ಪುಟ:ಅರಮನೆ.pdf/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೮ ಅರಮನೆ ಜಡೆಪ್ಪ ತಾತ, ಕಾಡುಗೊಲ್ಲರೀರಯ್ಯರೇ ಮೊದಲಾದ ಮುದೇರು ಅವ್ವ ಹೊಳೆಗೊಂಟದ್ದು ಎಂದು ತೂಕವಾದರ ಆಕೆಯ ಕಂದಮ್ಮಗ ತೊಟ್ಟು ಕಾಠ್ಯವು ನಾಮಕರಣ ಮಾಡೋದು ಯಿನ್ನೊಂದು ತೂಕ ಕನರಪ್ಪಾ.. ಅಂದರು. ಅದಕ ಯಿದನು ಮಾಡಬೇಕರಪ್ಪಾ.. ಯಿದಕ ಅದನ್ನು ಮಾಡಬೇಕರಪ್ಪಾ.. ಅಂದರು.. ಅದಕ ಪ್ರಜೆಗಳು ಅದನ್ನು ಮಾಡುತ್ತೇವೆಂದರು, ಯಿದನು ಮಾಡುತೇವಂದರು. ಅದೂ ಅಲ್ಲದ ತನ ಕಯ್ಲಿ ಸಿಸುವಾಗಿರಲಕ ಆಗುತಾಯಿಲ್ಲ.. ನಾನು ನಿಮ್ಮೆಲ್ಲರಂಗ ದೊಡ್ಡವ ಅದೀನಿ. ದೊಡ್ಡವ ಆನಿ ಯಂದು ಮೋಬಯ್ಯ ರಿಪಿರಿಪಿ ಮಾಡಲಾರಂಭಿಸಿದ್ದ ಬ್ಯಾರೆ. ಕುದುರೆಡವು ಸಮುಸ್ಥಾನವುಳಿಯಲಕಂದರ, ಸಸ್ತರಾಸ್ತರಗಳಗೊಡವೆಯಿಲ್ಲದ ಸಾಮುರಾಜ್ಯವನ್ನು ಯಿಸ್ತರಿಸಬೇಕಂದರ, ತಮ್ಮ ಅವಧೂತತನವು ಯಲ್ಲಂದರಲ್ಲಿ ನೆಲೆಗೊಳ್ಳಬೇಕಂದರ, ಕುಂತಳ ಸೀಮೆಯ ಸಮಸ್ತ ಪ್ರಜಾನಿಕವು ಸಾಂಬವಿಯ ಸದ್ಭಕುತರಾಗಿರಬೇಕಂದರ ನೀನು ಕೆಲಕಾಲ ಸಿಸುವಾಗಿ ಯಿರಲಕs ಬೇಕು ದೊರೆಯೇ ಯಂದು ಪ್ರತಿ ಸರಿ ಹೇಳೇ ಹೇಳಿ ಸಾಕು ಮಾಡಿಕೊಂಡಿದ್ದರು. ಅದಕ ಅವರು ಪ್ರಜಾನಿಕದ ಮಾತಿಗೆ ಸಮ್ಮತಿಸಿದ್ದು. ಮುಂದಲ ಕಾರೈವುಗಳು ಸಾಸ್ತರ ಸಮ್ಮತವಾಗಿರಬೇಕಂದರ.... ವಂದು ಅನುವಾದ ಮೂರ ತೆಗೆದು ಗೊತ್ತು ಮಾಡಲಕ ಹೊತ್ತಿಗೆ ವುಳ್ಳೋರು, ತೆಗೆದು ಕರಾರುವಾಕ್ಕಾಗಿ ನೋಡಬಲ್ಲೋರು.. ನೋಡಿ ಹೇಳಬಲ್ಲೋರು ಕುಂತಳ ಸೀಮೆವಳಗ ಯಾರಾರುಂಟು ಯಂದರ ಫಲಾನ ಯಂಥವರುಂಟೆಂಬುವ ಸಮಾಚಾರ ತೇಲಿ ಬಂತು. ಅಂಥವರು ಯಲ್ಲಲ್ಲುಂಟು ಅಂದರ ಫಲಾನ ಅಗ್ರಹಾರಂಗಳಲಿ ಯಂಬ ಸಮಾಚಾರ ತೇಲಿ ಬಂತು. ಅಂಥ ಮರುಗಳಲಿರೋ ಅಂಥವರನು ಸಕಲ ಗವುರವಗಳಿಂದ ಕರಕೊಂಡು ಬರಬೇಕರಪ್ಪಾ ಯಂದು ಹೇಳಿ ವಾಲಿಕಾರ, ತಳವಾರರನ್ನು ಅವರಿದ್ದ ದಿಕ್ಕುಗಳಿಗೆ ಗದುಮಿದರು. ಅವರು ವಂದೊಂದು ಯಿದದಿ ನಡದು ತಲುಪಿ ಅರಿಕೆ ಮಾಡಿಕೊಳ್ಳಲು ಫಲಾನ ಸಾಸ್ತಿರಿಗಳು, ಪಂಡಿತರು ಅದು ತಮ್ಮ ಪುಣ್ಯಯಂದು ಭಾವಿಸಿ ತಿಥಿ, ನಕ್ಷತ್ರ, ಕರಣ, ಯೋಗ ಪಂಚಾಂಗಗಳನ್ನು ತಮ್ಮ ತಮ್ಮ ಬಗಲೊಳಗಿಟ್ಟುಕೊಂಡು ಘಲ್ ಘಲ್ ಯಂದು ನಾದ ಮಾಡುತಲಿದ್ದ ಸವಾರಿ ಬಂಡಿಯೊಳಗ ಕೂಕಂಡು ಸದರಿ ಪಟ್ಟಣಕ್ಕೆ ಆಗಮಿಸಿದರು ಸಿವನೇ.. ಬಂದವರೇ ಸಿಸುರೂಪೀ ಸಾಂಬವಿಯ ದರುಸನ ಪಡದು ಹೊತ್ತಿಗೆ ತೆಗೆದು ಫಲಾನ ದಿನ, ಫಲಾನ ತಿಥಿ ಫಲಾನ ನಕ್ಷತ್ರಯಂದು ಗೊತ್ತುಮಾಡಿ