ಪುಟ:ಅರಮನೆ.pdf/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೭೫ ಪಲಾನಾವಧೂತನಾಗುವ ಸಲುವಾಗಿ ಹಸುವುಲ ಪಾಲಯ್ಯನು 'ಜಗದಂಬ ಜಗದಂಬ' ಅನಕಂತ ಪಲಾನ ದಿಕ್ಕಿನ ಕಡೆ ಹೋದನು. ಅದಾದ ಸೋಲುಪ ಹೊತ್ತಿಗೆ ಯಿನ್ನೊಬ್ಬರು ಯಿನ್ನೊಂದು ರೀತೀಲಿ, ಮತ್ತೊಬ್ಬರು ಮತ್ತೊಂದು ರೀತೀಲಿ ಬಂದು ಕಂಡರಿಯದ ಕೇಳರಿಯದ ಆ ಮಾಯಾವಿ ಸಿಸುವಿನ ಲೀಲಾಯಿನೋದವನ್ನು ಕಣ್ಣಲ್ಲಿ ತುಂಬಿಕೊಂಡು ಹೋದರೆಂಬಲ್ಲಿಗೆ ಸಿವ ಸಂಕರ ಮಾದೇವಾss.. ಗುರಪ್ಪನು ತಂದುಕೊಟ್ಟಲಾಗಾಯ್ತು ಮಾಬಲಿ ಚಂಡನ ರುಷಣ ಬೀಜದ್ವಯಗಳನ್ನು ತನ್ನ ಕೊಳೊಳಗೆ ಜೋತಾಡುತ ಕಟ್ಟಿಕೊಂಡು ಮಾರನಾಯಕನು ತನ್ನ ಸೊಕ್ಕೆ ಪ್ರಜೆಗಳ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿರುವಾಗ್ಗೆ... ಯಡ್ಡವರನು ಸಲ್ಲಿಕೆ ಮಾಡಿದ ವರದಿಗಳ ಅತಿಮಾನುಷ ಶಕ್ತಿಯ ಪೂರುವಾಪರ ಸತ್ಯಾಸತ್ಯತೆಯನ್ನು ಅರಿಯೋ ನಿಮಿತ್ತ ನಾನಾ ನಮೂನೆ ಯಿಷಯಗಳ ಯಿದ್ವಾಂಸರನ್ನು ದುಂಡು ಮೇಜಿನ ಸುತ್ತ ಕುಳ್ಳಿರಿಸಿಕೊಂಡು ನಿಶಿತಮತಿಯ, ವಂಗ್ರಾನಿಕ ಮನೋಭಾವದವನೂ ಆದಂಥ ಕಲೆಬ್ರುಥಾಮಸು ಮನೋ ಸಾಹೇಬನು ದತ್ತ ಮಂಡಲದ ಕೇಂದ್ರಸ್ಥಾನವಾದ ಕಡಪಾದ ಕಛೇರಿವಳಗೆ ಕೂಕಂಡು, ನಿಂತುಕೊಂಡು ಸತಪಥ ಅಡ್ಡಾಡುತ ಹುಸ್.. ಡುಸ್ ಯಂದು ವುದ್ದಾರ ಮಾಡುತ ಯಿಂಡಿಯಾದ ಬ್ರುಹದ್ ಗಾತುರದ ನಕ್ಷೆಯ ಕಡೀಕೊಮ್ಮೊಮ್ಮೆ ಮುಖ ಸಿಂಡರಿಸಿಕೊಂಡೂ, ಮುಗುಳು ನಗುತ್ತಲೂ ನೋಡುತ್ತಿರುವಾಗ್ಗೆ... ತವರಿಗೋಗುವ ಮಾರಮಧ್ಯದ ಕಾಡಡವಿಯೊಳಗೆ ತನ್ನ ತಂದೆ ಅಂತಾಡೆಪ್ಪನು ಆಡುತ್ತಿದ್ದ ಸಂತಯಿಕ ಮಾತುಗಳನ್ನು ಲೆಕ್ಕಿಸದೆ ಯಾದಾರ ಹುಲಿ ಚಿರತೆ ಬಂದು ನನ್ನನ್ನು ತಿಂಬಬಾರದೆ, ಯಿನ್ಯಾಕ ಭೂಮಿ ಮ್ಯಾಲ ನಾ ಬದುಕಿರಬೇಕು.. ಯಂದು ಜೋರಾಗಿ ಅಳಕಂತ ಜಗಲೂರೆವ್ವ ದುಕ್ಕ ಮಾಡುತಿರುವಾಗ್ಗೆ.... ಪ್ಲಾ... ಪ್ಲಾ.. ವಂಡರಫುಲ್ಲು.. ಹೋ ಹೋ ವಂಡರಫುಲ್ಲು.. ಹೇ.. ಹೇ ಫಂಟಾಸ್ಟಿಕ್ ಯಂದು ಮರಕರು ಜೆನ್ನಿಫರಮ್ಮಳ ಕಲಾಕ್ರುತಿಯನ್ನು ನೋಡುತ ಲಂಡನ್ನಿನ ಆರು ಗಾಲರಿಯಲ್ಲಿ ಹೊಗಳುತಿರುವಾಗ್ಗೆ... ವಲ್ಲದ ಮನಸಿನಿಂದ ಅಲಬಲ್ಬನು ಬೆಳಗಾವಿ ಸೀಮೆವಳಿತದ ಥ್ಯಾಕರೆ