ಪುಟ:ಅರಮನೆ.pdf/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೦ ಅರಮನೆ ತಿರುಗಿದೆನಲ್ಲಾ ಯಂದು ಸಾಂಬವಿ ಕಿಲ ಕಿಲ ನಗಾಡಿದಳಂತೆ.. ಕುದುರಡವರಮನೆಯೊಳಗ... ಹಾಲುಗಲ್ಲ ಕಂದಮ್ಮನಾಗಿ ಮಾರುಪಟ್ಟಿರುವನಂತೆ ಮೋಬಯ್ಯಾ.. ಅಂಬೆಗಾಲಿಟ್ಟು ಅಡ್ಡಾಡುತಿರುವನಂತೆ ಮೋಬಯ್ಯ. ತನ್ನ ರೊಳ್ಳೆಯನ್ನು ಅರಮನೆ ತುಂಬ ತುಂಬಿರುವನಂತೆ ಮೋಬಯ್ಯಾ.. ಅಂಥ ಮೋಬಯ್ಯಗ ತೊಟ್ಟು ಕಾರೈವ ಮಾಡಿಸುವ ಸಲುವಾಗಿ ಸಾಯಿರದನ್ನೊಂದು ಮಂದಿ ಮುತ್ತಣ್ಣೀರನ ಕರೆಯಿಸಬೇಕೆಂದು, ವಯನಾದ ಹೆಸರನ್ನ ಯಿಡುವ ಸಲುವಾಗಿ ಸಾಸ್ತಿರಿಗಳನ, ಮೋನಾಮ ಕಲಿಸುವ ಸಲುವಾಗಿ ಮೋಸಯ್ಯನವರನ.. ಜೋಡಿಸುವ ಸಲುವಾಗಿ ಕುದುರೆಡವೇಲಿ ಅರಮನೆಗೆ ಅರಮನೆಯೇs.... ಚೆಲ್ಲೆಲ ಚೆಲಿಮಲದ ಚನ್ನಕೇಸುವರೆಡ್ಡಿಯ ಸೊಂಟ ಮುರಿದು, ಕಪಟಾಳಿನ ಕರೆಪ್ಪನಾಯ್ಡುವಿನ ಯಲ್ಲು ಸಾಯಿರೆಕರೆ ಭೂಮಿಯನ್ನು ದೀನದಲಿತರಿಗೆ ಬಡಬಗ್ಗರಿಗೆ ಹಂಚಿ, ಮಾಕಲಚೆರುವಿನ ಅಯೂರು ಮಂದಿಯನ್ನು ತನ್ನ ಕುಲಕ್ಕೆ ಮತಾಂತರಗೊಳಿಸಿ, ಯಡ್ರಾಮಿಯೊಳಗೊಂದು, ಹಲಗೇರಿಯಲ್ಲೊಂದು, ಆಸುಪರಿಯಲ್ಲೊಂದು ಸಾಲೆ ತೆರೆದು ಯಲ್ಲಾಕಡೆ ಯೀಸ್ಟ್ ಯಿಂಡಿಯಾ ಕಂಪನಿಯ ಹೆಸರನ್ನು ರಾರಾಜಿಸುವಂತೆ ಮಾಡಿ ಕಡಪಾಕ್ಕೆ ಹೋಗುವ ಮಾರಗ ಮದ್ಯದ.. ಅಂದರೆ ಅನಂತಪುರಕ್ಕೆ ಸಮೀಪದ ಬುಕ್ಕಸಾಗರ ಚೆರುವಿನ ದಂಡೆ ಮ್ಯಾಲ ಟಂಟೊಡೆದು ದಣಿವಾರಿಸಿಕೊಳ್ಳುತ ಕೂತಿದ್ದ ಕಲೆಟ್ರುಥಾಮಸು ಮನೋಸಾಹೇಬನ ಯದುರು ಮಟ್ಟಸ ನಿಲುವಿಲೆ ನಿಂತು ಯಡ್ಡವರನು ವಂದೇ ವುಸುರಿಗೆ ಕುದುರೆಡವಿನ ಸಮಸ್ತ ಯಿದ್ಯಾಮಾನಗಳನ್ನು ಹೇಳಿಕೊಳ್ಳುತ್ತಿದ್ದ ಹೊತ್ತಿನಲ್ಲಿ..... ಯಿತ್ತ ಕುದುರೆಡವಿನಲ್ಲಿ... ಮಕಮಲ್ಲಿನಂಥ ನಸುಕು.. ಮುಳುಗಿದ್ದ ತಪ್ಪಿಗೆ ವುದಿಸದೆ ಬೇರೆ ದಾರಿಯಿರಲಿಲ್ಲ ಸೂರನಿಗೆ, ಸೂರ ವುದಿಸಿದ ಯಂಬ ಕಾರಣಕ್ಕೆ ಯಚ್ಚರಗೊಳ್ಳದೆ ಬೇರೆ ದಾರಿಯಿರಲಿಲ್ಲ ಪಕ್ಷಿಗಳಿಗೆ, ಬೀಸದೆ ಬೇರೆ ದಾರಿ ಯಿರಲಿಲ್ಲ ಗಾಳಿಗೆ, ಗಾಳಿ ಬೀಸುತ್ತಿರುವ ಕಾರಣದಿಂದಾಗಿ ಹಿಂದಕು ಮುಂದುಕು ವಾಲಾಡದೆ ಬೇರೆ ದಾರಿ ಯಿರಲಿಲ್ಲ ಗಿಡಮರಗಳಿಗೆ, ರಾತ್ರಿಬಳಿದಿದ್ದ ಕಪ್ಪು ಬಣ್ಣವನ್ನು ಬೆಳಕಿನ