ಪುಟ:ಅರಮನೆ.pdf/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೦ ಅರಮನೆ ಕೊಂಡಿರುವಂಥಾತನು.. ಯಿಪ್ಪತ್ತು ಮಣ ತೂಕದ ತನ್ನ ರಾಣಿಯನ್ನು ಹೆಗಲ ಮ್ಯಾಲ ಕುಳ್ಳಿರಿಸಿಕೊಂಡು ಸತ್ರುಪಾಳೇಯದಿಂದ ಯಿಪ್ಪತ್ತು ಗಾವುದ ದೂರ ಮೋಡಿ ರಕ್ಷಿಸಿದ೦ಥಾತನು.. ಅಂರಾಲಿ ಸಾಹೇಬನಿಗೆ ತಲೆನೋವಾಗಿದ್ದಂಥಾತನು.. ಯಿದಕ್ಕೆ ಯಲ್ಲಾರು ವಪ್ಪಲು ಗೊಂಜಾಡ್ಡರ ಅಡಿವೆಪ್ಪನ ಕಂತ್ತ ರಾಯಸ ಕೊಟ್ಟು ಕಾರಡಿಗೆ ಕಳುವಲಾಯಿತು, ಅವುಪಚಾರಿಕವಾಗಿ ಯಡ್ಡವರನಿಗೂ.. ವುಳಿದವರಿಗೂ.. ಆಹಹಹಾ ದುರುಗೇ.. ಅಹಹ ಸಾಂಬವೀss.. ನೀನು ಯಾವ ಪ್ರಕಾರವಾಗಿ ತಾಯ್ತನದ ಪವಾಡವನ್ನು ಮರೆದಾಡುತ್ತಿರುವಿ ಯಂದರೆ. ಯಂದು ಮುಂತಾಗಿ ಗಂಟಲಯ್ಯನು... * ಫಲಾನ ದಿನ ಅಗದಿ ಹತ್ತಿರ ಅಯ್ದೆ ಅನಲಿಕ್ಕೆ ಕುದುರೆಡವು ಪಟ್ಟಣಕ್ಕೆ ಯಂಟು ದಿಕ್ಕುಗಳಿಂದ ಮತ್ತೆ ಬಾಯಿತೆರೆದುಕೊಂಡ ನೂರಾರು ಹಾದಿಗಳಿಂದ ಭಕುತಾದಿ ಮಂದಿ ಸದುಭಕುತಿ ಕುತೂಹಲಭರಿತರಾಗಿ ಪ್ರವಾಹದೋಪಾದಿಯಲ್ಲಿ ಆಗಮಿಸತೊಡಗಿದರು. ಮೋಬಯ್ಯನೆಂಬ ಚಂದುಳ್ಳೆ ಕಂದನ ದರಸನ ಪಡದು ಹರುಷಚಿತ್ತರಾಗ ತೊಡಗಿದರು. ಕಂದಯ್ಯನಿಗೆ ಮುದ್ದು ಕೊಟ್ಟಲ್ಲಿ, ಅದು ಮಲಕ್ಕಂಡಿರೋ ತೊಟ್ಟಿಲು ತೂಗಿದಲ್ಲಿ ಮಕ್ಕಳಾಗಿ ಬಂಜೆ ಯಂಬ ಪಂಜರದಿಂದ ಬಿಡುಗಡೆ ಲಭಿಸುತ್ತದೆ ಯಂಬ ಕಾರಣಕ್ಕಾಗಿ ಬಂಜೆ ಯಂಬ ಹಯನಾತಿ ಬಿರುದಿಗೆ ಭಾಜನರಾಗಿದ್ದಂಥ ಸಂತಾನ ವಂಚಿತೆಯರು ಅರಮನೆಯ ಸುತ್ತಮುತ್ತ ಯಿಶೇಷವಾಗಿ ನೆರೆದಿದ್ದರು. ತೊಟ್ಟಿಲು ಕಾವ್ಯ ನಾಮಕರಣ ಮಮೋತ್ಸವವನ್ನು ಆಚರಿಸಲಕ ಯುದ್ಧೋಪಾದಿಯಲ್ಲಿ ಕೆಲಸ ಕಾರಗಳು ನಡೆಯತೊಡಗಿದವು. ಮತ್ತೊಮ್ಮೆ ರುಮ್ಮಿ ಡೊಳ್ಳು ಸನ್ನಾಯಗಳೇ ಮೊದಲಾದ ಮಂಗಳ ವಾದ್ಯಗಳನ್ನು ಆಯಾ ಮರುಗಳಿಂದ ಕರೆಯಿಸಿಕೊಂಡದ್ದು ತಡ ಆಗಲಿಲ್ಲ... ಪಟ್ಟಣದ ಪ್ರತಿಯೊಂದು ಬೀದಿ, ಮನೆಯಂಗಳಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ತಡ ಆಗಲಿಲ್ಲ... ನಾಮಕರಣ ಯಂಬ ಪಯಿತ್ರಕಾರವನ್ನು ಸಾಸ್ತರೋಕ್ತವಾಗಿ ನಡೆಸಿಕೊಡಲು ಯಂಟಾಪುರದ ಯೇದಾಂತಿ ಶಾಮಾಚಾರರನ್ನು ಅವರ ವಂಶದವರೇ ಆದ ಶ್ರೀ ಮುದ್ದುಕುಷ್ಣಮಾಚಾರರು, ಶ್ರೀಮನ್ಮಹಾ ನಾಯಕಾಚಾರ್ ಭಾಷೆಗೆ ತಪ್ಪುವವರ ಗಂಡ, ಮೊರೆಹೊಕ್ಕವರ ಕಾಯ್ಕ, ಮಾರಾಂತರ ಗೆಲ್ಲ ಊವೇ ಮೊದಲಾದ ಬಿರುದುಗಳನ್ನು ಮುಡಕೊಂಡಿದ್ದಂಥ ಬಾಗುಳಿ