ಪುಟ:ಅರಮನೆ.pdf/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೭೧ ತಿಳಿ ಜಲದಿಂದ ಮಯ್ಯ ತೊಳಕೊಳ್ಳದೆ ಬೇರೆ ದಾರಿಯಿರಲಿಲ್ಲ ಗುಡ್ಡಗಳಿಗೆ, ನಿಡುಗಲ್ಲುಗಳಿಗೆ, ತಮ್ಮ ನವುರಾದ ನೀಳು ಬೆರಳುಗಳಿಂದ ಮಲಗಿದವರಿಗೆ ಕಚಗುಳ್ಳಿ ಯಿಕ್ಕದೆ ಬೇರೆ ದಾರಿ ಯಿರಲಿಲ್ಲ ಸೂರನ ಕಿರಣಗಳಿಗೆ, ಮಲಗಿರೋ ತಪ್ಪಿಗೆ ಯಚ್ಚರಾಗದೆ ಬೇರೆ ದಾರಿ ಯಿರಲಿಲ್ಲ ಜನರಿಗೆ, ಯಚ್ಚರಗೊಂಡ ತಪ್ಪಿಗೆ ಕಣ್ಮುಚ್ಚಿಕೊಂಡು ವಾಸ್ತವ ಗ್ರಹಿಸದೆ ಬೇರೆ ದಾರಿ ಯಿರಲಿಲ್ಲ ಯಚ್ಚರ ಗೊಂಡವರಿಗೆ.. ಮಯ್ಯಂಬುದು ಅಳಾರಾಗಿರುವ ಅನುಭವ ಪ್ರತಿಯೊಬ್ಬರದು.. ಯಳೆಯ ಬಿಸಿಲನ್ನು ತಮ್ಮ ತಮ್ಮ ಪುಟ್ಟಕಖ್ಯಗಳಿಂದ ಮೊಗೆಯುತ್ತಿರುವ, ಬೆಳಗಿನ ಬೆಳಕನ್ನೇ ನೊರೆವಾಲೆಂದು ಭ್ರಮಿಸಿ ಕುಡಿಯುತ್ತಿರುವ, ಮಲಗಿದ್ದ ಮಾರಗಲುದ್ದದ ಜಾಗವನ್ನೇ ಸುಂದರ ವುದ್ಯಾನ ಮಯ್ದಾನವೆಂದು ಭಾವಿಸಿ ಆಡುತ್ತಿರುವ, ಬೆಳಕಿನ ತಿಳಿಗೊಳದಲ್ಲಿ ಕಯ್ಯಕಾಲು ಬಡಿಯುತ್ತ ಯಿಜಾಡುತ್ತಿರುವ, ಹಾಲುಗಲ್ಲದ ಮ್ಯಾಲ ವರಮಾನಕ್ಕೊಂದು ಭವಿಷತ್ತಿನ ಭಾಷ್ಯ ಬರೆಯುತ್ತಿರುವ, ನಗುಕೇಕೆಗಳ ಗೀಗೀ ಲಾವಣಿಗಳನ್ನು ರಚಿಸುತ್ತಿರುವ, ತಮ್ಮ ತಮ್ಮ ಬೊಚ್ಚು ಬಾಯಿಗಳೊಳಗೆ ಊರೇಳು ಲೋಕಗಳನ್ನು ತೋರುತ್ತಿರುವ ತಮ್ಮ ತಮ್ಮ ಕೂಸು ಕಂದಮ್ಮಗಳ ಕಡೇಕ ನೋಡುತ್ತಾರೆ, ಸಿಕ್ಕವರಿಗೆ ಸಿವಲಿಂಗಾಂತ ಯತ್ತಿಕೊಳ್ಳುತ್ತಾರೆ.. ತುಟಿ ಖಜಾನೆಗಳಲ್ಲಿರೋ ಮುತ್ತು, ರತುನ, ವಜ್ರ, ವಯಢಲ್ಯಗಳನ್ನು ಆ ಕ್ಷಣ ಖಾಲಿ ಮಾಡಿ ಬಿಡಬೇಕೆಂದು ನಿರರಿಸಿರುವವರಂತೆ ಲೊಚ ಲೊಚ ಮುದ್ದು ಕೊಡ ತೊಡಗುತ್ತಾರೆ.. ಹೆಂಡತಿ ಕಮ್ಮೊಳಗಿನ ಕೂಸನ ಗಂಡ ಕಸಗೊಳ್ಳೋದು ತಡಾಗೋದಿಲ್ಲ.. ಗಂಡನ ಕಮ್ಮೊಳಗಿನ ಕೂಸನ ಹೆಂಡತಿ ಕಸಗೊಳೋದು ತಡಾಗೋದಿಲ್ಲ... ಗಂಡ ಹೆಂಡಂದಿರ ಕಮ್ಮೊಳಗಿನ ಕೂಸನ ನೆರೆಹೊರೆಯವರು ಕಸಗೊಳೋದು ತಡಾಗೋದಿಲ್ಲ.. ಹಿಂಗs ಕೂಸುಗಳು ವಬ್ಬರ ಕಯ್ಯಂದ ಯಿನ್ನೊಬ್ಬರ ಕಯ್ಯಗೆ ಚಲಾವಣೆಗೊಳ್ಳುವ ಚಿನ್ನದ ನಾಣ್ಯಗಳಾದವು.. ಯೇಟು ತಿಂದರೂ ಸವೆಯದಂಥ ಹಣ್ಣು ಮಿಠಾಯಿಗಳಾದವು.. ಯೇಟು ನೋಡಿದರೂ ಕಣ್ಣಿನ ದಾಹ ಹಿಂಗಿಸದಂಥ ಸುಂದರ ದ್ರುಸ್ಯಗಳಾದವು.. ಆಟಕ್ಕೆ ಜೀವಂತ ಆಟಿಗೆಗಳಾದವು.. ಮುದುಕರನ ಹರೇದ ಹುಡುರನ್ನಾಗಿ ಮಾಡಿದವು, ಯಲ್ಲೆಲ್ಲಿ ನೋಡಿದರೂ ಯಿಯಿದವಯೋಮಾನದ, ಯಿಯಿದ ಜಾಯಮಾನದ, ಯಿಯಿಧ ಗಾತುರದ ಹಸುಕಂದಮ್ಮಗಳೇ ಕಂದಮ್ಮಗಳು ಸಿವನೇ.. ಕುದುರೆಡವ ಊ ದ್ರುಸ್ಯಗಳಿಂದ