ಪುಟ:ಅರಮನೆ.pdf/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೨ ಅರಮನೆ ಮಾಡಲಾರಂಭಿಸಿದರು.... ಮಂಗಳಕಾರಗಳ ಪ್ರಕ್ರಿಯೆಗೆ ಅಯ್ತಿಹಾಸಿಕ ಚಾಲನೆ ಆರಂಭಗೊಂಡಿತು. ಸುತ್ತಮುತ್ತಲ ಹಳ್ಳಗಳನ್ನೇ ಪಯಿತ್ರನದಿಗಳೆಂದು ಭಾವಿಸಿ ತಂದ ಪಂಚೋದಕದಿಂದ ಪ್ರವುಢ ಸಿಸುವಿಗೆ ಸಾಣಾ ಮಾಡಿಸಿದರು.. ಬಗೆ ಬಗೆಯ ಅರಿವೆ ವುಡಿಸಿದರು.. ಬಗೆ ಬಗೆಯ ಆಭರಣ ತೊಡಿಸಿದರು. ಸ್ವಕ್ಟಂದನಗಳ ಪೂಸಿದರು. ನಾಮಕರಣಕ ಪೂರುವದಲ್ಲಿ ಮಲ್ಲಾರು ಕಂದನ ದರುಸನ ಪಡುಕೊಳ್ಳುವಂತಾಗಲಿ ಎಂಬ ಕಾರಣಕ್ಕೆ ಮೋಬಯ್ಯನನ್ನು ಹುಟ್ಟ ಪಲ್ಲಕಿಯೊಳಗ ಕುಂಡಿರಿಸಿ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು, ಆಗ ಹೊಂಟ ಮೆರವಣಿಗೆ ಅರಮನೆ ಸೇರಿದ್ದು ಹೀಗೆ.... ಮೋಬಯ್ಯನನ್ನು ಹಾಸಿಗೇಲಿ ಮಲಗಿಸಿ ಅವಯ್ಯನ ಕಗ್ಗ ಆಡಲಕಂತ ಚಿನ್ನದ ಗಿಲಗಂಜಿಯನ ಕೊಟ್ಟರು.. ಶಾಮಾಚಾರರು ಮಂತ್ರಘೋಷಣೆ ಆರಂಭಿಸಿ ಅರತಾಸಿನ ನಂತರ ಮುಗಿಸಿದರು. ತದನಂತರ ಅದೇ ಆಚಾರರು ಯೇನು ಹೇಳಿದರೆಂದರ.... ಯಾರಾದ್ರುಮಗುವನ್ನೆತ್ತಿ ತೊಟ್ಟಿಲೊಳಗೆ ಹಾಕಿರಪ್ಪ.. ಅಯ್ಯೋ ಸಿವನ ತಾವು ಮಗುವನ ಮುಟ್ಟಿದರೆಂಗಂತ ಮಂದಿ ಹೆದರಿ ಹಿಂದಕ ಸರಕಂತು.. ಸಿವನೇ….... ಯುದ್ಧ, ಕಾಳಗಗಳಿಗೆ ಹೆದರದ ಮಂದಿ.... ಯಿಚಿತ್ರವಾಗಿ ಬಾಯಿ ತೆರೆದು ಮುಚ್ಚುತಲಿದ್ದ ಮೋಬಯ್ಯನೆಂಬ ಸಿಸುವು ವಂಚಣ ಗುಗ್ಗಳದಂತೆ ಗೋಚರವಾಗುತಯ್ದೆ ಯಂದು ಕಣ್ಣಾಲಿಗಳನ್ನು ಹಿಗ್ಗಲಿಸಿತು. ಇದೇ ಸುವಾವಕಾಸಯಂದು ಬಗೆದ ಗಂಟಲಯ್ಯನು..... ಅಹ್ವಾ ದುರೇ.. ಹಾಹಾ ಸಾಂಬವೀ ಅಂದರೆ.... ಜಡೆತಾತನು ಯಾರೊಬ್ಬರೂ ತಮ್ಮ ಮೊಂಡುಗಯ್ಕೆ ಯಾವುದೇ ಕಂದಮ್ಮನನ್ನು ಹೊಡೀಬಾರದು.. ಕಾಲಕಾಲಕ್ಕೆ ಯಳೆ ನೆತ್ತಿಗಳಿಗೆ ಯಣ್ಣೆ ಬೆಣ್ಣೆ ಲೇಪನವ ಮಾಡಬೇಕು.. ಹೊಟ್ಟೆ ತುಂಬ ಯದೆ ಹಾಲನ ಕುಡಿಸುತ್ತಿರಬೇಕು. ರೋಗ ರುಜಿಣ ಬಂದರ ಯಿಲಾಜು ಮಾಡಿಸಬೇಕು.. ನಯ ನಾಜೂಕು ಕಲಿಸಬೇಕು.. ಅಯ್ದು ತುಂಬುತ್ತಲೇ ಮೋನಾಮ ಕಲಿಸಬೇಕು.. ವಂದೊಂದು ಮಗು ಹುಟ್ಟಿತೆಂದರ ಅರಮನೆಗೆ ಅದರಷ್ಟು ತೂಕದ..