ಪುಟ:ಅರಮನೆ.pdf/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೪ ಅರಮನೆ ಮುರಿಯುತಲಿದ್ದ ಸದ್ದು, ನೀವಳಿಸಿ ದ್ರುಸ್ಟಿ ತೆಗೆಯುತಲಿದ್ದ ಸದ್ದು.. ಬೆಂಕಿ ಬಾಂಡೆಲೆಗೆ ಬಿದ್ದ ವುಪುE ಚಟಚಟನೆ ಸಿಡಿಯುತಲಿದ್ದ ಸದ್ದು... ಕಸಬಾರಿಗೆ ನೀವಳಿಸಿ ಕಾಳಿಕಣ್ಣು ಬೋಳಿಕಣ್ಣು ಮಾರಿಕಣ್ಣು ಮಸಣಿ ಕಣ್ಣು... ನಿನ ಕಡೀಕೆ ಸುಳಿಯದಾಂಗಿರಲಿ, ಸುಳಿದೊಡನೆ ಸೇರಿ ಹ್ಯಾಗ್ರಿ ಯಂದು ಮಣ ಮಣ ಅರಿತಿರೋ ಸದ್ದು.. ನಿಂಗೆ ಕೊಣ್ ಬುಡೋರ ಕಣ್ಣಿಗೆ ಕಾರೆ ಮುಳ್ಳು ಚುಚ್ಚಲೀ. ನಿಂಗೆ ಕೊಣ್ ಬುಡೋರ ಕೊಣ್ಣೀಗೆ. ಕೇಳಿಸಿಕೊಳುತಾss ಕೊಳುತಾ ಮಂದಿ ತಮ್ಮ ತಮ್ಮ ಕಣ್ಣಾಲಿಗಳನ ಕಿರಿದುಗೊಳಿಸಿಕೊಳ್ಳ ತೊಡಗಿದರು.. ಚಲಿಸಲಾರದ ಚಲಿಸುತಲಿರುವ ಸರತಿ ಸಾಲು.. ಮುತ್ತಿನ ಪಲ್ಲಂಗದ ಮ್ಯಾಲ ಬಲಗಾಲ ಹೆಬ್ಬೊಟ್ಟನ ಬಾಯೊಳಗ ಯಿಟುಕೊಂಡು ವುಮೃ ವುಮೃ ಯಂದು ಜಮುಡುತಲಿರುವ ಅರವತ್ತೆಪ್ಪತ್ತರ ವಯೋಮಾನದ ಮೋಬಯ್ಯನೆಂಬುವ ಕೂಸು.. ಅದರ ಯೇಕರಿಕೆ, ದೇಕರಿಕೆ ನೋಡಿಕೊಳ್ಳುತಲಿದ್ದ ಕಾರೆವ್ವ ಬೋರೆವ್ವ ಮಾಳವ್ವ ಜಾಲಾಂದರದವ್ವ ಮೆಂಬಾರವ್ವರೇ ಮೊದಲಾದ ಮುದುಕಿಯರು.. ಯೀ ಜೋಜಿಗವ ನೋಡಲು ಯಲ್ಲಾರು ಬಂದರು? ಯಲ್ಲಾರು ಹೋದರು? ಆದರ ಬರೋರು ಬಂದು ನೋಡಿಕೊಂಡು ಹೋಗಲಿಲ್ಲವಲ್ಲಾ... ಯಂದು ಯಲ್ಲಾರು ಪೇಚಾಡಿ ಕೊಳ್ಳುತ್ತಿರುವಾಗ್ಗೆ... ಮನಸನ ವಝಿ ಮಾಡಿಕೊಂಡು ಹೋಗಿರುವಾಕಿ ಅದೆಂಗ ಕಡೀಕೆ ಮುಖವಾಡುತಾಳ ತಂದೊಬ್ಬರು ಅನುವಾಗ್ಗೆ, ಪತ್ನಿ ಪದವೀನ ನಿಭಾಯಿಸುವುದೆಂದರ ಸುಮ್ಮನೇನರಪ್ಪಾ, ಯಾದೇ ಪತ್ನಿ ತನ ಗಂಡಗ ಪತ್ನಿಯೂ ಆಗಬೇಕು, ತಾಯಿನೂ ಆಗಬೇಕು ಎಂದಿನ್ನೊಬ್ಬರು ಜವಾಬು ನೀಡುತಿರುವಾಗ್ಗೆ. ವಟ್ಟಿನಾಗ ಆಕೆಗೆ ದಯವದ ತಿಕ್ಕಡಿ ಬಡಕೊಂಡಯ್ಕೆ ಯಂದು ಮತ್ತೊಬ್ಬರು ಪೇಚಾಡಿಕೊಳುತಿರುವಾಗ್ಗೆ.... ರಣ ಬಯಲಸೀಲಿಂದ ರಾಜ ಪರಿವಾರದವರ ಪಯ್ಕ ವಂದಿಬ್ಬರು ಬಂದು ಸಿಸುವಿನ ದರುಸನ ಪಡಕೊಂಡು ಹಿಮ್ಮುಖವಾಗಿ ಹೋದರು. ಅದಾದ ಸೋಲುಪ ಹೊತ್ತಿಗೆ ತನ್ನ ವಾರಿಗೆಯವನಾದ ಮೋಬಯ್ಯನು ತಾಯಿಯ ಪವಾಡದಿಂದ ಸಿಸುವಾಗಿ ಆಡುತಿರುವ ಅಲವುಕಿಕ ಯಿದ್ಯಾಮಾನವನ್ನು ಅರಗಿಸಿಕೊಳ್ಳಲಾಗದ ದಮ್ಮೂರು ಯಂಕಾವಧೂತರಿಂದ ಭೋದ ತಕ್ಕೊಂಡು