ಪುಟ:ಅರಮನೆ.pdf/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೭೩ ಆಡಿಸುತ ಊಜಾಡುತವನೆ ಮೋಬಯ್ಯ, ಬಯಲೊಳಗ ಬಂಗಲ ಹಿಡಿಯಲಕಂತ ಕಯ್ಯ ಚಾಚುತವನ ಮೋಬಯ್ಯ.. ಬಯಲೊಳಗ ಬಯಲ ಚಂಡನ್ನು ವಡೆಯುವವನಂತೆ ಕಾಲನ ಚಾಚುತವನೆ ಮೋಬಯ್ಯಾ.... ಯೋ ಅಲವುಕಿಕ ದ್ರುಸ್ಯವನ್ನು ಸವಿಯುತ್ತಿರುವ ಪರಮ ಲವುಕಿಕ ಮಂದಿ ಯಿದೇನಪ್ಪಾ ನಿನೆ ಮಾಯೆ, ತಾಯಿ ಸಾಂಬವೀ, ಯಿದೇನವ್ವಾ ನಿನ ಮಾಯೆ ಯಂದುದ್ಧಾರ ಮಾಡುತ್ತಿದ್ದುದನು ಯೇನೆಂದು ಹೇಳಲಿ ಸಿವನೇss.. ಮುಟ್ಟಲಕೆಂದು.. ಮುಟ್ಟದಿರಲಕೆಂದು ಹಿಂದಕ ಮುಂದಕ ಜರುಗಾಡುತಲಿದ್ದ ಜನರನ್ನುದ್ದೇಶಿಸಿ ಯೇಕನಾತಪ್ಪ ಯಂಬುವವಧೂತನು ಮುಟ್ಟು ಮಯ್ಲಿಗಿ ಆದೊರದರ ಸನೀಕ ಹೋಗ ಬ್ಯಾಡೂರಿ ಯಂದೂ.. ಸಾಣಗೀಣ ಮಾಡಿರದೊರು ಅದರ ಸಣೀಕ ಹೋಗ ಬ್ಯಾಡೂರಿ ಯಂದು ಯೆಕದಾರೆವ್ವನೂ ಯಚ್ಚರಿಸುತಲಿದ್ದುದರ ಬಗ್ಗೆ ಯೇನು ಹೇಳಲಿ ಸಿವನೇ.. ಯುದ್ದ ಕಾಳಗಗಳಿಗೆ ಹೆದರದ ಮಂದಿ ಮೋಬಯ್ಯನ ಆ ಸ್ಥಿತೀನ ನೋಡಿ ಭಯದ ತತ್ತಿಯಿಡ ತೊಡಗಿದುದರ ಬಗ್ಗೆ ಯೇನು ಹೇಳಲಿ ಸಿವನೇs.. ಆ ಭಯಕ ಯಿದ್ದ ಕಾರಣಗಳು ವಂದss ಯರಡss... ಆ ಮೂರ ರಾಜ ನಂಬುತ್ತಿರುವನೆಂದಮಾಲ, ಯೇವೂರ ರಾಜ ನಂಬುತ್ತಿರುವನೆಂದಮಾಲ, ಸಮಸ್ತ ರಾಜರು ನಂಬುತ್ತಿರುವರೆಂದಮಾಲ, ಯಥಾ ರಾಜಾ ತಥಾ ಪ್ರಜಾ ಯಂಬ ಮಾತೇ ಯಿರುವುದೆಂದ ಮ್ಯಾಲ ಮಾಮೂಲು ಮಂದಿ ನಂಬದಾಂಗ ಹೆಂಗಿರುತದss .. ವಂದಲ್ಲಾ ವಂದು ಕಪಕಾಣಿಕೆ ಹಿಡಕೊಂಡು ಸಾಲು ಗಟಿತು ಮಂದಿ ಅರಮನೆಯ ಮುಂದುಗಡೆ. ನಂದಗೋಕುಲದ ಕಂಪು ಸೂಸುತಲಯ್ಕೆ... ಅವುಧವುದು.. ಸೀಕ್ರುಷ್ಣನ ಬಾಲಲೀಲೆಯ ನಂದಗೋಕುಲ ಬ್ಯಾರೆ ಅಲ್ಲ.. ಸಾಂಬವಿಯ ಸಿಸುಕಂದಮ್ಮನಿರುವ ಸದರಿ ಅರಮನೆಯು ಬ್ಯಾರೆ ಅಲ್ಲ.. ನಿಂತ ನಿಂತಲ್ಲೇ ಮಂದಿ ತಮಗಾದಾನಂದ ತಡಕೊಳ್ಳಲಾಗದ ಬುಳ ಬುಳನೆ ಅಳ ತೊಡಗಿದರು.. ತಮಗರಿವಿಲ್ಲದಂತೆ ಗೊಳ್ಳನೆ ನಗಾಡ ತೊಡಗಿದರು ಕೂಸಯ್ತು ಹಚಕೊಂಡಿದ್ದ ಮಳ್ಳ ಮಂದಿ.. ಕೂಸು ಕಂದಯ್ಯನಾಗಿರೋ ಮೋಬಯ್ಯನ ದರುಸನ ಪಡಕೊಳ್ಳೋ ಸರದಿ ತಮಗ್ಯಾವಾಗ ಬರುತ್ತದೋ ಯಂದನಕಂತ ನಿಂತ ನಿಂತಲ್ಲೇ ಮಿಡುಕಾಡತೊಡಗಿದರು ಅಮಾಯಕ ಭಕುತಾದಿ ಮಂದಿ.. ಅರಮನೆಯೊಳಗಿನಿಂದ ಸೂಸಿ ಬರುತಲಿದ್ದ ಲಟಲಟನೆ ಲಟ್ಟಿಗೆ