ಪುಟ:ಅರಮನೆ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ನನ ಗಂಡ ಯಾಕೋ ಮಾತಾಡುವಲ್ಲ.. ಯಂದಾಕೆ ಕೂಗಲು ಅವರೊಂದೆ ಅಲ್ಲದೆ ಅನೇಕರು ತಮ್ಮ ತಮ್ಮ ಮೂಲೆಗಳಿಂದ ಬಂದರು. ಯೋನಾಗೇತವ್ವಾ.. ಯೋನು ಬುಟ್ಟಯ್ಯವ್ವಾ.. ಅನಕಂತ ಬಂದು ಮೋಬಯ್ಯನನ್ನು ನೋಡಿ ಯಿಸುಮಿತಗೊಂಡರು. ಅಲಲಲಾ ಯಂದನಕಂತ ತಮ್ಮ ತಮ್ಮ ಮೂಗುಗಳ ಮ್ಯಾಲ ಬೊಟ್ಟಿಟ್ಟುಕೊಂಡರು.. “ಯೇನು ಡವುಲಪಾss ಯೇನು ಡವುಲ, ಮಡಿದೋತರ ವುಟ್ಟವನಲ್ಲಾ ಯೇನು ಡವುಲಪ್ಪಾss ಯೇನು ಡವಲು.. ತಲೆ ಮ್ಯಾಲ ರುಮಾಲ ಬಿಗಿದವನಲ್ಲಾ.. ಯೇನು ಡವುಲಪ್ಪಾss ಯೇನು ಡವುಲು.. ಹಣೆಮಾಲ ರೂಪಾಯಿಯೋಟಗಲ ಕುಂಕುಮ ಬೊಟ್ಟಿಟ್ಟುಕೊಂಡವನಲ್ಲಾ.. ಯೇನು ಡವುಲಪ್ಪಾss ಯೇನು ಡವುಲು.. ಯಾಕಪ್ಪಾ ತಂದೆ? ಯದರಿಕೆ ಬರೋ ಹಂಗ ಕುಂತಗಂಡೀ, ನೆಲ ಯೇನಾರ ಹಿಡಕಂಡಯ್ಯಾ.. ಕುಂಡಿಗೇನಾರ ಗೆದ್ದಲು ಹತ್ತಯ್ಯಾ..ಯೇನು ಥಳಗೇರಿ ಮ್ಯಾಲ ಮುನುಸಾss ಯಿಲ್ಲಾ ಕಚ್ಚಿ ಹಿಡಿದ ಹೆಂಡತಿ ಮ್ಯಾಲ ಮುನುಸಾ... ನೀನಿಂಗ ಕುಂತಗಂಡಿರೋದು ನಮಗ ಪಾಡು ಕಾಣುವಲ್ಲದು..ನೀನು ಹಿಂಗ ಮಾತಾಡದಿರೋದು ನಮಗ ಪಾಡು ಕಾಣುವಲ್ಲದು” ಯಂದು ಅನಕಂತ ಆತನ ಸುತ್ತಮುತ್ತ ಅಷ್ಟದಿಕ್ಕುಪಾಲಕರಂಗ, ಪಂಚ ಪರಮೇಸೂರರಂಗ ನೆರೆದು ಕಣ್ಕಣ್ ಬಿಟ್ಟರು. ಬಾಯಿ ಬಾಯಿ ಬಿಟ್ಟರು. ಆತನ ಸರೀರವನ್ನು ಮುಟು ಮುಟ್ಟಲಕಂತ ಹಿಂದಕ ಮುಂದಕ ಜರುಗಾಡಿದರು. ಕೊನೀಕಿದ್ದು ಅವರೆಲ್ಲ “ಯಪ್ಪಾ ಜಗಲೂರೆವ್ವ..ಯೀತನ ಮಯ್ಯಾಗ ಹೊಕ್ಕೊಂಡಿರೋದು ದೆವ್ವಾನೋ, ದೇವರೋ.. ಅಲ್ಲಾಗಲೊಲ್ಲದು ಕಣವ್ವಾ...ಯಂದು ಹೇಳುತ ಹಿಂದ ಹಿಂದಕ ಜರುಗಲು ಆ ಸಾದ್ವಿಗೆ ದುಕ್ಕ ವುಮ್ಮಳಿಸಿ ಬಂತು. ಯೀ ನರ ಜಲುಮ ನೀರಮ್ಯಾಗಳ ಗುಳ್ಳೆಯಿದ್ದಂಗೆ.. ನಾಳೆ ಹೋಗೋದು ಯವತ್ತೆ ಹೋಗಲಿ ಯಂದು ದ್ರುಢ ನಿಶ್ಚಯ ಮಾಡಿದ ಆಕೆಯು ಯರಡು ಸೂಟ ಮುಂದಕ ಜರುಗಿ “ಅಲಲಲಾ... ತಲೆಯಿದ್ದಾಗಲೆ ಮೊಣಕಾಲ ಚಿಪ್ಪಿಗೆ ಪಟ್ಟಾನ ಕಟಬುಟ್ಟು ಕುಂತಗಂಡೀಯಲ್ಲಾ.. ವಂದುss ಪ್ಲಾ.. ಅನುವಲ್ಲೆಲ್ಲಾ.. ವಂದುಹೂಂ ಅನುವಲ್ಲೆಲ್ಲಾ.. ನಾನಿಂಗ ಹೋಗಿ ಹಂಗ ಬರೋ ಹೊತ್ತೆ ನೀನು ನಿನ್ನ ಸರೀರಾನ ಹಾದೀಲಿ ಹೋಗೋ ದೆವ್ವಕ್ಕೆ ಮಾಡ್ಕೊಂಡೀಯಾ, ಬೀದೀಲಿ ಹೋಗೋ ಮಾರಮ್ಮಗ ಮಾರಿಕೊಂಡೀಯಾ” ಯಂದು ಯದೆ ಯದೆ ಬಡುಕೊಳ್ಳುತ ಅಬ್ಬರಿಸಿದಳು... ಆಗ ಸರೀರವು ಅವುದೋ ಅಲ್ಲವೋ ಎಂಬಂತೆ ಮಿಸುಕಾಡಲಿಕ್ಕ ಸುರುವು ಮಾಡಿತು. ಕನ್ನೊಳ್ಳಿಸಿ ಸುತ್ತಮುತ್ತ ನೋಡಿತು....