ಪುಟ:ಅರಮನೆ.pdf/೫೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೭೭ ಹರಿದಾಡಲಾರಂಭಿಸಿತು. ಆಳರಸರ ದವುರನ್ಯಕ್ಕೆ ಸಿಲುಕಿ ಕಿಲುಬು ದುಗ್ಗಾಣಿ ಯಂಥಾಗಿದ್ದ ಕುದುರೆಡವು ಪಟ್ಟಣವನ್ನು ದತ್ತಮಂಡಲ ಪ್ರಾಂತದೊಳಗ ಯದೆ ಸೆಟೆಸಿ ನಿಲ್ಲುವಂತೆ ಮಾಡಿರುವ ತಾಯಿಯ, ತಮ್ಮ ಗುಡಿಹಿ೦ದಲ ಮೂಳೆ ಮೋಬಯ್ಯನನ್ನು ಅಗಾಧ ಸಿಸುವಂ ಮಾಡಿರುವ ತಾಯಿಯ ರುಣವನ್ನು ಹೆಂಗ ತೀರಿಸಬೇಕೆಂಬ ಚಿಂತೆ ಯಾವತ್ತೂ ಪ್ರಜಾನಿಕವನ್ನು ಬೆಂಬತ್ತಿ ಕಾಡತೊಡಗಿತು. ಆಕೆ ಅದಾಳಂದರ ಅದಾಳ, ಯಲ್ಲಾಂದರ ಯಿಲ್ಲ. ಮೋಬಯ್ಯನ ರೂಪದಲ್ಲಿ ಸಿಸುಮೊಂದು ಅಯಿತೆಂದರ ಅಯಿತೆ, ಯಿಲ್ಲಂದರ ಯಿಲ್ಲ. ಅವುದೋ ಅಲ್ಲವೋ ಎಂಬುವ ಸಂದಿಗ್ಧದೊಳಗ ತಾವು ವದ್ದಾಡುತಲಿದ್ದಲ್ಲಿ ದಯವ ಮತ್ತ ಮುನುಸುಕೊಂಡರೇನು ಗತಿ? ತಮ್ಮ ಕೂಸುಕಂದಮ್ಮಗಳನು ತಾಯಿ ತಮ್ಮ ಯಿರುದ್ದವೇ ಯತ್ತಿಕಟ್ಟಿದರೇನು ಗತಿ? ತಮ್ಮ ಹೆಂಡಂದಿರ ಹೊಟ್ಟೆಗಳನ ತಾಯಿ ಯಿಳುವಿದರೇನು ಗತಿ? ಅದಕ ತಾವು ಮುಂದಕ ಮಾಡೋದನು... - ಮೋಬಯ್ಯನಿಗೊಂದು ತೊಟ್ಟಿಲು ಕಾಶ್ಮೀವು ಮಾಡಬೇಕು? ವಂದು ನಾಮಕರಣ ಕಾರೈವು ಮಾಡಬೇಕು? ಮೋಬಯ್ಯ ಯಾವ ಚಣದಲ್ಲಿ ದೊಡ್ಡವನಾಗಿ ಬಿಡುವನೋ? ಅದು ಹೇಳಲಕ ಬರುವಂಗಿಲ್ಲ, ಕೇಳಲಕ ಬರುವಂಗಿಲ್ಲ. ಅಷ್ಟರೊಳಗ ಯಿಂಥದ್ದೊಂದು ಕಾರೈವುಗಳ ಮಾಡಿ ತಾವು ಪುನೀತರಾಗಬೇಕು.. ತಾಯಿಯಿಂದ ಸಯ್ಯ ಅನಿಸಿಕೋಬೇಕು.. ಆದರ ಅರಮನೆಯೊಳಗಿರುವ ಮಂದಿ ತಮ್ಮ ತಮ್ಮ ಬಾಯ ಹಲ್ಲುಗಳ ಸಂದೀಲಿ ಕಡ್ಡಿಗಳನ್ನಾಡಿಸುತ ಕೂಕಂಡಿರುವರೋ ಹೆಂಗೆ? ಅವರು ತಮ್ಮ ತಮ್ಮ ಕಿವಿಗಳೊಳಗಿನ ಕೂಕಣಿಯನ ತೆಗಿಸಿಕೊಳ್ಳುತ ಕೂಕಂಡಿರುವರೋ ಹೆಂಗೆ..? ಯಂದನಕಂತ ಮಂದಿ ಅರಮನೆಯಂಗಳದಲ್ಲಿ ನೆಲ ಮುಗಿಲುಗೇಕಾಗಿ ನಿಂತು... “ಬ್ಯೂನರಾ ಪಟ್ಟಣ ಸೋಮಿಗಳಿರಾ.. ನಮ್ಮ ಮೋಬಯ್ಯ ಸಿಸುವಾಗಿ ಮಾರು ಪಟ್ಟು ಜ್ಯೂಸು ದಿವಸಗಳಾದವು ಲ್ಯೂನು ಕಥೆ.. ಮೂರ ಹುಡುಕಿ ಅದಕ ವಂದು ತೊಟ್ಟು ಕಾಠ್ಯವು ಮಾಡೋದು ಬ್ಯಾಡವೇನು? ವಂದು ನಾಮಕರಣ ಕಾರೈವು ಮಾಡೋದು ಬ್ಯಾಡವೇನು?” ಯಂದು ದಿನ ಬೆಳಗಾದರೂ ಕೂಗಿ ಕೇಳತೊಡಗಲು..... ಪ್ರಜೆಗಳ ಬಾಯಿಯಿಂದಲೇ ಯೀ ಮಾತು ಬರಲೀ ಅಂತ ಕಾಯುತಲಿದ್ದ