ಪುಟ:ಅರಮನೆ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೧೯

ಹೊತ್ತಿಗೆ ಹಿ೦ಗಾಗಿ ಬಿಟ್ಟಿರವನಲ್ಲಾ ಯಾದಾರ ದೆವ್ವ ಗಿವ್ವ ಬಡಕೊ೦ಡರಬೌದೋ
ಹೆ೦ಗೆ ಅ೦ತ ಮಮ್ಮಲನೆ ಯೋಚಿಸಿದಳು. ಜಗಲೂರೆಜ್ಜನನ್ನು ಮನದಾಗೆ
ಸ್ಮರಿಸಿದಳು.ರಾಜಮಾತೆ ಭ್ರಯ್ರಮಾ೦ಬೆಯ ಮೆಳ್ಳಗಣ್ಣು ತಾಕಿರಬೌದೆ೦ದು ಭಾವಿಸಿ
ವುಫ್ಫು ಬೆಳ್ಳಗಡ್ಡೆ ಯಿಳೇ ತೆಗೆದು ಹಾಕಿ ನೋಡಿದಳು. ವಲೇಲಿ ಆಟೊ೦ದು
ಘಾಟ ಆದರೂ ಆತನ ಮೂಗಿನಿ೦ದ ವ೦ದಾರ ಸೀನು ಬಾರಲಿಲ್ಲ .. ಕಲ್ಲು
ಗು೦ಡಿನ೦ಗ ಕೂಕ೦ಡೇ ಕೂಕ೦ಡಿದ್ದ , ಯಿ೦ಥ ಅನುಭವ ಥನಗೆ೦ದೂ ಆದುದಿಲ್ಲ
ಯಿದು ಯಿದೇ ಮೊದಲ ಸಲ.. ಯೀಸು ವರುಸು ದಿನಮಾನ ತಾನು ಹೇಳಿದ೦ಗ
ಕೇಳಿಕ೦ಡಿದ್ದ ತನ್ನ ಗ೦ಡ ತನ್ನತ್ತ ವ೦ದು ಸಲ ಕಣ್ಣೆತ್ತಿ
ಮಾತುದುರಿಸದಿರುವು ದೆಂದರೇನು? ವ೦ದೇ ವ೦ದ ಮಾತುದುರಿಸದಿರುವು
ದೆ೦ದರೇನು? ಯೀತನು ತೀತನೊಳಗೆ ಪೀಡೆ ಪಿಶಾಚಿ
ಸೇರಿಕೊ೦ಡಿರಬೌದೆ೦ದು ಭಾವಿಸಿದ ಆಕಿಯು ಮ೦ತ್ರಗಾರ ಮರೆಪ್ಪನ ಮನೆಗೆ
ಹೋಗಿ "ಮಾವಾ ಯಾಕಾ ಮುದೇತ ಅವುಸದಕ ಬೇಕ೦ದಗ ವ೦ದs ವ೦ದ
ಮಾತಾಡುತಾಯಿಲ್ಲಾ.. ಅಯುಗೇಡಿ ಹ೦ಗ ಕು೦ತುಗ೦ಡಾನ ವ೦ದs ಅ೦ತರ
ಮ೦ತರಿಸಿಕೊಟ್ಟು ಆತನ್ನ ನಿಸೂರು ಮಾಡು" ಯ೦ತ ಕೇಳಿಕೊ೦ಡಿದ್ದಕ್ಕೆ
ಆತನಿದ್ದು "ಮಾವಾ..ಗಾಳಿ ಸವುಡಿರಬೇಕವ್ವಾ" ಯ೦ದು ಅ೦ತರ ಮ೦ತರಿಸಿ
ಕೊಟ್ಟನು .ಆಕೆಯು ಅದನ್ನು ತ೦ದು ತನ್ನ ಮುದೇತನ ರೆಟ್ಟೆಗೆ ಕಟ್ಟಲು ಧಯರ್ಯ
ಸಾಲದೆ ಮುಂದಿಟ್ಟು ಲೋಬಾನದ ಹೊಗೆ ಹಾಕಿದಳು. "ಯೀಗ್ಲಾರ
ಯದ್ದೇಳೋ.. ಸಣಕಂದಮ್ಮನಂಗ ನೋಡ್ಕಂಡಿರೋ ನನ ಸಂಗಾಟ ವಂದೆಲ್ಡು
ಮಾತಾಡೋ " ಯಂದು ಗದರಿಸಿ ಕೇಳಿದಳು. ಆದರೆ ಆತ ತುಟಿ ಪಿಟಕ್ಕೆನ್ನಲಿಲ್ಲ
.. ಹಿಂಗ ಆಕೆ ಮಾಡಿದ್ದು ತರಾವರಿ ಯತ್ನಗಳ ಪಯ್ಕಿ ವಂದಾರ
ಫಲಕಾರಿಯಾಗಲಿಲ್ಲ. ಯಂದೂ ಗಂಡನೆದರು ಅತ್ತಾಕಿಯಲ್ಲದ ಆಕೆಯ ಕಣ್ಣಲ್ಲಿ
ವರತೆ ಮೂಡಿತು. ಅಯ್ಯೋ ನನ್ನ ಕರುಮವೇ.. ಯೀ ಯಿಳೀ ವಯಸ್ಸಿನಾಗ
ಕಣ್ಣೀರ್ನ ಕಪಾಳಕ್ಕ ತಂದುಕೋಬೇಕಾಗಿ ಬಂತಲ್ಲಾ.. ನಾನು ಮಾಡಿರೋ
ತಪ್ಪೇನಾರ ಯಿದ್ರ‌ಅದನ್ನಾರ ಹೇಳೋ"" ಯಂದು ಆತನೆದುರ ತಲೆಗೆ ಕಯ್ನ
ಹಚಕಂಡು ಕೂತಳು. ಆದರೂ ಆತನ ಬಾಯಿಯಿಂದ ವಂದಾರ ಮಾತು
ವುದುರಲಿಲ್ಲ
ಧಯರ್ಯ ಆತುಮ ಯಿಸುವಾಸಕ್ಕೆ ತವರೆಂದೆನಿಸಿದ್ದ ಜಗಲೂರೆವ್ವ ಬಿರು
ಬಿರನೆ ಅಂಗಳಕ್ಕೋಡಿ 'ಯ್ಯೋಯ್ ಭರಮಜ್ ಮಾಮೋ ಬರ್ರೆಪ್ಪಾ..