ಪುಟ:ಅರಮನೆ.pdf/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ಅರಮನೆ ಸಾಹೇಬನ ಹೆಗಲಿಗೆ ಹೆಗಲು ಕೊಡಲಿಕ್ಕೆಂದು ಧಾರವಾಡ ಪಟ್ಟಣದತ್ತ ಮಾರಲ ಸಮೇತ ಪ್ರಯಾಣ ಕಳ್ಕೊಂಡಿರುವಾಗ್ಗೆ... ಕುದುರೆಡವಿನ ಅವಳಿ ಗ್ರಾಮಗಳಾದ ಬಡೇಲಡಕು, ಕಾನಾಮಡುಗು, ಗುಂಡುಮುಳುಗು, ಜರಿಮಲೆ ಅವಳಿ ಗ್ರಾಮಗಳಾದ ಯದ್ದಡಕೆ, ಮಾರಲ ಮಡಕೆ, ಯಾಪಲಡಕೆ, ಸಿರಗುಂಪಿಯ ಅವಳಿ ಗ್ರಾಮಗಳಾದ ಸಾಲಗುಂದಿ, ಮುಕ್ಕುಂದಿ, ಹತಗುಂದಿ, ದರೂರು ಅವಳಿ ಗ್ರಾಮಗಳಾದ ಯಾಪಲದಿನ್ನಿ, ಮಾಪಲದಿನ್ನಿ, ಕಾಪಲದಿನ್ನಿ ಯೆವೇ ಮೊದಲಾದ ಛಪ್ಪನ್ನಾರು ಗ್ರಾಮಗಳಲ್ಲಿ ಹೋಗಲಿಕ್ಕಾಗದೋರು, ಬಾರಲಿಕ್ಕಾಗದೋರು ತಮತಮಗೆ ತಿಳಿದಂಗೆ ಗೊಂಬಿಮಾಡಿ ಅದಕ್ಕೆ ಮೋಬಯ್ಯ ಸಿಸುವು ಯಂದು ನಾಮಕರಣ ಮಾಡಿ ತೊಟ್ಟಿಲೊಳಗಿಟ್ಟು ತೂಗುತ ಪಾಡುತ್ತಿರುವಾಗ್ಗೆ..... ಆ ಮಾಯಾದ ಸಿಸುವು ಹೆಂಗಯೆ ಯೇನಮ್ಮೆ ಯಂದು ನೋಡುವ ನಿಮಿತ್ತ ಮಂದಿ ನಡಕೊಂಡೋ, ಸವಾರಿ ಬಂಡಿ ಕಟ್ಟಿಕೊಂಡೋ, ಸಾರದ ಕತ್ತೆಗಳ ಮ್ಯಾಲ ಕೂಕಂಡೋ ಕುದುರೆಡವಿನತ್ತ ಪ್ರಯಾಣ ಬೆಳೆಸಿರುವಾಗ್ಗೆ... - ಮಾಯಾದ ಸಿಸುವು, ಮಾಯಾದ ರೀತಿಯಲ್ಲಿ ಮಾಯಾದ ಸ್ಥಿತಿಯಲ್ಲಿ ಮನೋ ಯೇಗದಲ್ಲಿ ಕೂಡ್ಲಿಗಿ ತಲುಪಿ ಹಂಸತೂಲಿಕಾತಲ್ಪದ ಮ್ಯಾಲಂಗಾತ ಮಲಿಕ್ಕಂಡಿದ್ದ ಜೆನ್ನಿಫರಮ್ಮಳ ಕಣಸಲ್ಲಿ ಗೋಚರ ಮಾಡಿರುವಾಗ್ಗೆ... ಯಿತ್ತ ಕುದುರೆಡವು ಪಟ್ಟಣವನ್ನೇ ಸಣ್ಣ ಕಂದಮ್ಮನನ್ನಾಗಿ ಮಾಡಿ ತೂಗಾಡುತಲಿದ್ದ ಮೋಬಯ್ಯನೆಂಬ ಸಿಸುವು ಲೀಲಾಯಿನೋದವನ್ನು ಮರಯುತಲಿತ್ತು. ಆನಂದದ ಯಿಷಯದಲ್ಲಿ ಹೊಸ ಸಖೆಯನ್ನೇ ಆರಂಭಮಾಡಿತ್ತು. ಅಲ್ಲಿ ಯಿಧ ಯಿಧದ ಜೋಗುಳ ಪದಗಳನ್ನು ಹಾಡುತ್ತಿದ್ದವರೆಷ್ಟೋ? ಯೇನಿಲ್ಲಾಂದರು ಸಾಯಿರ ಮಂದಿ ಕಯ್ಯಂದ ರಾಗಿ ಅಂಬಲಿ, ಕೆನೆಮೊಸರು, ಆಕಳ ತುಪ್ಪದಲ್ಲಿ ತೇದ ವುತ್ತುತ್ತಿಯನ್ನು ನಂದವೇದ್ಯ ಮಾಡಿಸಿಕೊಂಡಿರಬೌದು. ಅದರೊಳಗೆ ಸಾಂಬವಿಯೋ? ಸಾಂಬವಿಯೊಳಗೆ ಅದೋ? ವಟ್ಟಿನಲ್ಲಿ ಕುದುರೆಡವು ಪಟ್ಟಣದ ಕಣ್ಣಗೊಂಬಿಯಾಗಿಬಿಟ್ಟಿತ್ತು. ಅದು ಸದರಿ ಪಟ್ಟಣ ವಂದೇ ಅಲ್ಲದೆ ಗುಂಡುಮುಳುಗು, ಖಾನಾಮಡುಗು, ಬಡೇಲಡಕು, ಕುಮತಿ, ಜರುಮಲಿ, ಹ್ಯಾಳ್ಯಾ ಕೊತ್ತಲಗಿಯೇ ಮೊದಲಾದ ಸುತ್ತಮುತ್ತಲ ಹೋಬಳಿ ಗ್ರಾಮಗಳ ತಲೆಯೊಳಗೆಲ್ಲ ಹೇನಾಗಿ