ಪುಟ:ಅರಮನೆ.pdf/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೪ ಅರಮನೆ ಮುರಿದರ ಯಿಷ್ಟು ಯಂದು ಗೊತ್ತು ಮಾಡಿದ ರುಸುಮನು ತೆತ್ತು ಭಕುತಾದಿ ತಮ್ಮ ಸೇವಾ ಕಯಿಂಕರವ ಮೆರೆದರು ಸಿವನೆ. ಆ ಸಮಯದಾದ್ಯಂತ ಮರಮರನೆ ನಲುಗುತಲಿದ್ದ ವಾದ್ಯಗಳು ವಂದಾ ಯರಡಾ.. ರುಮ್ಮಿ ಡೊಳ್ಳು ತಪ್ಪಡಿ, ಕಾಳಿ, ಸಂಖ, ಜಾಗಟೆಯೇ ಮೊದಲಾದವುಗಳು. ಅಲ್ಲಿದ್ದ ಮಂದಿಯ ಮಯ್ಯ ಯಷ್ಟೋ ಹೊತ್ತಿನ ತನಕ ಜುಮು ಜುಮು ಅಂತಾನssಯಿತ್ತು.... ಯನ್ನು ಮುಂದಕ ಯೇನು ನಡೆಯಿತೆಂದರ.. ಆಚಾರರು ಮಂತರೋಚ್ಚಾರಣ ಮಾಡಿದ ಬಳಿಕ ದಯವಸ್ತರೊಳಗ ಯಾವ ಹೆಸರನು ಯಿಡಬೇಕೆಂಬ ಜಿಗ್ನಾಸೆ ಯದ್ದಿತು. ಸಿಸುತ್ತ ಲಭ್ಯವಾದ ಕ್ಷಣವೇ ಸದರೀ ಸರೀರದಿಂದ ಮೋಬಯ್ಯ ಯಂಬ ನಾಮದೇಯವು ವುತಾರವಾಗಿರುವುದೆಂಬುವ ಜಿಗ್ನಾಸೆಯು, ವಸ್ತಿಯು ಗಂಡೋ, ಹೆಣ್ಣೆ ಯಂಬುವ ಜಿಗ್ನಾಸೆಯು, ಅದನು ಕರೆದರ ಪಾಡೆಂದು ವಬ್ಬರು ಸಿವನೇ, ಯಿದನು ಕರದರ ಪಾಡೆಂದು ಯಿನ್ನೊಬ್ಬರು ಸಿವನೇ, ಕೊನೇಕಿದ್ದು ಸಾಂಬವಿಯ ವರಪುತ್ರರತುನವಾಗಿರುವುದರಿಂದ ಸಾಂಬಯ್ಯಾ ಸಾಂಬಯ್ಯಾ... ಸಾಂಬಯ್ಯಾ.. ಯಂದು ಕರೆವುದೇ ಸೂಕ್ತ ಯಂಬುವ ಅಭಿಪ್ರಾಯವು ಬೆಣ್ಣೆವುಂಡೆಯಂತೆ ತೇಲಿ ಬಂತು. ಅದನು ಡಾಣಾಡಂಗುರವಾಗಿ ಅನಲಕಾಯ್ತದಾ..? ಕಂಬಳಿಯ ಮುಸುಕಿನೊಳಗ ತೇಲುತಾ.. ತೇಲುತಾ ಹೋಗಿ ರತುನ ಗಂಬಳಿಯೊಳಗಯಿದ್ದ ಆಚಾರರ ಕರ್ಣಕುಂಡಲದೊಳಗ ವುದುರಿಸಲಾಯಿತು. ತದನಂತರ ಅವರು ಸಿಸುವಿನ ಕಿವಿಗೂದಲೊಳಗ ಬಾಯಿಯಿಟ್ಟು “ನೀನು ಸಾಂಬಯ್ಯಾ.. ನೀನು ಸಾಂಬಯ್ಯಾ.. ನೀನು ಸಾಂಬಯ್ಯಾ...' ಯಂದು ಮೂರು ಬಾರಿ ಅಂದರು ಸಿವನೇ ಸಾಂಬವಿಯ ಮಗ ಸಾಂಬಯ್ಯಾss ಭೋಪರಾಕ್.. ಸಾಂಬಯ್ಯನ ತಾಯಿ ಸಾಂಬವೀss ಭೋಪರಾಕ್.. ಕುದುರೆಡವ ದೊರೆಯೇ.. ನಿನಗಾರು ಸರಿಯೆ.. ಸರಿ ಅಂದವರ ಹಲ್ಲು ಮುರಿಯೇ.. ಭೋ ಪರಾಕ್.... ಹೋ... ಹೋ.. ಸಾಂಬಯ್ಯಾ... ಪ್ಲಾ.. ಜ್ಞಾ... ಸಾಂಬಯ್ಯಾ... ಅನಕಂತ ಸಾವುರ ಸಂಖೇಲಿದ್ದ ಭಕುತಾದಿ ಮಂದಿ ಗುಂಪು ನರನ ಮಾಡಿತು. ಸಾಮಂತ, ಮಾಂಡಲಿಕ, ಪಟುವಾರಿ, ಜಾಗಿದ್ದಾರು ಮಂದಿ ಯೇನಿದ್ದರು ಅವರು ಬಕುತಿದೂರುವಕವಾಗಿ ಮೊಗದಿ ಸಲ್ಲಿಕೆ ಮಾಡಿದರು....