶುಭಾಶಯ ತಿಳಿಸುವ ನೆಪದಲ್ಲಿ ಹೋಗಿ ಕುದುರೆಡವಿನ ಅತಿಮಾನುಷ ಯಿದ್ಯಾಮಾನಗಳನ್ನು ತಾನಾತಗೆ ಮನವರಿಕೆ ಮಾಡಿಕೊಡಬೇಕು ಯಂದು ಯಿತ್ತ ಯಡ್ಡವನ್ನು ನಿಲ್ದಾರ ಕಂಡ್ಕೊಂಡ ಸಮಯದಲ್ಲಿ... ಅತ್ತ ಕುದುರೆಡವು ಪಟ್ಟಣದೊಳಗ ನಡೆಯುತಲಿದ್ದ ದಯವೀ ಸಂಬಂಧೀ, ರಾಜಕಾರಣ ಸಂಬಂಧೀ ಘಟನೆಗಳು ವಂದಾ.. ಯರಡಾ.. ಹೇಳುತ ಹೋದರೆ ಕೊನೆ ಮೊದಲಿಲ್ಲ ಸಿವನೇ........ ಸವಣೇಂದ್ರಿಯಕೂ.. ನಯನೇಂದ್ರಿಯಕೂ ನಡುವೆ ಮಸ್ತು ದೂರ ಮೇರುಪಟ್ಟಿತ್ತು ಸಿವನೇ.. ಮೋಬಯ್ಯಗೆ ಸಾಂಬವಿ ಅಂಬುವ ಕವುಡು ಬಡಕೊಂಡಿರುವುದಂತೂ ಖರೇ.. ಆದರೆ ಅವಯ್ಯನ ಸುತ್ತಮುತ್ತ ಯಿದ್ದ ಮುದೇರಿಗೆ ಬುದ್ದಿ ಯಿತ್ತೆಂದರೆ ಯಿತ್ತು.. ಯಲ್ಲಾಂದರ ಯಿರಲಿಲ್ಲ.. ಅವರೆಲ್ಲ ಮೊದಲೇ ಸೊಯಂ ಘೋಷಿತ ಅವಧೂತರಾಗಿದ್ದರಷ್ಟೇ... ಕಳ್ಳು ಕುಡಿದು ಹಸಿವು ಬಾಯಾರಿಕೆ ನೀಗಿಸಿಕೊಳ್ಳುತ, ತಂಬಾಕನ್ನೇ ವುಸುರಾಡುತಲಿದ್ದರು.. ಅರಮನೆ ಅಂಬುದು ಬ್ಯಾರೆ ಅಲ್ಲ... ಲಚುಮವ್ವನ ತೋಪು ಬ್ಯಾರೆ ಅಲ್ಲ... ಬಯಲು ಬ್ಯಾರೆ ಅಲ್ಲ... ಅರಮನೆ ಬ್ಯಾರೆ ಅಲ್ಲ... ಅಂಬುವ ನಿರಂತಕ್ಕೆ ಬಂದಿದ್ದರು. ಸಮಸ್ತ ಬೀದಿಗಳು ಅರಮನೆ ವಳಗ ಕಲೆಯುವಂತಿರಬೇಕು.. ಪಕ್ಷಿಗಳು ಸಲೀಸಾಗಿ ಹಾರುತ ಬಂದು ಸದರೀ